More

    3 ತಿಂಗಳಲ್ಲಿ ರಣಜಿ ಆಡಿ ಟೀಮ್​ ಇಂಡಿಯಾಗೆ ಮರಳುವೆ ಎಂದ ದಾದಾ!

    ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 12 ವರ್ಷಗಳ ಹಿಂದೆ 2008ರಲ್ಲಿ ಕೊನೆಯದಾಗಿ ಭಾರತ ತಂಡದ ಪರ ಆಡಿದ್ದರು. 2012ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ನಿವೃತ್ತಿ ಹೊಂದಿದ್ದರು. ಆದರೆ 3 ತಿಂಗಳ ಕಾಲ ತರಬೇತಿ ಪಡೆಯಲು ಅವರಿಗೆ ಅವಕಾಶ ನೀಡಿದರೆ, 3 ರಣಜಿ ಪಂದ್ಯಗಳಲ್ಲಿ ಬ್ಯಾಟಿಂಗ್ ಫಾರ್ಮ್ ಸಾಬೀತುಪಡಿಸಿ ಮತ್ತೆ ಭಾರತೀಯ ಟೆಸ್ಟ್ ತಂಡಕ್ಕೆ ಮರಳುವ ವಿಶ್ವಾಸವನ್ನು ಗಂಗೂಲಿ ಈಗಲೂ ಹೊಂದಿದ್ದಾರಂತೆ! ಬಂಗಾಳಿ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಗಂಗೂಲಿ ಈ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    ತಮ್ಮ ವೃತ್ತಿಜೀವನ ಅಕಾಲಿಕವಾಗಿ ಅಂತ್ಯಗೊಂಡಿತು ಎಂದು ಈಗಲೂ ನಂಬಿರುವ 48 ವರ್ಷದ ಗಂಗೂಲಿ, ‘ನನಗೆ ಇನ್ನೂ 2 ಏಕದಿನ ಸರಣಿಗಳಲ್ಲಿ ಆಡಲು ಅವಕಾಶ ನೀಡಿದ್ದರೆ, ನಾನು ಇನ್ನಷ್ಟು ರನ್‌ಗಳನ್ನು ಸಿಡಿಸುತ್ತಿದ್ದೆ. ನಾನು 2008ರಲ್ಲಿ ನಾಗ್ಪುರದಲ್ಲಿ ನಿವೃತ್ತಿ ಹೊಂದದೇ ಇದ್ದಿದ್ದರೆ, ಇನ್ನೆರಡು ಟೆಸ್ಟ್ ಸರಣಿಗಳಲ್ಲೂ ಆಡುತ್ತಿದ್ದೆ. ಈಗಲೂ ನನಗೆ 6 ತಿಂಗಳ ಕಾಲ ತರಬೇತಿ ಪಡೆಯಲು ಅವಕಾಶ ಕಲ್ಪಿಸಿದರೆ, 3 ರಣಜಿ ಪಂದ್ಯಗಳಲ್ಲಿ ಆಡಲು ಅವಕಾಶ ನೀಡಿದರೆ ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೆ ರನ್ ಗಳಿಸಬಲ್ಲೆ. ನನಗೆ 6 ತಿಂಗಳು ಕೂಡ ಅಗತ್ಯವಿಲ್ಲ, 3 ತಿಂಗಳು ಸಮಯ ನೀಡಿದರೂ, ಸಾಕಷ್ಟು ರನ್ ಹರಿಸಿ ತೋರಿಸಬಲ್ಲೆ’ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ – ನತಾಶಾ ಕುಟುಂಬಕ್ಕೆ ಹೊಸ ಅತಿಥಿಗಳು..!

    ‘ನನಗೆ ಮತ್ತೆ ಆಡಲು ಅವಕಾಶ ಸಿಗದಿರಬಹುದು. ಆದರೆ ನನ್ನೊಳಗಿನ ನಂಬಿಕೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ’ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಹೇಳಿದ್ದಾರೆ. 2007-08ರಲ್ಲಿ ಉತ್ತಮ ನಿರ್ವಹಣೆ ತೋರಿದ ನಡುವೆಯೂ ಗಂಗೂಲಿ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿತ್ತು. ‘ಆ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ ಹೊರತಾಗಿಯೂ ನನ್ನನ್ನು ತಂಡದಿಂದ ಕೈಬಿಡಲಾಗಿತ್ತು. ನನಗೆ ಅದನ್ನು ನಂಬಲು ಸಾಧ್ಯವಾಗಿರಲಿಲ್ಲ. ಎಷ್ಟೇ ಉತ್ತಮ ನಿರ್ವಹಣೆ ತೋರಿದರೂ, ವೇದಿಕೆಯನ್ನೇ ನಮ್ಮಿಂದ ಕಿತ್ತುಕೊಂಡ ಬಳಿಕ ಏನನ್ನೂ ಸಾಬೀತುಪಡಿಸಿ ತೋರಿಸಲಾಗದು. ನನಗೂ ಅದೇ ಆಯಿತು’ ಎಂದು ಗಂಗೂಲಿ ಹೇಳಿದ್ದಾರೆ.

    2005ರಲ್ಲಿ ಗ್ರೆಗ್​ ಚಾಪೆಲ್ ಕೋಚ್ ಆಗಿದ್ದ ಸಮಯದಲ್ಲೂ ಗಂಗೂಲಿ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ಆದರೆ ಅವರು ಬಳಿಕ 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ವಾಪಸ್ ಆಗಿದ್ದರು. ಬಳಿಕ ರನ್ ಪ್ರವಾಹ ಹರಿಸಿದ್ದ ಅವರನ್ನು ಕಂಡು ಸಚಿನ್ ತೆಂಡುಲ್ಕರ್ ಕೂಡ, ನಾನು ನೋಡಿದ ಗಂಗೂಲಿಯ ಅತ್ಯುತ್ತಮ ಆಟವಿದು ಎಂದಿದ್ದರು. ಆದರೆ 2007-08ರ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಗೆ ರಾಹುಲ್ ದ್ರಾವಿಡ್ ಜತೆಗೆ ಗಂಗೂಲಿ ಅವರನ್ನೂ ಕೈಬಿಡಲಾಗಿತ್ತು. ವರ್ಷದ ಬಳಿಕ ಅವರು ಟೆಸ್ಟ್ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದಿದ್ದರು. ಅವರು 113 ಟೆಸ್ಟ್‌ಗಳಲ್ಲಿ 42.17ರ ಸರಾಸರಿಯಲ್ಲಿ 7,212 ರನ್ ಮತ್ತು 311 ಏಕದಿನ ಪಂದ್ಯಗಳಲ್ಲಿ 41.02ರ ಸರಾಸರಿಯಲ್ಲಿ 11,363 ರನ್ ಗಳಿಸಿದ್ದಾರೆ. ಭಾರತ ಪರ ಅತ್ಯಧಿಕ ರನ್ ಗಳಿಸಿದ ಎಡಗೈ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯನ್ನು ಈಗಲೂ ಹೊಂದಿದ್ದಾರೆ.

    3ಟಿ ಕ್ರಿಕೆಟ್ ಪಂದ್ಯ ಭಾರತದಲ್ಲೂ ನೇರಪ್ರಸಾರ, ಎಷ್ಟೊತ್ತಿಗೆ ಆರಂಭ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts