More

    ಟಿಎಸ್‌ಎಸ್‌ ಸಂಸ್ಥೆಗೆ 2.35 ಕೋಟಿ ಲಾಭ

    ಶಿರಸಿ: ಟಿಎಸ್‌ಎಸ್ ಈ ಆರ್ಥಿಕ ವರ್ಷದಲ್ಲಿ 2.35 ಕೋಟಿ ರೂ. ನಿಕ್ಕಿ ಲಾಭ ಗಳಿಸಿದ್ದು, ಷೇರು ಸದಸ್ಯರಿಗೆ ಶೇ.20 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಘೋಷಿಸಿದರು.

    ಸಂಸ್ಥೆಯ ಆವರಣದಲ್ಲಿ ಗುರುವಾರ ಆಯೋಜನೆಯಾಗಿದ್ದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಸಂಸ್ಥೆಯ ಖರ್ಚು ವೆಚ್ಚಗಳ ವಿವರ ನೀಡಿದರು
    ಕಳೆದ ಸಾಲಿನಲ್ಲಿ 91,990 ಕ್ವಿಂಟಾಲ್ ಅಡಕೆ ವಹಿವಾಟು ನಡೆಸಲಾಗಿದೆ. 396 ಕೋಟಿ ರೂ. ಗೂ ಅಧಿಕ ಮೌಲ್ಯದ ಅಡಕೆ ಹಾಗೂ 47.49 ಕೋಟಿ ರೂ.ಸಿಹಿ ಅಡಕೆ ಪುಡಿ ಮಾರಾಟ ಮಾಡಲಾಗಿದೆ.

    ಕಿರಾಣಿ ಹಾಗೂ ಸುಪರ್ ಮಾರ್ಕೆಟ್ ನಲ್ಲಿ 328 ಕೋಟಿ ರೂ. ವಹಿವಾಟಾಗಿದೆ. ಸಂಘ ರೈತ ರಕ್ಷಾ ಕವಚ ಯೋಜನೆಯಿಂದ 1496 ಜನರಿಗೆ 3.8 ಕೋಟಿ ಚಿಕಿತ್ಸಾ ಚೆವ್ಛ ಭರಿಸಲಾಗಿದೆ. ರುಣಮುಕ್ತ ಯೋಜನೆಯಲ್ಲಿ 21 ಮೃತರ ಸಾಲ ಬಾಕಿಗೆ 50 ಲಕ್ಷ ರೂ. ಬಳಕೆ ಮಾಡಲಾಗಿದೆ. ಒಟ್ಟಾರೆ ಸದಸ್ಯರಿಗೆ 38.77 ಕೋಟಿ ರೂ. ಆರ್ಥಿಕ ಸೌಲಭ್ಯ ಒದಗಿಸಲಾಗಿದೆ ಎಂದರು.

    ಇದನ್ನೂ ಓದಿ:ನಾಳೆಯೂ ಭಾರಿ ಮಳೆಯ ರೆಡ್‌ ಅಲರ್ಟ್‌ ಶಾಲೆ, ಪಿಯು ಕಾಲೇಜ್‌ಗೆ ರಜೆ ಮುಂದುವರಿಕೆ
    ಸಂಘದ ಸದಸ್ಯರ ಆರ್ಥಿಕ ಶಿಸ್ತು ರೂಢಿಸುವ ಪ್ರಯತ್ನ ಮಾಡಲಾಗುತ್ತಿದೆ. ನಿಯಮದಂತೆ ಸಾಲ ಮಂಜೂರಾತಿ ಮಾಡಲಾಗಿದೆ. ಆಸಾಮಿ ಖಾತೆಯನ್ನು ಶೇ.10.5 ರ ಬಡ್ಡಿಯಲ್ಲಿ ಠೇವು ಭದ್ರತಾ ಸಾಲ,ಮಹಸೂಲು ಭದ್ರತಾ ಸಾಲ ಶೇ.11.5, ಉತ್ಪಾದನಾ ಸಾಲ-ಶೇ.12.5, ಹೆಚ್ಚುವರಿ ಸಾಲ ಶೇ.13.5 ಎಂದು ನಾಲ್ಕು ವಿಧಗಳಾಗಿ ವರ್ಗೀಕರಣ ಮಾಡಿ. ರೈತರಿಗೆ ಬಡ್ಡಿ ದರದ ಭಾರ ಕಡಿಮೆ ಮಾಡಲು ಕ್ರಮ ವಹಿಸಲಾಗಿದೆ ಎಂದರು.

    50 ವರ್ಷದಿಂದ ಮುಂಡಗನ ಮನೆ ಸೊಸೈಟಿಯು ಟಿಎಸ್‌ಎಸ್ ನೊಂದಿಗೆ ವ್ಯವಹಾರ ಮಾಡಿಕೊಂಡು ಬಂದಿದೆ. ಆದರೆ, ಈ ವರ್ಷ ಟಿಎಸ್‌ಎಸ್ ನಮ್ಮ ಸಂಘಕ್ಕೆ ಸಾಲ ಮಂಜೂರು ಮಾಡಿಲ್ಲ. ಇನ್ನು ಇಂಥ ಪರಿಸ್ಥಿತಿ ಉಂಟಾಗದ ಬಗ್ಗೆ ಠರಾವು ಮಾಡಬೇಕು ಎಂದು ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಒತ್ತಾಯಿಸಿದರು. ನಿರ್ದೇಶಕರಾದ ಗಣಪತಿ ರಾಯ್ಸದ್,ಅಣ್ಣಪ ಗೌಡ, ಚಂದ್ರಶೇಖರ ಹೆಗಡೆ, ಶಾರದಾ ಹೆಗಡೆ, ನಾರಾಯಣ ನಾಯ್ಕ, ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ ವೇದಿಕೆಯಲ್ಲಿದ್ದರು.

    ಬೆಳೆ ಸಾಲ ಹಿಂತಿರುಗಿಸಿ

    ಬೆಳೆಸಾಲ ಸದಸ್ಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತಿದೆ. ಸಂಘವು ರೈತರ ಖಾತೆಗಳಿಗೆ ತುಂಬಿಕೊಟ್ಟ ಬೆಳೆಸಾಲ ಸರಿಯಾಗಿ ಮರುಪಾವತಿಯಾಗುತ್ತಿಲ್ಲ ಎಂದು ರಾಮಕೃಷ್ಣ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.
    ಕಳೆದ ವರ್ಷ ಬೆಳೆಸಾಲ ತುಂಬಿಕೊಡದೇ ಇರುವುದಕ್ಕೆ ಸದಸ್ಯರಿಂದ ಸಾಕಷ್ಟು ಆಕ್ಷೇಪ ವ್ಯಕ್ತವಾಗುತ್ತಿದೆ. ಆದರೆ, ಅದಕ್ಕೆ ಸದಸ್ಯರೇ ಕಾರಣ. ನಮ್ಮ ಸಂಘದ ಸದಸ್ಯರೇ ಕೆಡಿಸಿಸಿ ಬ್ಯಾಂಕ್‌ಗೆ ಸಂಘದ ವಿರುದ್ಧ ಇಲ್ಲಸಲ್ಲದ ಪತ್ರ ಬರೆದು, ಸಾಲ ಮಂಜೂರಿಗೆ ತೊಂದರೆ ಮಾಡಿದ್ದಾರೆ. ಮಾತ್ರವಲ್ಲ ಸಂಘದಲ್ಲಿ ಠೇವು ಮಾತ್ರ ಇರಿಸಿ, ಸಾಲ ಪಡೆಯಬೇಡಿ ಎಂದು ಮನೆ, ಮನೆಗೆ ತೆರಳಿ ಪ್ರಚಾರ ಮಾಡಿ ಸದಸ್ಯರ ದಾರಿ ತಪ್ಪಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts