More

    ವಿಶ್ವಕಪ್ ಬಳಿಕ ಟಿ20 ನಾಯಕತ್ವ ತ್ಯಜಿಸಲಿದ್ದಾರೆ ವಿರಾಟ್ ಕೊಹ್ಲಿ

    ದುಬೈ: ಮುಂಬರುವ ಟಿ20 ವಿಶ್ವಕಪ್ ಬಳಿಕ ಭಾರತ ಟಿ20 ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಗುರುವಾರ ಪ್ರಕಟಿಸಿದ್ದಾರೆ. ಇನ್ಮುಂದೆ ಏಕದಿನ ಹಾಗೂ ಟೆಸ್ಟ್ ತಂಡಗಳನ್ನು ಮಾತ್ರ ಮುನ್ನಡೆಸುವುದಾಗಿ ಕೊಹ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಕೊಹ್ಲಿ ಬರೆದುಕೊಂಡಿದ್ದಾರೆ. ಭಾರತ ತಂಡ ಪ್ರತಿನಿಧಿಸುವುದರ ಜತೆಗೆ ತಂಡ ಮುನ್ನಡೆಸುವುದು ಹೆಮ್ಮೆಯ ವಿಷಯ. ನಾನು ಅದನ್ನು ಸಾಧಿಸಿದ್ದೇನೆ ಎಂದುಕೊಂಡಿರುವೆ. ನನ್ನ ಜತೆಗಾರರಿಗೂ, ಸಹಾಯಕ ಸಿಬ್ಬಂದಿ, ಆಯ್ಕೆ ಸಮಿತಿ, ನನ್ನ ಕೋಚ್‌ಗಳಿಗೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ. 

    ಟಿ20 ನಾಯಕತ್ವದ ಜವಾಬ್ದಾರಿಯಿಂದ ಮುಕ್ತಿ ಪಡೆದು ಕೇವಲ ಆಟಗಾರನಾಗಿ ಮುಂದುವರಿಯುವೆ, ಕಳೆದ 8-9 ವರ್ಷಗಳಿಂದ ತಂಡದ ನಾಯಕನಾಗಿದ್ದು, 5-6 ವರ್ಷಗಳಿಂದ ಮೂರು ಮಾದರಿ ಮುನ್ನಡೆಸಿದ್ದೇನೆ. ಟಿ20 ನಾಯಕತ್ವ ತ್ಯಜಿಸಲು ನಿರ್ಧರಿಸಿದ್ದು, ಕೇವಲ ಬ್ಯಾಟ್ಸ್‌ಮನ್ ಆಗಿ ಮುಂದುವರಿಯುವೆ ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ತಮ್ಮ ನಿರ್ಧಾರವನ್ನು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾಗೂ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಮೊದಲ ಪಂದ್ಯಕ್ಕೂ ಮುನ್ನವೇ ಸಿಎಸ್‌ಕೆ ತಂಡಕ್ಕೆ ಶಾಕ್..

    ಇದಕ್ಕೂ ಮೊದಲು ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಅವರಿಗೆ ಟಿ20 ವಿಶ್ವಕಪ್ ಮುಕ್ತಾಯಗೊಂಡ ಬಳಿಕ ಭಾರತ ನಿಗದಿತ ಓವರ್‌ಗಳ ತಂಡದ ನಾಯಕತ್ವ ಜವಾಬ್ದಾರಿ ನೀಡಲಾಗುತ್ತಿದೆ ಎಂದು ವರದಿಯಾಗಿತ್ತು. ಮೂರು ಮಾದರಿಗೂ ನಾಯಕನಾಗಿದ್ದ 32 ವರ್ಷದ ವಿರಾಟ್ ಕೊಹ್ಲಿ, ತಮ್ಮ ಮೇಲಿನ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts