More

    ಬಸ್ಸು ಲೇಟಾಗಿದ್ದರಿಂದ ಶಾಲೆಗೆ ತಡವಾಗುತ್ತಿದೆ ಎಂದು ದೂರಿತ್ತ ವಿದ್ಯಾರ್ಥಿ; ಆಮೇಲೆ ಆಗಿದ್ದಕ್ಕೆ ಪ್ರಶಂಸೆಯ ಸುರಿಮಳೆ

    ಭುವನೇಶ್ವರ: ಶಾಲೆಗೆ, ಕಾಲೇಜಿಗೆ, ಆಫೀಸಿಗೆ ಲೇಟಾಗಿ ಹೋದರೆ ಸುಲಭವಾಗಿ ಹೇಳಲು ಸಿಗುವ ಕಾರಣ ಬಸ್ಸು ಲೇಟು ಎನ್ನೋದು. ಆದರೆ ನಿಜವಾಗಿಯೂ ಬಸ್ಸಿನ ತೊಂದರೆಯಿಂದ ಶಾಲೆಗೆ ಲೇಟಾಗಿ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬ ಮಾಡಿದ ದೂರಿನಿಂದ ಬಸ್ಸಿನ ಸಮಯವೇ ಬದಲಾಗಿದ್ದು, ಪ್ರಶಂಸೆಯ ಸುರಿಮಳೆ ಕೇಳಿಬಂದಿದೆ.

    ಇದನ್ನೂ ಓದಿ: ವಾಟ್ಸ್​ಆ್ಯಪ್​ ಪ್ರೈವೇಟ್​ ಗ್ರೂಪ್​ ಸೇರೋಕೆ ಗೂಗಲ್​ನಲ್ಲೇ ಲಿಂಕ್​! ತಪ್ಪು ಮಾಡಿ ತಿದ್ದಿಕೊಂಡ ವಾಟ್ಸ್​ಆ್ಯಪ್​

    ಒಡಿಸ್ಸಾದ ಭುವನೇಶ್ವರದ ಎಂಬಿಎಸ್​ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಪ್ರತಿದಿನ ಶಾಲೆಗೆ 7.30ಕ್ಕೆ ಹೋಗಬೇಕಿತ್ತಂತೆ. ಪ್ರತಿದಿನ ಅಲ್ಲಿನ ಸ್ಥಳೀಯ ಸಾರಿಗೆ ಬಸ್ಸಿನಲ್ಲೇ ಆತ ಶಾಲೆಗೆ ಹೋಗುತ್ತಿದ್ದ. ಆದರೆ ಅಲ್ಲಿನ ಮೊದಲ ಬಸ್ಸಿದ್ದಿದ್ದು 7.40ಕ್ಕೆ ಇದರಿಂದಾಗಿ ಪ್ರತಿದಿನ ಶಾಲೆಗೆ ತಡವಾಗಿ ಹೋಗಬೇಕಾಗಿತ್ತಂತೆ. ಈ ವಿಚಾರವಾಗಿ ಬಾಲಕ ಟ್ವಿಟ್ಟರ್​ ಖಾತೆಯಲ್ಲಿ ಹೇಳಿಕೊಂಡಿದ್ದಾನೆ. ಇದರ ಬಗ್ಗೆ ಏನಾದರೂ ಕ್ರಮ ತೆಗೆದುಕೊಳ್ಳಿ ಎಂದು ಕೇಳಿಕೊಂಡಿದ್ದಾನೆ. ತನ್ನ ಟ್ವೀಟ್​ನಲ್ಲಿ ಕ್ಯಾಪಿಟಲ್ ರೀಜನ್ ಅರ್ಬನ್ ಟ್ರಾನ್ಸ್‌ಪೋರ್ಟ್ (ಸಿಆರ್‌ಯುಟಿ) ಮತ್ತು ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಅವರನ್ನು ಟ್ಯಾಗ್​ ಮಾಡಿದ್ದಾನೆ.

    ಬಾಲಕ ಜನವರಿ 8ರಂದು ಈ ದೂರಿನ ಟ್ವೀಟ್ ಮಾಡಿದ್ದು, ಜನವರಿ 9ಕ್ಕೆ ಅರುಣ್ ಬೋತ್ರಾ ಅದಕ್ಕೆ ಸ್ಪಂದಿಸಿದ್ದಾರೆ. ಸೋಮವಾರದಿಂದ ಬಸ್ಸಿನ ಸಮಯ ಬದಲಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿದಿನ ಬೆಳಗ್ಗೆ 7 ಗಂಟೆಗೇ ಮೊದಲ ಬಸ್ಸು ಇರಲಿದೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ನಮ್ಮದು ಸಂಘ ಪರಿವಾರಕ್ಕೆ ಸೇರಿದ ಕುಟುಂಬ; ನಾವೂ ಹಾಫ್​ ಚಡ್ಡಿ ಹಾಕಿದವರೇ ಎಂದ ರಮೇಶ್​ ಜಾರಕಿಹೊಳಿ

    ಶಾಲಾ ವಿದ್ಯಾರ್ಥಿಯು ಟ್ವಿಟ್ಟರ್​ನಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ಮಗರ ಸಾರಿಗೆಯ ಬಗ್ಗೆ ಇದೀಗ ಎಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ತಕ್ಷಣ ಕ್ರಮ ತೆಗೆದುಕೊಂಡ ಅರುಣ್ ಬೋತ್ರಾ ಅವರಿಗೆ ಜನರು ಪ್ರಶಂಶಿಸಲಾರಂಭಿಸಿದ್ದಾರೆ. (ಏಜೆನ್ಸೀಸ್​)

    ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

    ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts