More

    ಆರು ತಿಂಗಳೊಳಗೆ ಕಟ್ಟಡ ಕಾಮಗಾರಿ ಪೂರ್ಣ: ಗೃಹ ನಿರ್ಮಾಣ ಮಂಡಳಿ ಎಇಇ ವೀರಣ್ಣ ಹೇಳಿಕೆ

    ಕೊಟ್ಟೂರು: ಪಟ್ಟಣದಲ್ಲಿ ನೂತನ ಪೊಲೀಸ್ ಠಾಣೆ ಮತ್ತು ಸಿಪಿಐ ಕಚೇರಿ ನಿರ್ಮಾಣದ ಕಾಮಗಾರಿ ಗುರುವಾರ ಆರಂಭವಾಯಿತು. ಜೆಸಿಬಿ ಮೂಲಕ 10 ಅಡಿ ಭೂಮಿ ಅಗೆದು, ವಿಶೇಷ ಯಂತ್ರದ ಮೂಲಕ ಮಣ್ಣು ಪರೀಕ್ಷೆ ಮಾಡಿಸಲಾಯಿತು. ಅಲ್ಲಿ ಗಟ್ಟಿಮಣ್ಣು ದೊರೆತಿದ್ದು, ಬುನಾದಿ ಕಟ್ಟಲಾಗುವುದು ಎಂದು ಪೊಲೀಸ್ ಗೃಹ ನಿರ್ಮಾಣ ಮಂಡಳಿ ಇಲಾಖೆ ಎಇಇ ವೀರಣ್ಣ ತಿಳಿಸಿದರು.

    ಮೊದಲು ಪೊಲೀಸ್ ಠಾಣೆ, ಅದರ ಮೇಲೆ ಸರ್ಕಲ್ ಇನ್ಸಪೆಕ್ಟರ್ ಕಚೇರಿ ನಂತರ ಸಭಾಂಗಣ ಕಟ್ಟಲಾಗುವುದು. ಇನ್ನು 6 ತಿಂಗಳೊಳಗೆ ಗುಣಮಟ್ಟದ ಕಟ್ಟಡ ನಿರ್ಮಿಸಲಾಗುವುದು. ಪೊಲೀಸ್ ಗೃಹ ನಿರ್ಮಾಣ ಮಂಡಳಿ, ನೀಲ್ ಗೃಹ ನಿರ್ಮಾಣ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಟ್ಟಡ ಕಾಮಗಾರಿಗೆ 1.73 ಕೋಟಿ ರೂ. ಕಾಯ್ದಿರಿಸಲಾಗಿದೆ ಎಂದರು. ಅ.26ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಆದಾವತ್ ಭೂಮಿ ಪೂಜೆ ನೆರವೇರಿಸಿದ್ದರು. ಸಿಪಿಐ ಎಚ್.ದೊಡ್ಡಣ್ಣ, ಎಎಸ್‌ಐ ಸೈಫುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts