More

    ಲಸಿಕೆ ಪಡೆಯಲು ಜನತೆಗೆ ಪ್ರೇರೇಪಿಸಿ

    ಬೈಲಹೊಂಗಲ: ಲಸಿಕೆ ಪಡೆಯಲು ಜನತೆಗೆ ಪ್ರೇರಣೆ ನೀಡಬೇಕು. ಲಸಿಕಾ ಅಭಿಯಾನದ ಯಶಸ್ಸಿಗೆ ಪುರಸಭೆ ಸದಸ್ಯರು, ಜನಪ್ರತಿನಿಧಿಗಳು ಶ್ರಮಿಸವುದು ಮುಖ್ಯ ಎಂದು ಶಾಸಕ ಮಹಾಂತೇಶ ಕೌಜಲಗಿ ಸಲಹೆ ನೀಡಿದರು.

    ಪಟ್ಟಣದ ವಾರ್ಡ್ ನಂ.10 ರ ಕುಡಸೋಮಣ್ಣವರ ಗಲ್ಲಿಯ ದೇಮವ್ವ, ದುರ್ಗವ್ವ ಗ್ರಾಮದೇವಿ ದೇವಸ್ಥಾನದಲ್ಲಿ ಶುಕ್ರವಾರ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನತೆಯ ಆರೋಗ್ಯ ರಕ್ಷಣೆಗಾಗಿ ಲಸಿಕೆಯೊಂದೇ ಪ್ರಮುಖ ಅಸ್ತ್ರವಾಗಿದ್ದು, ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು. ಎಲ್ಲರೂ ಕರೊನಾ ತಡೆ ಮಾರ್ಗಸೂಚಿ ಪಾಲಿಸಬೇಕು ಎಂದರು.

    ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ವಾರ್ಡ್ ಸದಸ್ಯ ಶಿವಬಸು ಕುಡಸೋಮಣ್ಣವರ ಮಾತನಾಡಿ, ಸರ್ಕಾರ ಜನತೆಯ ಆರೋಗ್ಯದ ರಕ್ಷಣೆಗಾಗಿ ಉಚಿತವಾಗಿ ನೀಡುತ್ತಿರುವ ಲಸಿಕಾ ಅಭಿಯಾನದ ಪ್ರಯೋಜನ ಮಾಡಿಕೊಳ್ಳಬೇಕು ಎಂದರು. ಹಿರಿಯ ಮುಖಂಡ ಸಣ್ಣಬಸಪ್ಪ ಕುಡಸೋಮಣ್ಣವರ, ಮಾಜಿ ಪುರಸಭೆ ಸದಸ್ಯ ಬಸವರಾಜ ಕನ್ನೂರ, ಅಂಗನವಾಡಿ ಕಾರ್ಯಕರ್ತೆಯರಾದ ವಿಜಿಯಾ ಕಲಾದಗಿ, ನಾಗರತ್ನ ಕುಡಸೋಮಣ್ಣವರ, ಮುಖಂಡರಾದ ಅಣ್ಣಪ್ಪ ಜೊಂಜಾಳೆ, ಅಣ್ಣಪ್ಪ ಅಂಗಡಿ, ಶೇಖಯ್ಯ ರುದ್ರಾಕ್ಷಿಮಠ, ಬಸಪ್ಪ ಮುರಗೋಡ, ಪುರಸಭೆ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts