More

    ಕರೊನಾ ಸೋಂಕಿತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ?

    ವಿಜಯಪುರ: ಕರೊನಾ ಸೋಂಕಿತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಆರೋಪ ಚಾಲುಕ್ಯ ನಗರದಲ್ಲಿ ಕೇಳಿಬಂದಿದೆ.

    ಅಕ್ಕಪಕ್ಕದ ನಿವಾಸಿಗಳ ವರ್ತನೆಯಿಂದ ಬೇಸತ್ತ ಸೋಂಕಿತನ ಪತ್ನಿಯು, ‘ನಮ್ಮನ್ನೇಕೆ ಹೀಗೆ ಕೀಳಾಗಿ ಕಾಣ್ತೀರಿ? ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕೋದು ಸರಿಯಲ್ಲ. ನಾವೂ ಮನುಷ್ಯರೆ.. ಮಾನವೀಯತೆ ಮರೆಯದಿರಿ’ ಎಂದಿದ್ದಾರೆ. ಅಲ್ಲದೆ, ತಮ್ಮನ್ನು ಸ್ಥಳೀಯ ನಿವಾಸಿಗಳು ಕೀಳಾಗಿ ಕಾಣುತ್ತಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ, ಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತು ಜಿಲ್ಲಾಧಿಕಾರಿಗೆ ಟ್ವೀಟ್ ಮೂಲಕ ಸೋಂಕಿತನ ಕುಟುಂಬಸ್ಥರು ದೂರು ನೀಡಿದ್ದಾರೆ.

    ಇದನ್ನೂ ಓದಿರಿ ತಿಥಿ ಕಾರ್ಯ ಮುಗಿದ ನಂತರ ಬಂತು ಶವ, ಕೋವಿಡ್​ ಆಸ್ಪತ್ರೆಯ ಮಹಾ ಯಡವಟ್ಟು!

    ವಿಜಯಪುರದ ಚಾಲುಕ್ಯ ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಕರೊನಾ ಪಾಸಿಟಿವ್​ ದೃಢಪಟ್ಟ ಹಿನ್ನೆಲೆಯಲ್ಲಿ
    ಅವರನ್ನು ಆ ಮನೆಯ ಮೊದಲ ಮಹಡಿಯಲ್ಲಿ ಕುಟುಂಬಸ್ಥರು ಐಸೋಲೇಷನ್​ಗೆ ಕರೊನಾ ಸೋಂಕಿತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ?ಒಳಪಡಿಸಿದ್ದಾರೆ. ಕುಟುಂಬದ ಇತರ ಆರು ಜನರಿಗೆ ಕರೊನಾ ತಪಾಸಣೆಯ ವರದಿ ನೆಗೆಟಿವ್​ ಬಂದಿದ್ದು, ಅವರೆಲ್ಲರೂ ಕೆಳ ಮನೆಯಲ್ಲಿ ವಾಸವಿದ್ದಾರೆ.

    ಆದರೂ ಈ ಮನೆಯವರಿಗೆ ಹಾಲು, ಪೇಪರ್ ಹಾಕಲು, ಮನೆ ಕೆಲಸಗಾರರಿಗೆ ಸುತ್ತಮುತ್ತಲಿನ ಜನರು ಅಡಚಣೆ ಮಾಡುತ್ತಿದ್ದಾರೆ. ಇದರಿಂದಾಗಿ ಸೋಂಕಿತನ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯ, ಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತು ಜಿಲ್ಲಾಧಿಕಾರಿಗೆ ಟ್ವೀಟ್‌ ಮಾಡಿರುವ ಕರೊನಾ ಸೋಂಕಿತನ‌ ಪತ್ನಿ, ಬೇಸರ ವ್ಯಕ್ತಪಡಿಸಿದ್ದಾರೆ.

    ನಾವು ಸೋಂಕಿನ ವಿರುದ್ಧ ಹೋರಾಡಬೇಕೆ ಹೊರತು ರೋಗಿಯ ವಿರುದ್ಧ ಅಲ್ಲ ಎಂದು ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಅಮಾನವೀಯವಾಗಿ ವರ್ತಿಸುತ್ತಿರುವುದು ವಿಪರ್ಯಾಸ. ಸೋಂಕಿತ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ವೈದ್ಯರಷ್ಟೇ ಅಲ್ಲ, ಸ್ಥಳೀಯ ನಿವಾಸಿಗಳೂ ತುಂಬಬೇಕಿದೆ.

    ಕರೊನಾ ಸೋಂಕಿತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ? । Social Exclusion for the Corona Infected Family

    ಕರೊನಾ ಸೋಂಕಿತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ? । Social Exclusion for the Corona Infected Family#Unlock3 #CoronaVirus #CoronaEffect #CoronaInfection #Sealdown #Lockdown #Vijayapura

    Posted by Dighvijay News – ದಿಗ್ವಿಜಯ ನ್ಯೂಸ್ on Saturday, August 1, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts