More

    ಸಿಂಗದೂರು ದೇಗುಲ ಸಲಹಾ ಸಮಿತಿ ರದ್ದಾಗಲಿ

    ಸೊರಬ: ಸಿಗಂದೂರು ದೇವಸ್ಥಾನಕ್ಕೆ ನೇಮಿಸಿರುವ ಉಸ್ತುವಾರಿ ಹಾಗೂ ಸಲಹಾ ಸಮಿತಿಯನ್ನು ಸರ್ಕಾರ ರದ್ದುಪಡಿಸಿ, ಧರ್ಮದರ್ಶಿ ರಾಮಪ್ಪ ಅವರ ಕುಟುಂಬದ ಅಧೀನದಲ್ಲಿ ಪೂಜಾ ಕಾರ್ಯಗಳು ನಡೆಯುವಂತೆ ಕ್ರಮ ಕೈಗೊ್ಳಬೇಕು ಎಂದು ಬ್ರಹ್ಮಶ್ರೀ ನಾರಾಯಣಗá-ರು ಧರ್ಮ ಪರಿಪಾಲನಾ ಸಂಘದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

    ಸಂಘದ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು ಮಾತನಾಡಿ, ಸಲಹಾ ಸಮಿತಿ ರದ್ದುಪಡಿಸá-ವಂತೆ ಹೈಕೋರ್ಟ್ ಈಗಾಗಲೇ ಸರ್ಕಾರಕ್ಕೆ ಆದೇಶಿಸಿದೆ. ಸರ್ಕಾರ ಹಸ್ತಕ್ಷೇಪ ಮಾಡದಂತೆ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

    ಈಡಿಗ, ದೀವರ ಸಮುದಾಯ ಹಲವು ಉಪ ಪಂಗಡಗಳನ್ನು ಒಳಗೊಂಡಿದ್ದು, ರಾಜ್ಯದಲ್ಲಿ ಸುಮಾರು 1 ಕೋಟಿ ಜನಸಂಖ್ಯೆ ಹೊಂದಿದೆ. ಸಮಾಜದ ಹಲವರಿಗೆ ಸ್ವಂತ ಜಮೀನಿಲ್ಲ. ವ್ಯವಸಾಯದಲ್ಲಿ ಪ್ರಗತಿ ಇಲ್ಲ. ಶೈಕ್ಷಣಿಕ ಹಾಗೂ ಆರ್ಥಿಕವಾಗಿಯೂ ಹಿಂದá-ಳಿದಿದೆ. ಹಾಗಾಗಿ ಈಡಿಗ, ಬಿಲ್ಲವ ಹಾಗೂ ನಾಮಧಾರಿ ಸಮಾಜವನ್ನು ಒಳಗೊಂಡಿರುವ 26 ಉಪ ಪಂಗಡಗಳ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

    ತಾಲೂಕು ಅಧ್ಯಕ್ಷ ಶಿವಕುಮಾರ್, ಗೌರವಾಧ್ಯಕ್ಷ ಕಲ್ಲಪ್ಪ, ನಿಂಗಪ್ಪ, ತ್ಯಾಗರಾಜ್, ಬಲೀಂದ್ರಪ್ಪ, ನಾಗೇಶ್, ನಾಗರಾಜ್, ಜಗದೀಶ್, ವಿಶ್ವಾಸ್, ಪುರುಷೋತ್ತಮ್ ಜಗದೀಶ್, ಕೀರ್ತಿ, ಶ್ಯಾಮ್ ಸಂಜಯ್, ತಿಮ್ಮಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts