More

    ರಾಹುಲ್ ಗಾಂಧಿಯವರ ಮಾಜಿ ಕ್ಷೇತ್ರ ಅಮೇಠಿಯ ಗೌರಿಗಂಜ್​​ ರೈಲ್ವೆ ನಿಲ್ದಾಣದ ಚಿತ್ರ ಅಂದು-ಇಂದು!

    ನವದೆಹಲಿ: ಕೇಂದ್ರ ಸಚವೆ ಸ್ಮೃತಿ ಇರಾನಿ ಇಂದು ಮಾಡಿದ ಟ್ವೀಟ್ ಒಂದು ದೇಶದ ಗಮನಸೆಳೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ತವರಿನಂತಿದ್ದ ಅಮೇಠಿ ಕ್ಷೇತ್ರ ದಶಕಗಳ ಕಾಲ ಹಿಂದುಳಿದ ಬಗೆಯನ್ನು ಸ್ಮೃತಿ ಇರಾನಿಯವರ ಟ್ವೀಟ್ ಪರೋಕ್ಷವಾಗಿ ಬಿಂಬಿಸಿದೆ.

    ಅವರ ಟ್ವೀಟ್​ನಲ್ಲಿರುವ ಅಂಶಗಳಿಷ್ಟೆ- ಗೌರಿ ಗಂಜ್ ರೈಲ್ವೆ ನಿಲ್ದಾಣದ ಹಳೆಯ ಚಿತ್ರ ಮತ್ತು ಅಭಿವೃದ್ಧಿ ಹೊಂದಿದ ಈಗಿನ ಚಿತ್ರಗಳಿವೆ. ಜತೆಗೆ ಸಚಿವ ಸಂಪುಟ ಸಹೋದ್ಯೋಗಿ ಪಿಯೂಷ್ ಗೋಯೆಲ್ ಅವರಿಗೆ ಬದಲಾವಣೆಗೆ ಅಗತ್ಯ ಕ್ರಮ ತೆಗೆದುಕೊಂಡದ್ದಕ್ಕಾಗಿ ಧನ್ಯವಾದವನ್ನು ಅವರು ಸಮರ್ಪಿಸಿದ್ದಾರೆ.

    ಇದನ್ನೂ ಓದಿ: ಗ್ರಾಪಂ ಚುನಾವಣೆ ಅಕ್ಟೋಬರ್​ನಲ್ಲಿ?

    ರಾಹುಲ್ ಗಾಂಧಿ 1999ರಿಂದ 2019ರ ತನಕವೂ ಅಮೇಠಿಯ ಸಂಸದರಾಗಿದ್ದರು. ಅವರ ಪಕ್ಷದ ಸರ್ಕಾರವೇ 2014ರ ತನಕ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿತ್ತು. 2014ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ರಾಹುಲ್ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧಿಸಿದ್ದರಾದರೂ ಸೋತಿದ್ದರು. ಆದರೂ ಪಟ್ಟು ಬಿಡದೆ 2019 ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದು ಈಗ ಇತಿಹಾಸ. ಸೋಲಿನ ಭೀತಿಯಿಂದ ರಾಹುಲ್ ಗಾಂಧಿ ಅಮೇಠಿಯ ಹೊರತಾಗಿ ಕೇರಳದ ವಯನಾಡ್​ನಿಂದ ಸ್ಪರ್ಧಿಸಿದ್ದರು. ಅಲ್ಲಿ ಅವರು ಗೆಲುವು ದಾಖಲಿಸಿ ಸಂಸದರಾಗಿ ಮುಂದುವರಿದ್ದಾರೆ.

    ಆದಾಗ್ಯೂ, ಅಮೇಠಿ ಜನರ ಕೈಬಿಟ್ಟಿಲ್ಲ ಎಂದು ಹೇಳುತ್ತಿರುವ ರಾಹುಲ್ ಗಾಂಧಿ, ಲಾಕ್​ಡೌನ್ ಅವಧಿಯಲ್ಲಿ ಏಪ್ರಿಲ್ ತಿಂಗಳಲ್ಲಿ 12,000 ಸ್ಯಾನಿಟೈಸರ್​ಗಳು, 20,000 ಫೇಸ್​ಮಾಸ್ಕ್​, 10,000 ಸೋಪುಗಳನ್ನು ವಿತರಿಸಿದ್ದಾಗಿ ವರದಿ ಇದೆ. (ಏಜೆನ್ಸೀಸ್)

    ವಯಸ್ಸಾದ ಮಹಿಳೆ ಎಂದೂ ನೋಡದೆ ಫೇಸ್​ಬುಕ್​ ಫ್ರೆಂಡ್ ಹೀಗಾ ವಂಚಿಸೋದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts