More

    ಸಮುದಾಯ ಭವನಕ್ಕೆ ಶೀಘ್ರವೇ ನಿವೇಶನ ಗುರುತು



    ಮೈಸೂರು : ಸಣ್ಣ ಸಮುದಾಯಕ್ಕೆ ಅವಕಾಶ ಕಡಿಮೆ, ಮುಂದೆ ಬರಲು ಸಾಧ್ಯವಿಲ್ಲ ಎಂದು ಯಾರಿಗೂ ಕೀಳರಿಮೆ ಬೇಡ. ಪ್ರಧಾನಿ ನರೇಂದ್ರ ಮೋದಿ ಅವರು ಸಣ್ಣ ಸಮುದಾಯದವರಾದರೂ ಎರಡು ಬಾರಿ ದೇಶದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ್ದಾರೆ. ಇದಕ್ಕೆ ಸಂವಿಧಾನ ಕಾರಣ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.


    ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಣ್ಣ ಸಣ್ಣ ಸಮುದಾಯದ ಜನರು ಕೂಡ ದೇಶದ ಪ್ರಧಾನಿ ಆಗಬಹುದು ಎಂದು ಅಂಬೇಡ್ಕರ್ ಸಂವಿಧಾನದಲ್ಲಿ ಬರೆದಿದ್ದಾರೆ ಎಂದರು.


    ತಾಲೂಕಿನಲ್ಲಿ ನುಲಿಯ ಚಂದಯ್ಯ ಸಮುದಾಯ ಭವನಕ್ಕೆ ನಿವೇಶನ ಗುರುತು ಮಾಡಿ ಕಟ್ಟಡ ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.
    ಮುಖ್ಯ ಭಾಷಣ ಮಾಡಿದ ವಿಶ್ವ ವಚನ ಫೌಂಡೇಷನ್‌ನ ಸಂಸ್ಥಾಪಕ ವಚನ ಕುಮಾರಸ್ವಾಮಿ, ಶ್ರೀ ನುಲಿಯ ಚಂದಯ್ಯ ಶರಣರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಕಾಯಕದಿಂದಲೇ ಮುಕ್ತಿ ಎಂದು ವಚನಗಳ ಮೂಲಕ ಸಾರಿದ ನುಲಿಯ ಚಂದಯ್ಯ ಅವರು, ಯಾವುದೇ ಕಾಯಕವನ್ನು ಭಾವ ಶುದ್ಧಿಯಿಂದ ಮಾಡಿದರೆ ಪರಮಾತ್ಮ ಒಪ್ಪುತ್ತಾನೆ ಎಂದು ಸಾರಿದರು ಎಂದರು.


    ಇದೇ ವೇಳೆ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನುಲಿಯ ಚಂದಯ್ಯ ಅವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿರಿಸಿ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳ ಸಮೇತ ಮೆರವಣಿಗೆ ಮಾಡಲಾಯಿತು. ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್, ಸದಸ್ಯ ರಾಜು ವಿಶ್ವಕರ್ಮ, ಬಿ.ಜಿ.ಮಹೇಂದ್ರ, ನಾಗರಾಜು, ಪ್ರಭಾಕರ್, ಕೃಷ್ಣ, ಸಂಪತ್ತು, ಜಯರಾಮ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts