More

    ಶ್ರೀಲಂಕಾ ಪ್ರವಾಸದ ಟೀಂ ಇಂಡಿಯಾ ಆಟಗಾರರ ಕ್ವಾರಂಟೈನ್ ಹೇಗಿದೆ ಗೊತ್ತಾ?

    ಮುಂಬೈ: ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಸಾರಥ್ಯದ ಭಾರತ ನಿಗದಿತ ಓವರ್‌ಗಳ ತಂಡದ ಎಲ್ಲ ಆಟಗಾರರು ಮಂಗಳವಾರ ಮುಂಬೈಗೆ ಆಗಮಿಸಿದ್ದು, ಎರಡು ವಾರಗಳ ಕಾಲ ಕಠಿಣ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಮಂಗಳವಾರದಿಂದ (ಜೂ.15) ಜೂನ್ 28ರವರೆಗೆ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಜುಲೈ 28 ರಂದು ಕೊಲಂಬೊಗೆ ಹೊರಡಲಿದ್ದು, 3 ದಿನಗಳ ಕಾಲಕಠಿಣ ಕ್ವಾರಂಟೈನ್ ಬಳಿಕ ಅಭ್ಯಾಸ ಆರಂಭಿಸಲಿದೆ. ಜುಲೈ 13 ರಿಂದ 6 ಪಂದ್ಯಗಳ ನಿಗದಿತ ಓವರ್‌ಗಳ ಸರಣಿ ನಡೆಯಲಿದೆ.

    ಇದನ್ನೂ ಓದಿ: ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕಿಲ್ಲ ಕನ್ನಡಿಗರು ; 15ರ ಬಳಗದಲ್ಲೂ ಕೆಎಲ್ ರಾಹುಲ್, ಮಯಾಂಕ್‌ಗೆ ಸ್ಥಾನವಿಲ್ಲ

    ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ವಿರಾಟ್ ಕೊಹ್ಲಿ ಸಾರಥ್ಯದ ತಂಡದ ಮಾದರಿಯಂತೆಯೇ ಲಂಕಾ ಪ್ರವಾಸ ಕೈಗೊಳ್ಳಲಿರುವ ಶಿಖರ್ ಧವನ್ ಸಾರಥ್ಯದ ತಂಡ ಕೂಡ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಆರಂಭಿಕ 7 ದಿನಗಳ ಕಾಲ ಕೊಠಡಿಯಲ್ಲೆ ಕ್ವಾರಂಟೈನ್‌ನಲ್ಲಿದ್ದರೆ, ಬಳಿಕ ಬಯೋಬಬಲ್ ವ್ಯಾಪ್ತಿಯಲ್ಲೇ ಆಟಗಾರರಿಗೆ ಜಿಮ್ ಸೇರಿದಂತೆ ಇನ್ನಿತರ ಕಡೆಗೆ ಓಡಾಡಲು ಅವಕಾಶ ನೀಡಲಾಗುತ್ತಿದೆ. ಕೊಲಂಬೋದಲ್ಲಿ ಮೂರು ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದು ಪರಿಸ್ಥಿತಿ ನೋಡಿಕೊಂಡು ಭಾರತ ತಂಡ ಅಭ್ಯಾಸ ಆರಂಭಿಸಲಿದೆ. ಇಂಗ್ಲೆಂಡ್‌ಗೆ ತೆರಳುವುದಕ್ಕೂ ಹಾಗೂ ತೆರಳಿದ ಬಳಿಕ ಅನುಸರಿಸಿದ ಮಾದರಿಯಲ್ಲೇ ಲಂಕಾ ಪ್ರವಾಸಕ್ಕೂ ಅದೇ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ. ಭಾರತ ತಂಡದ ಆಟಗಾರರು ಎಂದಿನಂತೆ ಕೊಲಂಬೊದಲ್ಲಿರುವ ತಾಜ್ ಸಮುದ್ರಾ ಹೋಟೆಲ್‌ನಲ್ಲೆ ಉಳಿದುಕೊಳ್ಳಲಿದ್ದಾರೆ.

    ಇದನ್ನೂ ಓದಿ: ಭಾರತದ ಯುವ ಕ್ರಿಕೆಟಿಗರಿಗೆ ರಾಹುಲ್ ದ್ರಾವಿಡ್ ಮತ್ತೊಮ್ಮೆ ಮಾರ್ಗದರ್ಶನ

    ಭಾರತ ತಂಡಕ್ಕೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಮಾರ್ಗದರ್ಶನ ನೀಡಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾ ಖಚಿತಪಡಿಸಿದ್ದಾರೆ. ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಹಾಗೂ ಆತಿಥೇಯ ಶ್ರೀಲಂಕಾ ತಂಡಗಳ ನಡುವೆ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳು ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts