More

    ಸಂಸ್ಕಾರದಿAದ ಸಮಾಜ ಪರಿವರ್ತನೆ

    ಸೊರಬ: ಶರಣರು, ಸಜ್ಜನರ ಸಂಗದಲ್ಲಿ ತೊಡಗಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
    ಪಟ್ಟಣದ ಮುರುಘಾ ಮಠದಲ್ಲಿ ಶ್ರೀ ಕುಮಾರಪ್ರಭು ಸ್ವಾಮೀಜಿ ಸ್ಮಾರಕ ಸೇವಾ ಟ್ರಸ್ಟ್ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಸತ್ಯ, ಶುದ್ಧ ಕಾಯಕದಿಂದ ಸಂಪಾದಿಸಿದ್ದರಲ್ಲಿ ತಮಗೆ ಬೇಕಾಗುವಷ್ಟನ್ನು ಇಟ್ಟುಕೊಂಡು ಉಳಿದಿದ್ದನ್ನು ದಾನ ಮಾಡುವುದು ಶರಣ ಧರ್ಮ. ಆ ನಿಟ್ಟಿನಲ್ಲಿ ಮನುಷ್ಯ ಪ್ರಾಮಾಣಿಕವಾಗಿ ಕೆಲಸ ಮಾಡಿ ಸಂಪಾದಿಸಿದ್ದರಲ್ಲಿ ಒಂದಷ್ಟನ್ನು ಸಮಾಜದ ಬೆಳವಣಿಗೆಗೆ ನೀಡಿದಲ್ಲಿ ಆತ್ಮತೃಪ್ತಿ ಹೊಂದಬಹುದು. ಕಷ್ಟಗಳು ಮನುಷ್ಯ ಸೇರಿ ಇಡೀ ಜೀವಸಂಕುಲಕ್ಕೆ ಎದುರಾಗುತ್ತವೆ. ಆದರೆ ಮನುಷ್ಯ ಮಾತ್ರ ಕಷ್ಟಗಳನ್ನು ಸಹಿಷ್ಣುತೆಯಿಂದ ನಿವಾರಿಸಿಕೊಳ್ಳುವುದಿಲ್ಲ ಎಂಬುದು ವಿಷಾದದ ಸಂಗತಿ. ಸಂಸ್ಕಾರದಿAದ ಮನುಷ್ಯ ಹಾಗೂ ಸಮಾಜದ ಪರಿವರ್ತನೆ ಸಾಧ್ಯ ಎಂದರು.
    ಶಿವಮೊಗ್ಗ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಎಸ್.ಸ್ವಾಮಿ ಉಪನ್ಯಾಸ ನೀಡಿ, ಸನ್ಮಾರ್ಗದಿಂದ ಸಂಪಾದಿಸಿದರೆ ಮನುಷ್ಯ ಎತ್ತರಕ್ಕೆ ಬೆಳೆಯುತ್ತಾನೆ. ಗುರು ಪರಂಪರೆ ಹಾಗೂ ಚಿಂತನೆಗಳನ್ನು ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಶರಣರು ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.
    ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೃತ್ಯುಂಜಯ ಗೌಡ, ಸಂಸ್ಥಾಪಕ ಅಧ್ಯಕ್ಷ ವಿರೂಪಾಕ್ಷಪ್ಪ, ದತ್ತಿ ದಾನಿ ಹಾಲಪ್ಪ, ಎಚ್.ಮಲ್ಲಿಕಾರ್ಜುನ, ಡಿ.ಶಿವಯೋಗ, ಚಂದ್ರಶೇಖರ್ ನಿಜಗುಣ, ಈರೇಶ ಗೌಡ, ನಾಗರಾಜ ಗುತ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts