More

    ಅಪ್ಪು & ಸೈನಿಕರಿಗೆ ಅರ್ಪಿತ ಫ್ಯಾಷನ್​ ಶೋ; ವರ್ಲ್ಡ್ ಇಂಟರ್​​ನ್ಯಾಷನಲ್​ನಲ್ಲಿ ಬೆಂಗಳೂರಿನ 6 ರೂಪದರ್ಶಿಗಳಿಗೆ ಪ್ರಶಸ್ತಿ

    ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಸೈನಿಕರಿಗೆ ಅರ್ಪಿಸಿರುವ ವರ್ಲ್ಡ್ ಇಂಟರ್​​ನ್ಯಾಷನಲ್​ ಫ್ಯಾಷನ್​ ಶೋನಲ್ಲಿ ರಾಜಧಾನಿ ಬೆಂಗಳೂರಿನ ಆರು ರೂಪದರ್ಶಿಗಳು ಪ್ರಶಸ್ತಿ ಗಳಿಸಿದ್ದಾರೆ.

    ಯಶ್ ಇಂಟರ್​​ನ್ಯಾಷನಲ್​ ಫ್ಯಾಷನ್ ವೀಕ್ ಆಯೋಜಿಸಿದ್ದ ಈ ಫ್ಯಾಷನ್​ ಶೋ ಇತ್ತೀಚೆಗೆ ಗೋವಾದಲ್ಲಿ ನಡೆದಿದ್ದು, ಈ ಬ್ಯೂಟಿ ಪೇಜೆಂಟ್​ನಲ್ಲಿ 72 ರೂಪದರ್ಶಿಯರು ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದರು.

    ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ್, ಮೇಘಾಲಯ, ಪುಣೆ ಸೇರಿದಂತೆ 10 ರಾಜ್ಯಗಳಿಂದ ರೂಪದರ್ಶಿಗಳು ಭಾಗಿಯಾಗಿದ್ದರು.

    ಅಪ್ಪು & ಸೈನಿಕರಿಗೆ ಅರ್ಪಿತ ಫ್ಯಾಷನ್​ ಶೋ; ವರ್ಲ್ಡ್ ಇಂಟರ್​​ನ್ಯಾಷನಲ್​ನಲ್ಲಿ ಬೆಂಗಳೂರಿನ 6 ರೂಪದರ್ಶಿಗಳಿಗೆ ಪ್ರಶಸ್ತಿ
    ಆಸಿಫ್, ಶ್ರಾವ್ಯಾ

    ಬೆಂಗಳೂರಿನ ಆಸಿಫ್ ಮಿಸ್ಟರ್ ವಿಭಾಗದಲ್ಲಿ, ಶ್ರಾವ್ಯ ಮಿಸ್ ವಿಭಾಗದಲ್ಲಿ, ಮಿಸೆಸ್​​ನಲ್ಲಿ ರಶ್ಮಿ ಹೆಗಡೆ, ಪುರುಷರ ವಿಭಾಗದಲ್ಲಿ ಜೀಶನ್, ಪ್ರಿನ್ಸ್​​ನಲ್ಲಿ ಮೋಕ್ಷ್, ಪ್ರಿನ್ಸೆಸ್ ವಿಭಾಗದಲ್ಲಿ ಅನನ್ಯಾ ವರ್ಲ್ಡ್​ ಇಂಟರ್ನ್ಯಾಷನಲ್ ಪ್ರಶಸ್ತಿ ಗಳಿಸಿದರು. ಗೆದ್ದ ಎಲ್ಲರಿಗೂ ಚಿನ್ನದ ಪದಕ ಪ್ರದಾನ ಮಾಡಲಾಯಿತು.

    ಅಪ್ಪು & ಸೈನಿಕರಿಗೆ ಅರ್ಪಿತ ಫ್ಯಾಷನ್​ ಶೋ; ವರ್ಲ್ಡ್ ಇಂಟರ್​​ನ್ಯಾಷನಲ್​ನಲ್ಲಿ ಬೆಂಗಳೂರಿನ 6 ರೂಪದರ್ಶಿಗಳಿಗೆ ಪ್ರಶಸ್ತಿ
    ಮೋಕ್ಷ್​, ಅನನ್ಯ

    ಈ ಕಾರ್ಯಕ್ರಮವನ್ನು ವಿಶೇಷವಾಗಿ ಸೈನಿಕರು ಹಾಗೂ ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡಲಾಗಿತ್ತು. ಅಲ್ಲದೆ ಪುನೀತ್ ಚಿತ್ರದ ಹಾಡಿಗೆ ನೂರಕ್ಕೂ ಹೆಚ್ಚು ಜನ ಹೆಜ್ಜೆ ಹಾಕಿ, ವೇದಿಕೆಗೆ ಕಳೆ ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts