More

    ದುಬೈ, ಅಬು ಧಾಬಿ, ಮಸ್ಕತ್‌ ಕನ್ನಡಿಗರು ನೋಡಾಯ್ತು ‘ಎಸ್.ಎಲ್.ವಿ’

    ಬೆಂಗಳೂರು: ಕನ್ನಡದ ಸಿನಿಮಾಗಳು ಇಲ್ಲಿ ಬಿಡುಗಡೆಯಾಗುವುದಕ್ಕಿಂತ ಮೊದಲೇ ಬೇರೆ ದೇಶಗಳಲ್ಲಿ ಪ್ರೀಮಿಯರ್​ ಆಗುವುದು ಹೊಸ ವಿಷಯವಲ್ಲ. ಈಗ ‘ಎಸ್​.ಎಲ್​.ವಿ’ ಎಂಬ ಹೊಸಬರ ಚಿತ್ರವು ಈಗಾಗಲೇ ದುಬೈ, ಅಬು ಧಾಬಿ, ಮಸ್ಕತ್​ ಮುಂತಾದ ಕಡೆ ಪ್ರದರ್ಶನಗೊಂಡು, ಅಲ್ಲಿನ ಕನ್ನಡಿಗರಿಂದ ಮೆಚ್ಚುಗೆ ಪಡೆದಿದೆ.

    ಇದನ್ನೂ ಓದಿ: ‘ರೇಸರ್​’ಗೆ ಜತೆಯಾದ ಅದ್ವಿತಿ ಶೆಟ್ಟಿ … ಚಿತ್ರೀಕರಣ ಪ್ರಾರಂಭ

    ದಿವಂಗತ ನಿರೂಪಕ ಸಂಜೀವ ಕುಲಕರ್ಣಿ ಪುತ್ರ ಸೌರಭ ಕುಲಕರ್ಣಿ ನಿರ್ದೇಶಿಸಿರುವ ಚಿತ್ರ ‘ಎಸ್.ಎಲ್.ವಿ’. ಕಳೆದ ವರ್ಷವೇ ಪ್ರಾರಂಭವಾಗಿದ್ದ ಚಿತ್ರ, ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮೊದಲ ಹಂತವಾಗಿ ವಿದೇಶಗಳಲ್ಲಿ ಚಿತ್ರದ ವಿಶೇಷ ಪ್ರದರ್ಶನ ಮಾಡಲಾಗಿದೆ.

    ‘ಎಸ್​.ಎಲ್​.ವಿ’ ಎಂದರೆ ಸಿರಿ ಲಂಬೋದರ ವಿವಾಹ ಎಂದರ್ಥ. ಈ ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ವೆಡ್ಡಿಂಗ್‌ ಪ್ಲಾನರ್ಸ್‌ಗಳಾಗಿದ್ದು, ಸಿರಿ ಹಾಗೂ ಲಂಬೋದರ ಎನ್ನುವವರ ವಿವಾಹ ಮಾಡಿಸಲು ನಾಯಕ-ನಾಯಕಿ ಸಿದ್ಧರಾಗುತ್ತಾರೆ. ಅಲ್ಲಿ ನಡೆಯುವ ಒಂದಷ್ಟು ಹಾಸ್ಯಮಯ, ಭಾವನಾತ್ಮಕ ಹಾಗೂ ರೋಚಕ ಸನ್ನಿವೇಶಗಳ ಈ ಚಿತ್ರ ಎನ್ನುತ್ತಾರೆ ಸೌರಭ್​.

    ಈ ಹಿಂದೆ ‘ಪಾ ಪ ಪಾಂಡು’ ಧಾರಾವಾಹಿಯಲ್ಲಿ ಪುಂಡನಾಗಿ ಕಾಣಿಸಿಕೊಂಡಿದ್ದ ಅಂಜನ್‌ ಎ ಭಾರದ್ವಾಜ್‌ ಮತ್ತು ಮಂಡ್ಯ ರಮೇಶ್‌ ಪುತ್ರಿ ದಿಶಾ ರಮೇಶ್‌ ಈ ಚಿತ್ರದ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಜತೆಗೆ ರಾಜೇಶ್‌ ನಟರಂಗ, ಸುಂದರ್‌ ವೀಣಾ, ಬಲ ರಾಜವಾಡಿ, ರೋಹಿತ್‌ ನಾಗೇಶ್‌, ಪಿ ಡಿ ಸತೀಶ್‌ಚಂದ್ರ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ‘ರೂಪಾಯಿ’ ಚಿತ್ರದಿಂದ ಬಂತು ‘ಖಾರಾಬಾತ್​’ ಹಾಡು; ಚಿತ್ರ ಫೆ.10ಕ್ಕೆ ತೆರೆಗೆ

    ‘ಎಸ್​.ಎಲ್​.ವಿ’ ಚಿತ್ರಕ್ಕೆ ಕಿಟ್ಟಿ ಕೌಶಿಕ್‌ ಛಾಯಾಗ್ರಹಣ, ಸಂಘರ್ಷ್‌ ಕುಮಾರ್‌ ಸಂಗೀತವಿದೆ. ವರ್ಸ್ಯಾಟೋ ವೆಂಚ್ಯೂರ್ಸ್‌, ಪವಮಾನ ಕ್ರಿಯೇಷನ್ಸ್‌, ಫೋರೆಸ್‌ ನೆಟ್‌ವರ್ಕ್‌ ಸಲ್ಯೂಷನ್ಸ್‌ ಹಾಗೂ ಧೂಪದ ದೃಶ್ಯ ಬ್ಯಾನರ್‌ ಸಂಸ್ಥೆಗಳಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ.

    ಮುಂದಿನ ಸಂಕ್ರಾಂತಿಗೆ ಈಗಿನಿಂದಲೇ ಸ್ಪರ್ಧೆ ಶುರು; ಜ್ಯೂ ಎನ್​ಟಿಆರ್​ ಬಿಟ್ಟರೆ ಇನ್ನೆಲ್ಲರೂ ರೇಸ್​ನಲ್ಲಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts