More

    ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

    ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡರು ಡೆತ್‌ನೋಟ್‌ನಲ್ಲಿ ಬರೆದಿರುವ ಕೆಲವು ಅಂಶಗಳು ಕುತೂಹಲಕ್ಕೆ ಕಾರಣವಾಗುವಂತಿವೆ. ಸಾವಿಗೆ ನಿಖರ ಕಾರಣ ತಿಳಿಯಲು ಪೊಲೀಸರು ನಡೆಸಿರುವ ಪ್ರಯತ್ನ ತಿಂಗಳಾದರೂ ಕೈಗೂಡದೇ ಇರುವುದಕ್ಕೆ ಡೆತ್‌ನೋಟ್‌ನಲ್ಲಿ ಇರುವ ಈ ಅಂಶಗಳೇ ಕಾರಣ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಜನರ ರಕ್ಷಣೆಯಲ್ಲಿ ನಾನು ಸೋತೆ ಎನ್ನುತ್ತ ರಾಜೀನಾಮೆ ಸಲ್ಲಿಸಿದ ಪ್ರಧಾನಿ!

    ಡೆತ್‌ನೋಟನ್ನು ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಹಲವಾರು ದಿನ ಮೊದಲೇ ಸಿದ್ಧಪಡಿಸಲು ಆರಂಭಿಸಿರುವುದು ದೃಢಪಟ್ಟಿದೆ. ವಿಧಾನಪರಿಷತ್ ಉಪಸಭಾಪತಿ ಲೆಟರ್‌ಹೆಡ್‌ನಲ್ಲಿರುವ ಎರಡು ಪುಟಗಳ ಬರಹದ ಪೈಕಿ ಮೊದಲನೇ ಪುಟದಲ್ಲಿ ಇರುವ ಶಾಯಿ ಬೇರೆಯದೇ ಪೆನ್ನಿನದ್ದು. ಅದನ್ನು ಬರೆದು ಕೆಲವು ದಿನಗಳಾದ ಮೇಲೆ ಎರಡನೇ ಪುಟವನ್ನು ಬೇರೆ ಪೆನ್ನಿನಿಂದ ಬರೆದಿದ್ದಾರೆ. ಅವರು ಆತ್ಮಹತ್ಯೆಗೆ ಮಾನಸಿಕವಾಗಿ ಸಾಕಷ್ಟು ಮೊದಲೇ ತಯಾರಿ ಮಾಡಿಕೊಂಡಿದ್ದರು ಎಂಬುದು ಇದರಿಂದ ಗೊತ್ತಾಗುತ್ತದೆ ಎನ್ನುತ್ತಾರೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು.

    ಮೊದಲ ಪುಟವನ್ನು ಸಮಾಧಾನಚಿತ್ತದಿಂದ ಬರೆದಿದ್ದು, ಅದರಲ್ಲಿ ಅವರು ಆಸ್ತಿ ಹಂಚಿಕೆ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಪತ್ನಿ, ಪುತ್ರ, ಪುತ್ರಿ, ಅಳಿಯನಿಗೆ ಧೈರ್ಯ ಹೇಳಿರುವ ಅವರು ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸೋದರನಿಗೆ ಮನವಿ ಮಾಡಿದ್ದಾರೆ. ಬೀರೂರಿನ ಮನೆ ಮಾರಾಟ ಮಾಡಿ ಪತ್ನಿಗೆ ಹಣ ಕೊಡುವಂತೆ ತಿಳಿಸಿದ್ದಾರೆ. ಇಬ್ಬರ ಜತೆ ತಮಗೆ ಹಣಕಾಸಿನ ವ್ಯವಹಾರ ಇರುವುದನ್ನು ಉಲ್ಲೇಖಿಸಿದ್ದಾರೆ. ಇದರ ಜತೆಗೆ, ತಮಗೆ ಲಿಂಗಾಯತರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ, ತಾನು ಲಿಂಗಾಯತರ ವಿರೋಧಿ ಅಲ್ಲ ಎಂದು ನಮೂದಿಸಿದ್ದು, ಈ ರೀತಿ ಯಾಕೆ ಬರೆದರು ಎಂಬುದು ನಿಗೂಢವಾಗಿದೆ. ಈ ದಿಕ್ಕಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಇದನ್ನೂ ಓದಿ: ಅದ್ದೂರಿ ಸ್ವಾಗತದ ಬಳಿಕ ಅಜಿಂಕ್ಯ ರಹಾನೆ ಕೇಕ್ ಕತ್ತರಿಸಲು ನಿರಾಕರಿಸಿದ್ದು ಯಾಕೆ ಗೊತ್ತೇ?

    ಎರಡನೇ ಪುಟವನ್ನು ಆತ್ಮಹತ್ಯೆ ಮಾಡಿಕೊಳ್ಳುವ ದಿನವೇ ಅವಸರದಲ್ಲಿ ಬರೆದಂತಿದೆ. ವಿಧಾನಪರಿಷತ್ತಿನಲ್ಲಿ ನಡೆದ ಗಲಾಟೆಯ ವಿಷಯವನ್ನೂ ಅವರು ಅದರಲ್ಲಿ ಪ್ರಸ್ತಾಪಿಸಿದ್ದು, ಆ ಘಟನೆಯಿಂದ ತಮಗೆ ನೋವಾಗಿದೆ ಎಂದಷ್ಟೇ ಹೇಳಿದ್ದಾರೆ. ಆತ್ಮಹತ್ಯೆಗೆ ಈ ಘಟನೆಯಾಗಲಿ, ಬೇರೆ ಯಾವುದೇ ವ್ಯವಹಾರವಾಗಲಿ ಕಾರಣ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಇದರಿಂದಾಗಿ ನಿರ್ದಿಷ್ಟ ಕಾರಣ ಕಂಡುಹಿಡಿಯುವುದು ವಿಳಂಬವಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಿಎಸ್ಸಿ ವಿದ್ಯಾರ್ಥಿನಿಗೆ ಮುಖ್ಯಮಂತ್ರಿ ಪಟ್ಟ! ಹಳ್ಳಿ ಹುಡುಗಿಯ ರಾಜಕೀಯ ದರ್ಬಾರ ನೋಡಲು ಸಜ್ಜಾದ ರಾಜ್ಯ

    ಮೋದಿ ಸರ್ಕಾರದಲ್ಲಿ ಡಬಲ್​ ಆದ ಸೆನ್ಸೆಕ್ಸ್​! ಏಳೇ ವರ್ಷದಲ್ಲಿ 25 ಸಾವಿರದಿಂದ 50 ಸಾವಿರಕ್ಕೆ ಜಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts