More

    ಶ್ರೀಶೈಲ ಪಾದಯಾತ್ರಿಗಳಿಗೆ ವಿವಿಧೆಡೆ ಅನ್ನದಾಸೋಹ ಸೇವೆ

    ಕವಿತಾಳ: ಪಟ್ಟಣದ ಕನಕದಾಸ ನಗರದ ಮುಖ್ಯರಸ್ತೆ ಹತ್ತಿರ ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ.

    ಇದನ್ನೂ ಓದಿ: ಕಂಬಿ ಮಲ್ಲಯ್ಯ, ಪಾದಯಾತ್ರಿಗಳಿಗೆ ಶ್ರೀಶೈಲಕ್ಕೆ ಬಿಳ್ಕೋಡುಗೆ

    ಯುಗಾದಿ ದಿನ ಆಂದ್ರಪ್ರದೇಶದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಯಲ್ಲಿ ಪಾಲ್ಗೊಳ್ಳಲು ಪಾದಯಾತ್ರೆ ಮಾಡುತ್ತಿರುವ ಬಾಗಲಕೋಟೆ, ಮುಧೋಳ,
    ವಿಜಯಪುರ, ಜಮಖಂಡಿ, ಬಾದಾಮಿ, ಗಲಗಲಿ ಸೇರಿ ವಿವಿಧ ಭಾಗದ ಭಕ್ತರು ಈ ಮಾರ್ಗವಾಗಿ ತೆರಳುವುದರಿಂದ ಭಕ್ತರ ಅನುಕೂಲಕ್ಕಾಗಿ ನೆರಳು ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

    ಬೆಳಗ್ಗೆ ಉಪಹಾರ ಮಂಡಕ್ಕಿ ಒಗ್ಗರಣೆ, ಉಪ್ಪಿಟ್ಟು, ಮಧ್ಯಾಹ್ನ ಊಟಕ್ಕೆ ಖಡಕ್ ರೊಟ್ಟಿ, ಬದನಕಾಯಿ ಪಲ್ಯ, ಗೋಧಿ ಹುಗ್ಗಿ, ಅನ್ನ ಸಾಂಬರು ಮಜ್ಜಿಗೆ ಮತ್ತು ಹಣ್ಣು ಹಾಗೂ ಸಂಜೆ ವೇಳೆಗೆ ಮಿರ್ಚಿ ಮತ್ತು ಚಹಾ ನೀಡಲಾಗುತ್ತಿದೆ.

    ಮೈ,ಕೈ ನೋವು ಕಾಲು ನೋವು ನಿವಾರಣೆಗೆ ಮಾತ್ರೆಗಳನ್ನು ಕೋಡಲಾಗುತ್ತಿದೆ. ಹನ್ನೊಂದು ವರ್ಷದಿಂದ ಐದು ದಿನಗಳವರೆಗೆ ಶ್ರೀಶೈಲ ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಭಕ್ತ ಶಿವನಪ್ಪ ದಿನ್ನಿ ಹೇಳಿದರು.

    ಸಮೀಪದ ಅಮೀನಗಡದಲ್ಲಿ ವೀರಶೈವ ಜನಾಂಗದಿಂದ ಹುಚ್ಚಬುಡ್ಡೇಶ್ವರ ದೇವಸ್ಥಾನ ಆವರಣದಲ್ಲಿ ಐದು ದಿನದವರೆಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
    ಯಾತ್ರಿಗಳ ಅನುಕೂಲಕ್ಕಾಗಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಮಾಡಿ ಔಷಧಿಯನ್ನು ವಿತರಿಸಲಾಗುತ್ತಿದೆ.

    ಗಲಗಲಿಯ ಮಾಂತೇಶ ಕಟ್ಟಿ, ಕಾಂಸಿಂಸಾಬ್, ರಮೇಶ, ಮಲ್ಲಪ್ಪ ಕಾಟೇರ, ರಿಯಾಜು, ರತ್ಮಮ್ಮ, ಸಾಯವ್ವ, ಶಾಂತಮ್ಮ ಪಾದಯಾತ್ರಿಗಳು ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೀರಶೈವ ಸಮಾಜದ ಮುದೇತಾ, ಹುಚ್ಚಪ್ಪ, ಶ್ರವಣಕುಮಾರ, ಹೊನ್ನರಡ್ಡಿ ನಂದ್ಯಾಳ, ದಶವಂತ, ಅಯ್ಯನಗೌಡ ಉಪಸ್ಥಿತರಿದ್ದರು.



    50 ವರ್ಷದಿಂದ ಬೆಳಗಾಂವಿ ಜಿಲ್ಲೆ ಗಲಗಲಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಿದ್ದೇನೆ. ನಮ್ಮ ಪೂರ್ವಜರು ಶ್ರೀಶೈಲ ಮಲ್ಲಿಕಾರ್ಜುನ ದೇವರ ಭಕ್ತರಾಗಿದ್ದರು. ನಾವು ಸಹ ಮಲ್ಲಿಕಾರ್ಜುನರನ್ನು ಆರಾಧ್ಯದೈವರನ್ನಾಗಿ ಮಾಡಿಕೊಂಡಿದ್ದೇವೆ. ನಾವು ಹೋಗುವ ಮಾರ್ಗ ಮಧ್ಯದಲ್ಲಿ ಭಕ್ತರು ನಮಗೆ ಪ್ರಸಾದ ವ್ಯವಸ್ಥೆ ಮಾಡಿಸಿ ಗೌರವಿಸುತ್ತಾರೆ.
    ಕಾಸಿಂಸಾಬ್ಗ ಲಗಲಿ ಬೆಳಗಾಂವಿ ಜಿಲ್ಲೆ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts