More

    ಹೊಗೆಮುಕ್ತ ಗ್ರಾಮ ಕೇಂದ್ರದ ಕನಸು

    ಚಿಕ್ಕೋಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ದೇಶವನ್ನು ಹೊಗೆಮುಕ್ತ ಗ್ರಾಮವನ್ನಾಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು 8 ಕೋಟಿ ಜನರಿಗೆ ಉಜ್ವಲಾ ಗ್ಯಾಸ್ ಸಿಲಿಂಡರ್ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ವಿತರಿಸಲಾಗಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

    ತಾಲೂಕಿನ ಚಿಕಲವಾಳ ಗ್ರಾಮದಲ್ಲಿ ಸೋಮವಾರ ಉಜ್ವಲಾ ಯೋಜನೆಯಡಿ 62 ಉಚಿತ ಗ್ಯಾಸ್ ಸಿಲೆಂಡರ್ ವಿತರಿಸಿ ಮಾತನಾಡಿದರು. ಚಿಕಲವಾಳ ಗ್ರಾಮದಲ್ಲಿ 650 ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಗಿದ್ದು, ಉಳಿದವರಿಗೂ ವಿತರಿಸಲಾಗುವುದು ಎಂದರು.

    ಕೇಂದ್ರ ಸರ್ಕಾರ ಮಹಿಳೆಯರಿಗೆ ಮನೆಯಲ್ಲಿಯೇ ಕುಳಿತು ಸಣ್ಣ ಪುಟ್ಟ ಉದ್ಯೋಗ ಕೈಗೊಳ್ಳಲು 1 ಲಕ್ಷ ರೂಪಾಯಿಯಿಂದ 1 ಕೋಟಿ ರೂ. ವರೆಗೆ ಸಾಲ ಹಾಗೂ ಪ್ರತಿಶತ 35 ಸಬ್ಸಿಡಿ ನೀಡುತ್ತಿದೆ. ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.

    ಗ್ರಾಪಂ ಅಧ್ಯಕ್ಷ ಧನಾಜಿ ಪಾಟೀಲ, ಉಪಾಧ್ಯಕ್ಷ ಸವುಬಾಯಿ ಗಾವಡೆ, ಹಾಲಶುಗರ್ಸ್ ಸಂಚಾಲಕ ವಿನಾಯಕ ಪಾಟೀಲ, ಗ್ರಾಪಂ ಸದಸ್ಯ ಸಚಿನ ಮದನೆ, ನಾಮದೇವ ಕುರಾಡೆ, ಶಿವರಾಜು ಕುಂಬಾರ, ಸುರೇಶ ನಾಯಕ, ಪ್ರಮೋದ ದೇಸಾಯಿ, ನಂದಕುಮಾರ ಪವಾರ, ಪುಷ್ಕರ ತರಾಳೆ, ಗಜೇಂದ್ರ ತರಾಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts