More

    ಮಹಿಳಾ ಕ್ರಿಕೆಟ್​ ತಾರೆ ಸ್ಮೃತಿ ಮಂದನಾಗೆ 24ನೇ ಜನ್ಮದಿನದ ಸಂಭ್ರಮ

    ಬೆಂಗಳೂರು: ಸೀಮಿತ ಓವರ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಮೊದಲ ಬ್ಯಾಟುಗಾರ್ತಿ ಎಂಬ ಹೆಗ್ಗಳಿಕೆ ಹೊಂದಿರುವ ಸ್ಮೃತಿ ಮಂದನಾಗೆ ಶನಿವಾರ 24ನೇ ಜನ್ಮದಿನದ ಸಂಭ್ರಮ. 2013ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಸ್ಮೃತಿ ಈಗ ಟಿ20 ತಂಡಕ್ಕೆ ಉಪನಾಯಕಿಯಾಗಿದ್ದು, ಭವಿಷ್ಯದ ನಾಯಕಿಯಾಗಿಯೂ ಬಣ್ಣಿಸಲ್ಪಟ್ಟಿದ್ದಾರೆ. ಮುಂಬೈನ ಎಡಗೈ ಬ್ಯಾಟುಗಾರ್ತಿ ಸ್ಮೃತಿ, ಆಸ್ಟ್ರೇಲಿಯಾದ ಮಹಿಳೆಯರ ಬಿಗ್ ಬಾಷ್ ಲೀಗ್, ಇಂಗ್ಲೆಂಡ್‌ನ ಕಿಯಾ ಸೂಪರ್ ಲೀಗ್ ಸಹಿತ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಶ್ವದೆಲ್ಲೆಡೆ ಗಮನ ಸೆಳೆದಿದ್ದಾರೆ.

    ಮಹಿಳಾ ಕ್ರಿಕೆಟ್​ ತಾರೆ ಸ್ಮೃತಿ ಮಂದನಾಗೆ 24ನೇ ಜನ್ಮದಿನದ ಸಂಭ್ರಮ

    ಸ್ಮೃತಿ ಮಂದನಾ ಅವರ ತಂದೆ ಶ್ರೀನಿವಾಸ್ ಮಂದನಾ ಸಾಂಗ್ಲಿಯಲ್ಲಿ ಜಿಲ್ಲಾಮಟ್ಟದ ಕ್ರಿಕೆಟಿಗರಾಗಿದ್ದರು. ಅಣ್ಣ ಶ್ರವಣ್ ಮಹಾರಾಷ್ಟ್ರ 16 ವಯೋಮಿತಿ ತಂಡದ ಪರವಾಗಿ ಆಡಿದ್ದಾರೆ. ಅಣ್ಣನಿಂದ ಸ್ಫೂರ್ತಿ ಪಡೆದು ಸ್ಮೃತಿ 9ನೇ ವಯಸ್ಸಿನಲ್ಲೇ ಕ್ರಿಕೆಟ್ ಬ್ಯಾಟ್ ಹಿಡಿದಿದ್ದರು. 11ನೇ ವಯಸ್ಸಿನಲ್ಲೇ ಅವರು ಮಹಾರಾಷ್ಟ್ರದ 19 ವಯೋಮಿತಿ ತಂಡಕ್ಕೆ ಆಯ್ಕೆಯಾಗಿದ್ದರು. ಅವರಿಗೆ ನೆಟ್ಸ್‌ನಲ್ಲಿ ಅಣ್ಣನೇ ಬೌಲಿಂಗ್ ಮಾಡುತ್ತಿದ್ದರು ಮತ್ತು ಅದು ಈಗಲೂ ಮುಂದುವರಿದಿದೆ.

    ಮಹಿಳಾ ಕ್ರಿಕೆಟ್​ ತಾರೆ ಸ್ಮೃತಿ ಮಂದನಾಗೆ 24ನೇ ಜನ್ಮದಿನದ ಸಂಭ್ರಮ

    ಇದನ್ನೂ ಓದಿ: 3 ತಿಂಗಳಲ್ಲಿ ರಣಜಿ ಆಡಿ ಟೀಮ್​ ಇಂಡಿಯಾಗೆ ಮರಳುವೆ ಎಂದ ದಾದಾ!

    ಮಹಿಳಾ ಕ್ರಿಕೆಟ್​ ತಾರೆ ಸ್ಮೃತಿ ಮಂದನಾಗೆ 24ನೇ ಜನ್ಮದಿನದ ಸಂಭ್ರಮ

    2013ರಲ್ಲಿ ದೇಶೀಯ ಏಕದಿನ ಕ್ರಿಕೆಟ್ ಪಂದ್ಯವೊಂದರಲ್ಲಿ ಸ್ಮೃತಿ 150 ಎಸೆತಗಳಲ್ಲಿ 224 ರನ್ ಸಿಡಿಸಿ ಮಿಂಚಿದ್ದರು. ಈ ಮೂಲಕ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯರ ಮಹಿಳೆ ಎನಿಸಿದ್ದರು. ಭಾರತ ಪರ ಇದುವರೆಗೆ 51 ಏಕದಿನ ಪಂದ್ಯಗಳಲ್ಲಿ 4 ಶತಕಗಳ ಸಹಿತ 2,025 ರನ್ ಮತ್ತು 74 ಟಿ20 ಪಂದ್ಯಗಳಲ್ಲಿ 1,705 ರನ್ ಗಳಿಸಿದ್ದಾರೆ. 2 ಟೆಸ್ಟ್ ಪಂದ್ಯಗಳನ್ನೂ ಆಡಿದ್ದು, 81 ರನ್ ಬಾರಿಸಿದ್ದಾರೆ. 2018ರಲ್ಲಿ ಬಿಸಿಸಿಐ ಮತ್ತು ಐಸಿಸಿಯಿಂದ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದರು. 2017ರಲ್ಲಿ ಏಕದಿನ ವಿಶ್ವಕಪ್ ಮತ್ತು 2020ರ ಟಿ20 ವಿಶ್ವಕಪ್ ರನ್ನರ್‌ಅಪ್ ತಂಡಗಳ ಭಾಗವಾಗಿದ್ದರು. 2019ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಹಂಗಾಮಿ ನಾಯಕಿಯಾಗಿದ್ದ ಸ್ಮೃತಿ, 22 ದಿನ 229 ದಿನ ವಯಸ್ಸಿನಲ್ಲಿ ಭಾರತದ ಅತಿಕಿರಿಯ ನಾಯಕಿ ಎನಿಸಿದ್ದರು.

    ಬಾಯ್​ಫ್ರೆಂಡ್ ಬರ್ತ್‌ಡೇಗೆ ಸರ್ಪ್ರೈಸ್ ನೀಡಿದ ಜ್ವಾಲಾ ಗುಟ್ಟಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts