More

    ಕಾಯಕದಲ್ಲಿ ಶ್ರದ್ಧೆ,ಪರಿಶ್ರಮದಿಂದ ಸಾಧನೆ ಸಾಧ್ಯ

    ಚಿತ್ರದುರ್ಗ: ಕಾಯಕ ಶ್ರದ್ಧೆ ಮತ್ತು ಪರಿಶ್ರಮ ಸಾಧನೆಗೆ ದಾರಿ ಎಂದು ಸಿಟಿಇ ಸಹ ನಿರ್ದೇಶಕ ಎಚ್.ಮಂಜುನಾಥ್ ಹೇಳಿದರು. ನಗರದ ಡಯಟ್‌ನಲ್ಲಿ ರಾಷ್ಟ್ರ,ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಹಾಗೂ ರಾಷ್ಟ್ರಮಟ್ಟದ ಇನ್ಸ್‌ಫೈರ್ ಅವಾರ್ಡ್ ವಿಜೇತರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ,ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಬದ್ಧತೆಯಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಗೌರವ ದೊರೆಯುತ್ತದೆ.
    ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಾ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ಪಡೆದಿರುವ ಶಿಕ್ಷಕರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ. ಈ ವರ್ಷ ರಾಷ್ಟ್ರಮಟ್ಟದ ಇನ್ಸ್‌ಫೈರ್ ಅವಾರ್ಡ್ ಸ್ಪರ್ಧೆಯಲ್ಲಿ ನಮ್ಮ ಜಿಲ್ಲೆ ವಿದ್ಯಾರ್ಥಿನಿ ಪ್ರಶಸ್ತಿ ಪಡೆಯುವ ಮೂಲಕ ಇಲಾಖೆ ಮತ್ತು ಜಿಲ್ಲೆಗೆ ಕೀರ್ತಿ ತಂದಿರುವುದು ಸಂತಸದ ಸಂಗತಿ ಎಂದರು.
    ಡಯಟ್ ಪ್ರಾಚಾರ‌್ಯ ಎಸ್‌ಕೆಬಿ ಪ್ರಸಾದ್ ಮಾತನಾಡಿ,ಎನ್‌ಟಿಎಸ್‌ಇ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡ ಬೇಕೆಂದರು. ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಟಿ.ಪಿ.ಉಮೇಶ್,ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ.ಮ ಹೇಶ್ ಮತ್ತು ಕವಿತಾ ರಾಷ್ಟ್ರಮಟ್ಟದ ಇನ್ಸ್‌ಫೈರ್ ಅವಾರ್ಡ್ ವಿಜೇತೆ ವಿದ್ಯಾರ್ಥಿನಿ ಲಾಸ್ಯ ಚಂದ್ರಶೇಖರ್,ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕೆ.ಗಜೇಂದ್ರ,ಪಿ.ತೇಜು,ಮಾರ್ಗದರ್ಶಿ ಶಿಕ್ಷಕರಾದ ಸಿ.ಡಿ.ಸಂಪತ್ ಕುಮಾರ್,ಹಾಲೇಶಿ ಹಾಗೂ ಶಶಿಧರಾಚಾರ್ ಅವರನ್ನು ಸನ್ಮಾನಿಸಲಾಯಿತು.
    ಉಪ ಪ್ರಾಚಾರ‌್ಯ ಡಿ.ಆರ್.ಕೃಷ್ಣಮೂರ್ತಿ,ಹಿರಿಯ ಉಪನ್ಯಾಸಕರು,ಉಪನ್ಯಾಸಕರು ಇದ್ದರು. ನೋಡಲ್ ಅಧಿಕಾರಿ ಬಿ.ಎಸ್.ನಿತ್ಯಾ ನಂದ ಸ್ವಾಗತಿಸಿದರು. ಉಪನ್ಯಾಸಕ ಎಸ್.ಬಸವರಾಜು ಕಾರ‌್ಯಕ್ರಮ ನಿರೂಪಿಸಿದರು. ಕೆ.ಜಿ.ಪ್ರಶಾಂತ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts