More

    ಸಮಾಜ ಸೇವೆಯೇ ಲಯನ್ಸ್ ಉದ್ದೇಶ

    ಸೊರಬ: ಲಯನ್ಸ್ ಸೇವಾ ಸಂಸ್ಥೆ ಅಂತಾರಾಷ್ಟಿçÃಯ ಮಟ್ಟದಲ್ಲಿ ಸೇವೆಗಳನ್ನು ಹಮ್ಮಿಕೊಳ್ಳುವ ಮೂಲಕ ಮನೆ ಮಾತಾಗಿದ್ದು ಆ ನಿಟ್ಟಿನಲ್ಲಿ ಸೊರಬ ಕ್ಲಬ್ ಸಹ ಕಾರ್ಯಪ್ರವೃತ್ತವಾಗಿದೆ ಎಂದು ಲಯನ್ಸ್ ೩೧೭ಸಿ ಮಾಜಿ ಜಿಲ್ಲಾ ಗೌವರ್ನರ್ ಡಾ. ಎಂ.ಕೆ.ಭಟ್ ಹೇಳಿದರು.

    ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಲಯನ್ಸ್ ಕ್ಲಬ್‌ನಿಂದ ಡಯಾಲಿಸಿಸ್ ಯಂತ್ರವೊAದನ್ನು ಜು.14 ರಂದು ಸಚಿವ ಮಧು ಬಂಗಾರಪ್ಪನವರ ಸಮ್ಮುಖದಲ್ಲಿ ಕೊಡುಗೆಯಾಗಿ ನೀಡಲಿದ್ದೇವೆ ಎಂದರು.
    ಮಾಜಿ ಜಿಲ್ಲಾ ಗೌವರ್ನರ್ ಎಚ್.ಎಸ್.ಮಂಜಪ್ಪ ಮಾತನಾಡಿ, ಸೇವಾ ಉದ್ದೇಶದಿಂದ ಲಯನ್ಸ್ ಸಂಸ್ಥೆ ಸ್ಥಾಪನೆಗೊಂಡಿದ್ದು, ಸೊರಬ ಕ್ಲಬ್ 4 ದಶಗಳಿಂದಲೂ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಸೊರಬ ಕ್ಲಬ್‌ನಿಂದ ಆಗುಂಬೆ ಲಯನ್ಸ್ ಕ್ಲಬ್‌ಗೆ ಆಂಬುಲೆನ್ಸ್ಗಾಗಿ 5.30 ಲಕ್ಷ ಅನುದಾನ ನೀಡಲಾಗಿದೆ. ನಂತರ ಸೊರಬಕ್ಕೆ ಒಂದು ಡಯಾಲಿಸಿಸ್ ಯಂತ್ರವನ್ನೂ ನೀಡುವುದು ನಮ್ಮ ಸಂಸ್ಥೆಯ ಹೆಮ್ಮೆಯಾಗಿದೆ ಎಂದರು. ಲಯನ್ಸ್ ವಲಯಾಧ್ಯಕ್ಷ ಕೆ.ಶಿವಾನಂದ, ಜಿಲ್ಲಾ ಕೋರ್ ಕ್ಯಾಬಿನೇಟ್ ಸದಸ್ಯ ಟಿ.ಆರ್. ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts