More

    ರಾಹುಲ್ ಗಾಂಧಿಗೆ ಧೈರ್ಯವಿದ್ದರೆ ಅಮೇಥಿಯಿಂದ ಸ್ಪರ್ಧಿಸಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲ್​

    ಲಖೌನ: ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿದೆ. ದೇಶದಾದ್ಯಂತ ಎಲೆಕ್ಷನ್‌ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಉತ್ತರ ಪ್ರದೇಶದ ಅಮೇಥಿ ಲೋಕಸಭಾ ರಾಜಕೀಯ ಕ್ಷೇತ್ರ ಇದರಿಂದ ಹೊರತಾಗಿಲ್ಲ.

    ಇದನ್ನೂ ಓದಿ:ಮೋದಿ, ಅಮಿತ್​ ಶಾ ಜೊತೆ ತಡರಾತ್ರಿ ಮಾತುಕತೆ? ಆಜಾದ್ ಆರೋಪಕ್ಕೆ ಫಾರೂಕ್ ಅಬ್ದುಲ್ಲಾ ವಾಗ್ದಾಳಿ

    ಕೇಂದ್ರ ಸಚಿವೆ ಹಾಗೂ ಹಾಲಿ ಸಂಸದೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತಮ್ಮ ಹಿಂದಿನ ಕ್ಷೇತ್ರ ಅಮೇಥಿಯಿಂದ ಸ್ಪರ್ಧಿಸುವಂತೆ ಸೋಮವಾರ ಸವಾಲು ಹಾಕಿದ್ದಾರೆ.

    ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಅಮೇಥಿಯ ಮಾಜಿ ಸಂಸದ ರಾಹುಲ್​ ಗಾಂಧಿ ಅವರು ಅಮೇಥಿಯ ಜನರನ್ನು ಅವಮಾನಿಸಿದ್ದಾರೆ. 500 ವರ್ಷಗಳ ಹೋರಾಟದ ಬಳಿಕ ಸಿಕ್ಕ ಗೆಲುವಿನಲ್ಲಿ ಆಯೋಧ್ಯೆಯಲ್ಲಿ ನಿರ್ಮಾಣವಾದ ರಾಮ್ ಲಲ್ಲಾ ಅವರ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ಗಾಂಧಿ ಕುಟುಂಬ ತಿರಸ್ಕರಿಸಿ ಅವಮಾನ ಮಾಡಿದೆ ಎಂದು ಹೇಳಿದರು.

    ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಧೈರ್ಯವಿದ್ದರೆ ಈ ಬಾರಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಲಿ ನಾನು ಅವರ ವಿರುದ್ಧ ಏಕಾಂಗಿಯಾಗಿ ಸ್ಪರ್ಧಿಸುವುತ್ತೇನೆ ಎಂದು ರಾಹುಲ್​ ಗಾಂಧಿಗೆ ಸವಾಲ್​ ಹಾಕಿದರು.

    ರಾಹುಲ್ ಗಾಂಧಿ ವಿರುದ್ಧ ಇರಾನಿ ವಾಗ್ದಾಳಿ: ಭಾರತ್ ಜೋಡೋ ನ್ಯಾಯ ಯಾತ್ರೆಯ ವಾಹನಗಳು ಆಮೇಥಿ ನಗರಕ್ಕೆ ಆಗಮಿಸಿದಾಗ ಯಾರೊಬ್ಬರು ಇರಲಿಲ್ಲ. ಖಾಲಿ ಬೀದಿಗಳು ಅವರನ್ನು ಸ್ವಾಗತಿಸಿದವು. ಅಮೇಥಿಯ ಜನರಿಗೆ ರಾಹುಲ್ ಗಾಂಧಿ ಮೇಲೆ ವಿಶ್ವಾಸವಿಲ್ಲ ಎಂದು ಕೇಂದ್ರ ಸಚಿವರು ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದರು.

    ಹೂಡಿಕೆದಾರರ ಶೃಂಗಸಭೆಯಲ್ಲಿ ಅಮೇಥಿಗೆ 6523 ಕೋಟಿ ಬಂಡವಾಳ ಲಭಿಸಿದೆ. ಗಾಂಧಿ ಕುಟುಂಬದ ವಿರುದ್ಧ ಅಮೇಥಿ ಜನರ ಆಕ್ರೋಶ ಸ್ಪಷ್ಟವಾಗಿ ತಿಳಿಯುತ್ತಿದೆ. ಇಂದು ಅವರು (ರಾಹುಲ್ ಗಾಂಧಿ) ಆಗಮಿಸಿದಾಗ ಖಾಲಿ ಬೀದಿಗಳಲ್ಲಿ ಅವರನ್ನು ಸ್ವಾಗತಿಸಲಾಯಿತು. ಅಮೇಥಿಯಲ್ಲಿ ನಾನು ಅನೇಕ ಜನರ ಬೆಂಬಲವನ್ನು ಹೊಂದಿದ್ದ ಅಭ್ಯರ್ಥಿಯ ವಿರುದ್ಧ ಹೋರಾಡಿದೆ. ಗಾಂಧಿ ಕುಟುಂಬಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಖಾಲಿ ಬೀದಿಗಳು ತೋರಿಸುತ್ತಿವೆ. ಎಂದು ಇರಾನಿ ಹೇಳಿರುವುದಾಗಿ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಫಾರೂಕ್, ಒಮರ್ ಅಬ್ದುಲ್ಲಾ ರಾತ್ರಿ ಮೋದಿ, ಅಮಿತ್ ಜೊತೆ ರಹಸ್ಯ ಮಾತುಕತೆ: ಗುಲಾಂ ನಬಿ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts