More

    ಧರ್ಮಶಾಲಾದಲ್ಲಿ ಆಂಗ್ಲರಿಗೆ ಇಂದು ಬಾಂಗ್ಲಾದೇಶ ಸವಾಲು : ಔಟ್‌ಫೀಲ್ಢ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಟ್ಲರ್

    ಧರ್ಮಶಾಲಾ: ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್‌ಗಳಿಂದ ಸೋಲು ಅನುಭವಿಸಿ ಆಘಾತ ಎದುರಿಸಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಮಂಗಳವಾರದ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಸವಾಲು ಎದುರಿಸಲಿದೆ. ಜೋಸ್ ಬಟ್ಲರ್ ಪಡೆ ಗೆಲುವಿನೊಂದಿಗೆ ಪುಟಿದೇಳುವ ಹಂಬಲದಲ್ಲಿದೆ.
    ಅ್ಘಾನಿಸ್ತಾನ ಎದುರಿನ ಲೋ ಸ್ಕೋರಿಂಗ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಗೆಲುವಿನ ಆರಂಭ ಕಂಡು ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಬಾಂಗ್ಲಾ ಪ್ರಬಲ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಲಿಟನ್ ದಾಸ್, ಮೆಹಿದಿ ಹಸನ್ ಮಿರಾಜ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್ ಪಂದ್ಯದ ೇವರಿಟ್ ತಂಡವೆನಿಸಿದರೂ, ವಿಶ್ವಕಪ್‌ನಲ್ಲಿ ಬಾಂಗ್ಲಾ ಈ ಮುನ್ನ 2 ಬಾರಿ 2 ಬಾರಿ ಸೋಲಿನ ರುಚಿ ತೋರಿಸಿದ್ದನ್ನು ಮರೆಯುವಂತಿಲ್ಲ.

    ಒತ್ತಡದಲ್ಲಿ ಆಂಗ್ಲರು: ಆರಂಭಿಕ ಪಂದ್ಯದ ಸೋಲು ಆಂಗ್ಲರಿಗೆ ಎಚ್ಚರಿಕೆ ಗಂಟೆಯಾಗಿದೆ. ಆದರೆ ಇಂಗ್ಲೆಂಡ್‌ನ ಕೆಲವು ಆಟಗಾರರು ಐಪಿಎಲ್‌ನ ಭಾಗವಾಗಿರುವುದರಿಂದ ಭಾರತದ ಪಿಚ್ ಹಾಗೂ ಪರಿಸ್ಥಿತಿಯನ್ನು ಅರಿತಿದ್ದಾರೆ. ಜಾನಿ ಬೇರ್ ಸ್ಟೋ, ಜೋ ರೂಟ್ ಾರ್ಮ್‌ನಲ್ಲಿದ್ದಾರೆ. 282 ರನ್ ರಕ್ಷಿಸಿಕೊಳ್ಳುವಲ್ಲಿ ವಿಲವಾಗಿರುವ ಬೌಲಿಂಗ್ ವಿಭಾಗ ತಂಡಕ್ಕೆ ಹಿನ್ನಡೆ ತಂದಿದೆ. ಕ್ರಿಸ್ ವೋಕ್ಸೃ್, ಮಾರ್ಕ್ ವುಡ್ ಮತ್ತು ಸ್ಯಾಮ್ ಕರ‌್ರನ್ ಮತ್ತೊಮ್ಮೆ ಪರೀಕ್ಷೆಗೆ ಒಳಪಡಲಿದ್ದು ಪುಟಿದೇಳುವ ಹಂಬಲದಲ್ಲಿದೆ. ಬಟ್ಲರ್ ತಂಡ ಬ್ಯಾಟರ್ ಮತ್ತು ಬೌಲರ್‌ಗಳಿಂದ ಹೆಚ್ಚು ಬದ್ಧತೆಯ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.

    ಫಿಟ್ ಆಗದ ಸ್ಟೋಕ್ಸ್
    ಆರಂಭಿಕ ಪಂದ್ಯದಿಂದ ಹೊರಗುಳಿದಿದ್ದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಬಾಂಗ್ಲಾ ವಿರುದ್ಧ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಸ್ಟೋಕ್ಸ್ ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರೂ, ಪಂದ್ಯ ಆಡುವಷ್ಟು ಫಿಟ್ ಆಗಿಲ್ಲ ಎನ್ನಲಾಗಿದೆ.

    ಔಟ್‌ಫೀಲ್ಡ್ಗೆ ಅಸಮಾಧಾನ
    ಆರಂಭಿಕ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಸೋಲಿನ ನಂತರ ಧರ್ಮಶಾಲಾ ಕ್ರೀಡಾಂಗಣದಲ್ಲಿ ಔಟ್‌ಫೀಲ್ಡ್ ಬಗ್ಗೆ ಆ್ಘನ್ ತಂಡದ ಕೋಚ್ ಜೊನಾಥನ್ ಟ್ರಾಟ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಕೂಡ ಪಂದ್ಯಕ್ಕೆ ಮುನ್ನವೇ ಕಳವಳ ವ್ಯಕ್ತಪಡಿಸಿದ್ದಾರೆ. ಗಾಯದ ಅಪಾಯದಿಂದಾಗಿ ಆಟಗಾರರು ಈ ಔಟ್‌ಫೀಲ್ಡ್‌ನಲ್ಲಿ ಡೈವ್ ಹೊಡೆಯದಂತೆಯೂ ಎಚ್ಚರಿಸಿದ್ದಾರೆ.

    ವಿಶ್ವಕಪ್ ಮುಖಾಮುಖಿ
    ಇಂಗ್ಲೆಂಡ್-2
    ಬಾಂಗ್ಲಾದೇಶ-2

    ಏಕದಿನ ಮುಖಾಮುಖಿ
    ಇಂಗ್ಲೆಂಡ್-19
    ಬಾಂಗ್ಲಾದೇಶ- 5

    ಆರಂಭ: ಬೆಳಗ್ಗೆ 10.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts