More

    ಸ್ಮಾರ್ಟ್‌ಫೋನ್ ದಾನ ಆಂದೋಲನ ಆರಂಭ

    ಉಡುಪಿ: ಕೋವಿಡ್-19 ಸಂಕಷ್ಟದಿಂದ ಶಾಲಾ, ಕಾಲೇಜುಗಳು ಇನ್ನೂ ತೆರೆಯದೆ ಇರುವುದರಿಂದ ಆನ್‌ಲೈನ್ ತರಗತಿಗಳು ಆರಂಭವಾಗಿವೆ. ಆದರೆ ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಕೆಲವು ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್ ಇಲ್ಲದೆ ಸಮಸ್ಯೆಯಾಗುತ್ತಿದೆ. ಗ್ರಾಮೀಣ ಭಾಗದ ಮಕ್ಕಳು ಆನ್‌ಲೈನ್ ತರಗತಿಯಿಂದ ವಂಚಿತರಾಗದಂತೆ ಮಾಡಲು ಉಡುಪಿಯ ಮೂವರು ವಿದ್ಯಾರ್ಥಿನಿಯರು ಸ್ಮಾರ್ಟ್‌ಫೋನ್ ದಾನ ಆಂದೋಲನ ಆರಂಭ ಮಾಡುವ ಮೂಲಕ ನೆರವಾಗುತ್ತಿದ್ದಾರೆ.
    ಬ್ರಹ್ಮಾವರ ಲಿಟ್ಲ್‌ರಾಕ್ ವಿದ್ಯಾಸಂಸ್ಥೆಯ ಪಿಯುಸಿ ವಿದ್ಯಾರ್ಥಿನಿ ಬ್ರಹ್ಮಗಿರಿಯ ಅವನಿ ಶೆಟ್ಟಿ, ಬನ್ನಂಜೆಯ ಕೇಕಿ ಆರ್.ತಲ್ಲೂರು, ಬೆಂಗಳೂರಿನ ಟಿಐಎಸ್‌ಬಿ ಸಂಸ್ಥೆಯ ಅದಿತ್ರಿ ಕಾಮತ್ ಅಜ್ಜರಕಾಡು ಗ್ರಾಮೀಣ ಭಾಗದ ಮಕ್ಕಳ ಆನ್‌ಲೈನ್ ತರಗತಿಗೆ ನೆರವಾಗುತ್ತಿದ್ದಾರೆ. ತಮ್ಮ ಕೈಯಿಂದ ಸ್ವಲ, ಮನೆಯವರಿಂದ ಸ್ವಲ್ಪ ಹಣ ಪಡೆದು ಕೆಲವು ಮಕ್ಕಳಿಗೆ ಮೊಬೈಲ್‌ಗಳನ್ನು ನೀಡಿದ್ದಾರೆ.
    ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದಲ್ಲಿ ‘ವಿ ನೀಡ್ ಯುವರ್ ಹೆಲ್ಪ್’ ಎಂಬ ಸಂದೇಶ ಪೋಸ್ಟ್ ಮಾಡಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೆಚ್ಚು ದಾನಿಗಳ ನೆರವು ಸಿಕ್ಕಿದರೆ ಸ್ಮಾರ್ಟ್‌ಫೋನ್ ದಾನ ಯೋಜನೆಯನ್ನು ಬೇರೆ ಶಾಲೆಗಳ ವಿದ್ಯಾರ್ಥಿಗಳಿಗೂ ವಿಸ್ತರಿಸುವ ಚಿಂತನೆಯಿದೆ ಎನ್ನುತ್ತಾರೆ ವಿದ್ಯಾರ್ಥಿನಿಯರು.

    ಖಾಸಗಿ ಶಾಲೆ ವಿದ್ಯಾರ್ಥಿಗಳಿಗಿರುವ ಸೌಲಭ್ಯ ಸರ್ಕಾರಿ, ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಇಲ್ಲ. ಬೋರ್ಡ್ ಪರೀಕ್ಷೆ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆನ್‌ಲೈನ್ ತರಗತಿಗೆ ಪೂರಕವಾಗಿ ಸ್ಮಾರ್ಟ್‌ಫೋನ್ ಕೊಡುಗೆಯಾಗಿ ನೀಡಲು ಮುಂದಾದೆವು.
    | ಅವನಿ ಶೆಟ್ಟಿ ಬ್ರಹ್ಮಗಿರಿ ಬ್ರಹ್ಮಾವರ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ವಿದ್ಯಾರ್ಥಿನಿ

    10 ವಿದ್ಯಾರ್ಥಿಗಳಿಗೆ ಕೊಡುಗೆ: ವಿದ್ಯಾರ್ಥಿನಿಯರು ಚೇರ್ಕಾಡಿ ಶಾರದಾ ಹೈಸ್ಕೂಲ್‌ಗೆ ತೆರಳಿ ಸಮೀಕ್ಷೆ ನಡೆಸಿದ್ದು, ಎಸ್ಸೆಸ್ಸೆಲ್ಸಿಯ 70 ಮಕ್ಕಳ ಪೈಕಿ 10 ವಿದ್ಯಾರ್ಥಿಗಳಲ್ಲಿ ಮೊಬೈಲ್ ಇರಲಿಲ್ಲ. ವಿದ್ಯಾರ್ಥಿನಿಯರು ತಮ್ಮ ಪಾಕೆಟ್ ಮನಿ ಬಳಸಿಕೊಂಡು, ಮನೆಯವರ ಮನವೊಲಿಸಿ ಚೇರ್ಕಾಡಿ ಶಾಲೆಯ 10 ಮಕ್ಕಳಿಗೆ ಮೊಬೈಲ್ ಕೊಡಿಸಲು 46 ಸಾವಿರ ರೂ. ಸಂಗ್ರಹಿಸಿ ಸ್ಮಾರ್ಟ್‌ಫೋನ್ ದಾನ ಆಂದೋಲನದ ಪ್ರಯುಕ್ತ ಶಾರದಾ ಪ್ರೌಢಶಾಲೆಯ 10 ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಿಸಿದ್ದಾರೆ. ಈ ಸಂದರ್ಭ ಶಾಲಾಡಳಿತ ಮಂಡಳಿ ಹಿರಿಯ ಉಪಾಧ್ಯಕ್ಷ ಬಿ.ಮಹಾಬಲೇಶ್ವರ ಉಡುಪ, ಆಡಳಿತ ಮಂಡಳಿ ಗೌರವಾಧ್ಯಕ್ಷ ಪಿ.ರಾಜೀವ ಆಳ್ವ, ಕಾರ್ಯದರ್ಶಿ ಎಚ್.ಸುದರ್ಶನ ಹೆಗ್ಡೆ, ಕೋಶಾಧಿಕಾರಿ ಎಚ್.ಶಶಿಧರ ಶೆಟ್ಟಿ, ಆಡಳಿತಾಧಿಕಾರಿ ದಿನಕರ ಆರ್.ಶೆಟ್ಟಿ, ಉಡುಪಿಯ ಕೀರ್ತಿ ಕನ್‌ಸ್ಟ್ರಕ್ಷನ್‌ನ ಸುಧೀರ್ ಶೆಟ್ಟಿ, ಮುಖ್ಯಶಿಕ್ಷಕ ಮಂಜುನಾಥ ನಾಯ್ಕ, ಸಹ ಶಿಕ್ಷಕ ಜಯಪ್ರಕಾಶ ಶೆಟ್ಟಿ, ದಿನಕರ ಆರ್.ಶೆಟ್ಟಿ, ಅಧ್ಯಾಪಕ ವೃಂದ ಮತ್ತು ಪಾಲಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts