More

    ಯಲಹಂಕದಲ್ಲಿ ಚುನಾವಣಾ ಜಾಗೃತಿ ಜಾಥಾಗೆ ಭಾರೀ ಸ್ಪಂದನೆ

    ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಲಹಂಕ ಉಪನಗರದಲಿ ಏರ್ಪಡಿಸಿದ್ದ ಮಾನವ ಸರಪಳಿ ಹಾಗೂ ಜಾಗೃತಿ ಜಾಥಾಗೆ ಭಾರೀ ಸ್ಪಂದನೆ ವ್ಯಕ್ತವಾಯಿತು.

    ಯಲಹಂಕ ಉಪನಗರದಲ್ಲಿರುವ ಹೊಯ್ಸಳ ಮೈದಾನದಲ್ಲಿ ಸೋಮವಾರ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಿ ಮತದಾನ ಪ್ರತಿಜ್ಞಾ ವಿಧಿ ಸ್ವೀಕರಿಸುವ ಜತೆಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. ಈ ಜಾಥಾಗೆ ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಏ.26ರಂದು ನಡೆಯಲಿರುವ ಮತದಾನದಲ್ಲಿ ಎಲ್ಲರೂ ತಪ್ಪದೇ ಮತ ಹಾಕಬೇಕು. ಕಡಿಮೆ ಅಂತರದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಸಾರ್ವಜನಿಕರು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ ಚಲಾವಣೆ ಮಾಡಬೇಕು ಎಂದು ವಿನಂತಿ ಮಾಡಿದರು.

    ಕಾಲ್ನಡಿಗೆ ಜಾಥಾ ಸಾಗಿದ ಹಾದಿ:

    ಕಾಲ್ನಡಿಗೆ ಜಾಥಾವು ಯಲಹಂಕ ಉಪನಗರ ಮುಖ್ಯರಸ್ತೆ ಮಾರ್ಗವಾಗಿ 16ನೇ ಬಿ ಕ್ರಾಸ್ ರಸ್ತೆ, ಚಿಕ್ಕಬೊಮ್ಮಸಂದ್ರ ವೃತ್ತ, ಜ್ಞಾನಜ್ಯೋತಿ ವೃತ್ತ, 2ನೇ ಎ ಕ್ರಾಸ್ ರಸ್ತೆ ಮೂಲಕ ಸಾಗಿ ಶೇಷಾದ್ರಿಪುರ ಕಾಲೇಜು ಆವರಣದಲ್ಲಿ ಮುಕ್ತಾಯಗೊಂಡಿತು.

    ಕಾಲ್ನಡಿಗೆ ಜಾಥಾವು ಡೊಳ್ಳುಕುಣಿತ, ವೀರಗಾಸೆಯ ಜತೆಗೆ ಚುನಾವಣಾ ಗೀತೆಯನ್ನು ಹಾಕಿಕೊಂಡು ನಾನಾ ಘೋಷಣೆಗಳನ್ನು ಕೂಗುತ್ತಾ ಸಾಗಿತು. ಜಾಥಾದಲ್ಲಿ ವಿದ್ಯಾಥಿಗಳು ಕಾಲ್ನಡಿಗೆಯ ಮೂಲಕ ಸಾಗಿದರೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ನಾಗರಿಕರು ದ್ವಿಚಕ್ರಗಳ ಮೂಲಕ ಸಾಗಿದರು.

    ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್.ಕಾಂತರಾಜು, ಚುನಾವಣಾ ರಾಯಭಾರಿ ನೀತು ವನಜಾಕ್ಷಿ, ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಅಪೂರ್ವ ಕುಲಕರ್ಣಿ, ರಮೇಶ್, ವಿದ್ಯಾರ್ಥಿಗಳು, ಅಧಿಕಾರಿ-ಸಿಬ್ಬಂದಿಗಳು, ನಾಗರಿಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts