More

    ಕರ್ನಾಟಕಕ್ಕೆ ರೋಚಕ ಗೆಲುವು ; ಸೂಪರ್ ಓವರ್‌ನಲ್ಲಿ ಬಂಗಾಳಕ್ಕೆ ಶಾಕ್

    ನವದೆಹಲಿ: ಹಲವು ನಾಟಕೀಯ ತಿರುವುಗಳಿಗೆ ಸಾಕ್ಷಿಯಾದ ಹಣಾಹಣಿಯಲ್ಲಿ ರೋಚಕ ಗೆಲುವು ಕಂಡ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯ ಸೆಮಿಫೈನಲ್‌ಗೇರಿದೆ. 2 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಎಂಟರ ಘಟ್ಟದ ಪಂದ್ಯದಲ್ಲಿ ಬಂಗಾಳ ತಂಡವನ್ನು ಸೂಪರ್ ಓವರ್‌ನಲ್ಲಿ ಮಣಿಸಿ ಉಪಾಂತ್ಯಕ್ಕೇರಿತು. ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಮನೀಷ್ ಪಾಂಡೆ ಪಡೆ ವಿದರ್ಭ ತಂಡವನ್ನು ಎದುರಿಸಲಿದೆ.

    ಅರುಣ್ ಚೇಟ್ಲೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 5 ವಿಕೆಟ್‌ಗೆ 160 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಬಂಗಾಳ ತಂಡ ಕಡೇ ಕ್ಷಣದವರೆಗೆ ಹೋರಾಡಿ 8 ವಿಕೆಟ್‌ಗೆ 160 ರನ್‌ಗಳಿಸಿ ಟೈ ಸಾಧಿಸಿತು. ಫಲಿತಾಂಶ ನಿರ್ಣಾಯಕ್ಕಾಗಿ ನಡೆದ ಸೂಪರ್ ಓವರ್‌ನಲ್ಲಿ ಕರ್ನಾಟಕ ಸುಲಭ ಗೆಲುವು ಸಾಧಿಸಿತು. ಕಡೇ ಎಸೆತದಲ್ಲಿ ರನೌಟ್ ಮಾಡುವ ಮೂಲಕ ಕೈಜಾರುತ್ತಿದ್ದ ಪಂದ್ಯವನ್ನು ರೋಚಕವಾಗಿ ಟೈಗೊಳಿಸಿದ ಮನೀಷ್ ಪಾಂಡೆ, ಬಳಿಕ ಸೂಪರ್‌ನಲ್ಲೂ ಭರ್ಜರಿ ಸಿಕ್ಸರ್ ಸಿಡಿಸಿ ಗೆಲುವಿನ ಹೀರೋ ಎನಿಸಿದರು.

    *ಬಂಗಾಳಕ್ಕೆ ಸೂಪರ್ ಓವರ್ ಆಘಾತ
    ಫಲಿತಾಂಶ ನಿರ್ಣಯಕ್ಕಾಗಿ ನಡೆದ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಂಗಾಳ ತಂಡ 4 ಎಸೆತ ಎದುರಿಸಲಷ್ಟೇ ಶಕ್ತವಾಯಿತು. ಸ್ಪಿನ್ನರ್ ಕೆಸಿ ಕಾರ್ಯಪ್ಪ ಬೌಲಿಂಗ್‌ನಲ್ಲಿ 5 ರನ್ ಗಳಿಸಿದ ಎರಡೂ ವಿಕೆಟ್ ಕೈಚೆಲ್ಲಿತು. ಬಳಿಕ ಕರ್ನಾಟಕದ ಪರ ನಾಯಕ ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್ ಕ್ರೀಸ್‌ಗಿಳಿದರು. ಮುಕೇಶ್ ಕುಮಾರ್‌ರ ಮೊದಲ ಎಸೆತದಲ್ಲಿ 2 ರನ್ ಕಸಿದ ಪಾಂಡೆ, 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ರಾಜ್ಯ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದರು.

    ಕರ್ನಾಟಕ: 5 ವಿಕೆಟ್‌ಗೆ 160 (ಕರುಣ್ ನಾಯರ್ 55*, ರೋಹನ್ ಕದಂ 30, ಮನೀಷ್ ಪಾಂಡೆ 29, ಅಭಿನವ್ ಮನೋಹರ್ 19, ಮುಕೇಶ್ ಕುಮಾರ್ 34ಕ್ಕೆ 1, ಆಕಾಶ್ ದೀಪ್ 23ಕ್ಕೆ 1, ಸಯಾನ್ ಘೋಷ್ 27ಕ್ಕೆ 1), ಬಂಗಾಳ: 8 ವಿಕೆಟ್‌ಗೆ 160 (ವೃತ್ತಿಕ್ ಚಟರ್ಜಿ 51, ಶ್ರೀವತ್ಸ ಗೋಸ್ವಾಮಿ 22, ಕೈಫ್ ಅಹ್ಮದ್ 20, ರಿತ್ವಿಕ್ ಚೌಧರಿ 36*, ದರ್ಶನ್ ಎಂಬಿ 26ಕ್ಕೆ 3, ಜೆ.ಸುಚಿತ್ 24ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts