More

    ಆ ಆರು ಕಂಪನಿಗಳ ಮುಷ್ಠಿಯಲ್ಲಿದೆ ಬಾಲಿವುಡ್​ …

    ಬಾಲಿವುಡ್​ನ ಅತ್ಯಂತ ವಿವಾದಿತ ವ್ಯಕ್ತಿ ಎಂದರೆ ಕಮಾಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ. ಬಾಲಿವುಡ್​ ಚಿತ್ರಗಳ ಮತ್ತು ವ್ಯಕ್ತಿಗಳ ಕುರಿತಾದ ಅವರ ವಿಮರ್ಶೆಗಳು ಹರಿತವಷ್ಟೇ ಅಲ್ಲ, ಸಾಕಷ್ಟು ವಿವಾದಗಳಿಗೂ ಈಡಾಗಿವೆ. ಈಗ ಕೆಆರ್​ಕೆ, ಬಾಲಿವುಡ್​ ಕುರಿತಾದ ಇನ್ನೊಂದು ಸ್ಫೋಟಕ ಮಾಹಿತಿಯನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಅವರನ್ನು ಯಾರೂ ದೂರ ಮಾಡಲಿಲ್ಲ; ಅವರೇ ದೂರ ಮಾಡಿಕೊಂಡರು …

    ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ನಂತರ ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತದ ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಕೆಲವರು ತಮಗೆ ಇಷ್ಟವಾದವರನ್ನು ಮೇಲಕ್ಕೆತ್ತಲು ಹಲವರನ್ನು ತುಳಿಯುತ್ತಿದ್ದಾರೆ ಮತ್ತು ಸುಶಾಂತ್​ ಸಿಂಗ್​ ಅಂತಹ ತುಳಿತಕ್ಕೊಳಗಾದವರೊಬ್ಬರು ಎಂದು ಹಲವು ಸೆಲೆಬ್ರಿಟಿಗಳು ಹೇಳಿದ್ದರು.

    ಈಗ ಕೆಆರ್​ಕೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಬರೀ ಸ್ವಜನಪಕ್ಷಪಾತವಷ್ಟೇ ಅಲ್ಲ, ಹಿಂದಿ ಚಿತ್ರರಂಗವನ್ನು ಕೇವಲ ಆರು ಕಂಪನಿಗಳ ಮುಷ್ಠಿಯಲ್ಲಿವೆ ಮತ್ತು ಈ ಆರು ಕಂಪನಿಗಳ ಅವಕೃಪೆಗೆ ಪಾತ್ರರಾದರೆ, ಅವರ ಸಿನಿಮಾ ಕೆರಿಯರ್​ ಮುಕ್ತಾಯವಾದಂತೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಆರು ತಿಂಗಳಲ್ಲಿ ಏಳು ಸಿನಿಮಾ ಕಳೆದುಕೊಂಡಿದ್ದರಂತೆ ಸುಶಾಂತ್​!

    ಇಡೀ ಹಿಂದಿ ಚಿತ್ರರಂಗವು ಆ ಆರು ಕಂಪನಿಗಳ ಹಿಡಿತದಲ್ಲಿದೆ ಎಂಬ ಮಾತಿದೆ. ಒಂದು ಪಕ್ಷ ಅವರಿಗೆ ಯಾರಾದರೂ ಸರಿ ಬರದಿದ್ದರೆ, ಅವರ ವೃತ್ತಿಜೀವನವನ್ನೇ ಮುಗಿಸುವುದಕ್ಕೂ ಅವರು ಹೇಸುವುದಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ ಕೆಆರ್​ಕೆ. ಅಷ್ಟೇ ಅಲ್ಲ, ಆ ಆರು ಕಂಪನಿಗಳ ಹೆಸರುಗಳನ್ನೂ ಅವರು ಬಹಿರಂಗಪಡಿಸಿದ್ದಾರೆ. ಧರ್ಮ ಪ್ರೊಡಕ್ಷನ್ಸ್​ (ಕರಣ್​ ಜೋಹಾರ್​, ಯಶ್​ರಾಜ್​ ಫಿಲಂಸ್​ (ಆದಿತ್ಯ ಚೋಪ್ರಾ), ಟಿ-ಸೀರೀಸ್​ (ಭೂಷಣ್​ ಕುಮಾರ್​, ಬಾಲಾಜಿ ಎಂಟರ್​ಟೈನ್​ಮೆಂಟ್​ (ಏಕ್ತಾ ಕಪೂರ್​), ನಡಿಯಾಡ್​ವಾಲಾ ಗ್ರಾಂಡ್​ಸನ್​ (ಸಾಜಿದ್​ ನಡಿಯಾಡ್​ವಾಲಾ) ಮತ್ತು ಸಲ್ಮಾನ್​ ಖಾನ್​ ಫಿಲಂಸ್​ (ಸಲ್ಮಾನ್​ ಖಾನ್​) ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ.

    ರಣವೀರ್​ ಸ್ಟಾರ್​ ಆಗಿದ್ದರೆ, ಅದಕ್ಕೆ ಕಾರಣ ಸುಶಾಂತ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts