More

    ಈ ವರ್ಷ ಸ್ಯಾಂಡಲ್​ವುಡ್​ ಹೀರೋಗಳ ಪೈಕಿ ಹೊಸ ದಾಖಲೆ ಬರೆದ ಧನಂಜಯ್​

    ಬೆಂಗಳೂರು: ಒಬ್ಬೊಬ್ಬ ಹೀರೋ ಪ್ರತಿ ವರ್ಷ ಎಂಟ್ಹತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಆ ಸಂಖ್ಯೆ ಬಹಳ ಕಡಿಮೆ ಆಗಿದೆ. ಕೆಲವು ಹೀರೋಗಳು ವರ್ಷಕ್ಕೆ ಎರಡು ಸಿನಿಮಾ ಮಾಡಿದರೆ, ಇನ್ನೂ ಕೆಲವರು ಎರಡು ವರ್ಷಗಳಿಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಹೀಗಿರುವಾಗಲೇ, ಧನಂಜಯ್​ ಈ ವರ್ಷ ಹೊಸ ದಾಖಲೆ ಮಾಡಿದ್ದಾರೆ.

    ಇದನ್ನೂ ಓದಿ: 9 ಹೊಸ ಚಿತ್ರಗಳ ಬಿಡುಗಡೆಯೊಂದಿಗೆ ಈ ವರ್ಷ ಮುಕ್ತಾಯ …

    ಈ ವರ್ಷ 210 ಪ್ಲಸ್​ ಚಿತ್ರಗಳು ಬಿಡುಗಡೆಯಾಗಿದ್ದು, ಈ ಪೈಕಿ ಅತೀ ಹೆಚ್ಚು ಚಿತ್ರಗಳಲ್ಲಿ ಧನಂಜಯ್​ ನಟಿಸಿದ್ದಾರೆ ಎನ್ನುವುದು ವಿಶೇಷ. ಧನಂಜಯ್​ ಅಭಿನಯದ ಆರು ಚಿತ್ರಗಳು ಈ ವರ್ಷ ಬಿಡುಡೆಯಾಗಿದೆ. ಯೋಗಿ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾದರೆ, ಪುನೀತ್​ ರಾಜಕುಮಾರ್​, ದಿಗಂತ್​ ಮತ್ತು ‘ಡಾರ್ಲಿಂಗ್​’ ಕೃಷ್ಣ ಅಭಿನಯದ ತಲಾ ಮೂರು ಚಿತ್ರಳು ಈ ವರ್ಷ ಬಿಡುಗಡೆಯಾಗಿವೆ. ಶಿವರಾಜಕುಮಾರ್​, ಗಣೇಶ್, ರಿಷಭ್​ ಶೆಟ್ಟಿ​ ಮತ್ತು ಶರಣ್​ ಅವರ ತಲಾ ಎರಡು ಚಿತ್ರಗಳು ಹೊರಬಂದಿವೆ. ಈ ವರ್ಷ ಯಾವ್ಯಾವ ಪ್ರಮುಖ ನಟ ಎಷ್ಟೆಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂಬ ಪಟ್ಟಿ ಇಲ್ಲಿದೆ.

    ಧನಂಜಯ್​ – 21 ಹವರ್ಸ್​, ಬೈರಾಗಿ, ಮಾನ್ಸೂನ್​ ರಾಗ, ಹೆಡ್​ ಬುಷ್​, ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ, ತೋತಾಪುರಿ

    ಯೋಗಿ – ಒಂಬತ್ತನೇ ದಿಕ್ಕು, ಕಿರಿಕ್​ ಶಂಕರ್​, ಹೆಡ್​ ಬುಷ್​, ನಾನು ಅದು ಮತ್ತು ಸರೋಜ

    ಪುನೀತ್ – ಜೇಮ್ಸ್​, ದಿ ಲಕ್ಕಿ ಮ್ಯಾನ್​, ಗಂಧದ ಗುಡಿ

    ಕೃಷ್ಣ – ಲವ್​ ಮಾಕ್ಟೇಲ್​ 2, ಲೋಕಲ್​ ಟ್ರೈನ್​, ದಿಲ್​ ಪಸಂದ್, ದಿ ಲಕ್ಕಿ ಮ್ಯಾನ್​

    ದಿಗಂತ್​ – ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಗಾಳಿಪಟ 2, ತಿಮ್ಮಯ್ಯ ಅಂಡ್​ ತಿಮ್ಮಯ್ಯ

    ಶಿವರಾಜಕುಮಾರ್​ – ಬೈರಾಗಿ, ವೇದ

    ಗಣೇಶ್​ – ಗಾಳಿಪಟ 2, ತ್ರಿಬ್ಬಲ್​ ರೈಡಿಂಗ್​

    ಶರಣ್​ – ಅವತಾರ ಪುರುಷ, ಗುರು ಶಿಷ್ಯರು

    ರಿಷಭ್​ ಶೆಟ್ಟಿ – ಹರಿಕಥೆ ಅಲ್ಲ ಗಿರಿಕಥೆ, ಕಾಂತಾರ

    ಪೃಥ್ವಿ ಅಂಬರ್​ – ಬೈರಾಗಿ, ಶುಗರ್​ಲೆಸ್​

    ಸತೀಶ್​ ನೀನಾಸಂ – ಪೆಟ್ರೋಮ್ಯಾಕ್ಸ್​, ಡಿಯರ್​ ವಿಕ್ರಂ (ಓಟಿಟಿ)

    ಸುದೀಪ್​ – ವಿಕ್ರಾಂತ್​ ರೋಣ

    ಉಪೇಂದ್ರ – ಹೋಂ ಮಿನಿಸ್ಟರ್​

    ಯಶ್​ – ಕೆಜಿಎಫ್​ 2

    ರಕ್ಷಿತ್​ ಶೆಟ್ಟಿ – 777 ಚಾರ್ಲಿ

    ರವಿಚಂದ್ರನ್​ – ರವಿ ಬೋಪಣ್ಣ

    ಜಗ್ಗೇಶ್​ – ತೋತಾಪುರಿ

    ವಿನೋದ್​ ಪ್ರಭಾಕರ್​ – ವರದ

    ಪ್ರಜ್ವಲ್​ ದೇವರಾಜ್​ – ಅಬ್ಬರ

    ಅಜೇಯ್​ ರಾವ್​ – ಶೋಕಿವಾಲ, ದಿಲ್​ ಪಸಂದ್​ (ಅತಿಥಿ ಪಾತ್ರ)

    ‘ಮೈ ಅಟಲ್​ ಹೂಂ’ ಚಿತ್ರದ ಫಸ್ಟ್​ಲುಕ್​ ಬಿಡುಗಡೆ; ವಾಜಪೇಯಿ ಪಾತ್ರಧಾರಿ ಯಾರಿರಬಹುದು ಹೇಳಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts