More

    ಬಿಎಸ್​​ವೈ ವಿರುದ್ಧ ಪಿತೂರಿ | ಯಡಿಯೂರಪ್ಪ ಪದಚ್ಯುತಿಗೆ ಬಿಜೆಪಿಯೊಳಗೇ ಸಂಚು: ಕಟೀಲ್ ಆಡಿಯೋ ವೈರಲ್; ಶೆಟ್ಟರ್-ಈಶ್ವರಪ್ಪಗೂ ಸಂಕಷ್ಟ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಡಳಿತಾರೂಢ ಬಿಜೆಪಿಯೊಳಗೆ ವ್ಯವಸ್ಥಿತ ಪಿತೂರಿ ಹೂಡಲಾಗುತ್ತಿದೆ ಎಂಬ ಸಂಶಯಕ್ಕೆ ಪುಷ್ಠಿ ನೀಡುವ ಮಹತ್ವದ ಆಡಿಯೋ ಸೋರಿಕೆಯಾಗಿದ್ದು, ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ‘ಯಾರಿಗೂ ಹೇಳಬೇಡಿ…’ ಎನ್ನುತ್ತಲೇ ತಮ್ಮ ಆಪ್ತರ ಬಳಿ ತುಳುವಿನಲ್ಲಿ ಮಾತನಾಡಿದ ಆಡಿಯೋ ವೈರಲ್ ಆಗಿದೆ. ರಾಜ್ಯ ಮಂತ್ರಿ ಮಂಡಲಕ್ಕೆ ಹೊಸ ಸ್ಪರ್ಶ ನೀಡಲು ದೆಹಲಿ ನಾಯಕರು ಬಯಸಿರುವುದನ್ನು ಅವರು ಆಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ. ನಾಯಕತ್ವದ ವಿರುದ್ಧ ಪದೇ ಪದೆ ಅಪಸ್ವರ ಎತ್ತಿ, ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಲ್ಲಿ ವಿಳಂಬ ಆಗುತ್ತಿರುವುದೇಕೆ? ಎಂಬ ಗುಟ್ಟು ಈ ಆಡಿಯೋದಿಂದ ರಟ್ಟಾಗಿದೆ. ಆರು ತಿಂಗಳ ಬಳಿಕ ಸಿಎಂ ಬಿಎಸ್​ವೈ ದೆಹಲಿಗೆ ಹೋದದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿ ವರಿಷ್ಠರನ್ನು ಭೇಟಿ ಮಾಡಿದ್ದರ ಬಗ್ಗೆ ‘ಒಡಕು ಧ್ವನಿ’ಯ ನಾಯಕರ ನಿಗೂಢ ಮೌನಕ್ಕೆ ಕಾರಣವೇನು ? ಎಂಬ ಪ್ರಶ್ನೆಗೆ ಕಟೀಲ್ ಮಾತಿನಿಂದ ಉತ್ತರ ಸಿಕ್ಕಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

    ಶೆಟ್ಟರ್, ಈಶ್ವರಪ್ಪ ತಂಡ ಔಟ್: ಹಿರಿಯ ಸಚಿವರಾದ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಮತ್ತವರ ತಂಡ ಸಚಿವ ಸಂಪುಟದಿಂದ ಹೊರ ಬೀಳಲಿದೆ ಎಂಬ ಸ್ಪೋಟಕ ಮಾಹಿತಿಯೂ ಈ ಧ್ವನಿ ಮುದ್ರಿಕೆಯಲ್ಲಿದೆ. ಮಂತ್ರಿ ಮಂಡಲಕ್ಕೆ ಹೊಸ ಸ್ಪರ್ಶ ದೊರೆಯಲಿದೆ ಎಂದು ಹೇಳುವ ಮೂಲಕ ಸಿಎಂ ಬಿಎಸ್​ವೈ ಜತೆಗೆ ಮಂತ್ರಿ ಮಂಡಲದ ಬಹುತೇಕ ಸದಸ್ಯರು ಹೊರ ಬೀಳಲಿರುವುದು ಖಚಿತ ಎನ್ನಲಾಗಿದೆ. ಲಿಂಗಾಯತ ವೀರಶೈವ ಸಮುದಾಯದ ಪ್ರಭಾವಿ ನಾಯಕರನ್ನು ಕೈಬಿಡುವ ಮಾತುಗಳು ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಗಳಿವೆ.

    ಸಿಎಂ ಸ್ಥಾನಕ್ಕೆ 3 ಹೆಸರು: ಬಿಎಸ್​ವೈ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಹೆಸರುಗಳನ್ನು ಕಟೀಲ್ ನೇರವಾಗಿ ಹೇಳದಿದ್ದರೂ ಸಿಎಂ ಸ್ಥಾನಕ್ಕೆ ಮೂರು ಜನರ ಹೆಸರು ವರಿಷ್ಠರ ಗಮನದಲ್ಲಿದ್ದು, ಯಾರೇ ಬಂದರೂ ನಮ್ಮವರೇ ಒಬ್ಬರು ಆ ಸ್ಥಾನದಲ್ಲಿ ಇರಲಿದ್ದಾರೆ ಜತೆಗೆ ದೆಹಲಿಯವರು ಆಗುತ್ತಾರೆ ಎಂಬ ಗೊಂದಲದ ಮಾತನ್ನೂ ಮಾರ್ವಿುಕವಾಗಿ ಹೇಳಿದ್ದಾರೆ. ವೈರಲ್ ಆಗಿರುವ ಆಡಿಯೋ ಕುರಿತು ನಿಜಾಂಶ ಖಚಿತ ಪಡಿಸಿಕೊಳ್ಳಲೆಂದು ಕಟೀಲ್ ಮೊಬೈಲ್​ಗೆ ಪದೇ ಪದೆ ಕರೆ ಮಾಡಿದರೂ ಅವರು ಸ್ಪಂದಿಸಲಿಲ್ಲ.

    ಆಡಿಯೋದಲ್ಲೇನಿದೆ?

    • ಯಾರಿಗೂ ಹೇಳಲು ಹೋಗಬೇಡಿ… (ಕಿರು ನಗು)
    • ಈಶ್ವರಪ್ಪ, ಜಗದೀಶ ಶೆಟ್ಟರ್ ಹಾಗೂ ಇಡೀ ಟೀಮನ್ನೇ ತೆಗೆಯುತ್ತಾರೆ..
    • ಹೊಸ ಟೀಂ ಮಾಡ್ತಾ ಇದ್ದೇವೆ..
    • ಸದ್ಯ ಯಾರಿಗೂ ಕೊಡಬೇಡಿ ಅಂತ ಹೇಳಿದ್ದಾರೆ..
    • ಯಾವ ಹೆದರಿಕೆಯೂ ಬೇಡ, ಯಾರೆ ಆದರೂ ನಮ್ಮ ಕೈಯಲ್ಲೇ..
    • ಇನ್ನೂ ಮೂರು ಹೆಸರಿದೆ, ಯಾರು ಕೂಡ ಆಗಲು ಚಾನ್ಸ್ ಇದೆ.. 
    • ಇಲ್ಲಿಯವರು ಯಾರನ್ನೂ ಮಾಡುವುದಿಲ್ಲ.. ದೆಹಲಿಯಲ್ಲೇ ಮಾಡ್ತಾರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts