More

    ಉತ್ತರಾಖಂಡದಲ್ಲಿ ಹಿಮಪಾತ; ಸ್ಥಗಿತಗೊಂಡ ಹೇಮಕುಂಡ್ ಯಾತ್ರೆ

    ಚಮೋಲಿ: ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳ ಹೇಮಕುಂಡ್ ಸಾಹಿಬ್​ನ ಬಾಗಿಲುಗಳನ್ನು ಭಾರಿ ಹಿಮಪಾತದ ಕಾರಣ ಒಂದು ದಿನ ಮುಂಚಿತವಾಗಿ ಮುಚ್ಚಲಾಗಿದೆ. ‘ಚಮೋಲಿ ಜಿಲ್ಲೆಯಲ್ಲಿ 2 ಅಡಿ ಹಿಮಪಾತ ಆಗಿದೆ. ಗೋವಿಂದ್​ಘಾಟ್​ ಹಾಗೂ ಗಂಗಾರಿಯಾ ಹಿಮದಲ್ಲಿ ಸಂಪೂರ್ಣ ಮುಚ್ಚಿ ಹೋಗಿರುವ ಕಾರಣ ತೀರ್ಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಜಿಲ್ಲೆಯ ಎಸ್​ಪಿ ಶ್ವೇತಾ ಚೌಬೆ ತಿಳಿಸಿದರು.

    ಹೇಮಕುಂಡ್ ಸಾಹಿಬ್​ ಗುರುದ್ವಾರದ ಬಾಗಿಲನ್ನು ಅಕ್ಟೋಬರ್ 10 ಮಧ್ಯಾಹ್ನ 1 ಗಂಟೆಗೆ ಮುಚ್ಚಲಾಗುವುದು ಎಂದು ಗುರುದ್ವಾರದ ಟ್ರಸ್ಟ್​ನ ಉಪಾಧ್ಯಕ್ಷ ನರೇಂದ್ರ ಜೀತ್ ಬಿಂದ್ರಾ ಸೆಪ್ಟೆಂಬರ್ 9ರಂದು ತಿಳಿಸಿದ್ದರು.

    ಹೇಮಕುಂಡ್ ಸಾಹಿಬ್​ ಗುರುದ್ವಾರವನ್ನು ಜಗತ್ತಿನ ಎಲ್ಲಾ ಮೂಲೆಗಳಿಂದ ಸಾವಿರಾರು ಜನ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಚಳಿಗಾಲದಲ್ಲಿ ಹಾಗೂ ಮಳೆಗಾಲದಲ್ಲಿ ಸಂಚರಿಸುವುದು ಅಸಾಧ್ಯ ಆಗಿರುವ ಕಾರಣ ಬೇಸಿಗೆಯಲ್ಲಿ ಮಾತ್ರವೇ ಗುರುದ್ವಾರದ ಬಾಗಿಲನ್ನು ತೆರೆದಿರುತ್ತಾರೆ. ಈ ಗುರುದ್ವಾರವನ್ನು ಉತ್ತರಾಖಂಡದ 5ನೇ ಧಾಮ ಎಂದೂ ಕರೆಯುತ್ತಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts