More

    ಜಾತೀಯತೆ, ಭ್ರಷ್ಟಾಚಾರ ಕ್ಯಾನ್ಸರ್‌ಗಿಂತ ಮಾರಕ: ಹೈಕೋರ್ಟ್ ನ್ಯಾಯಮೂರ್ತಿ ಸುಧೀಂದ್ರರಾವ್ ಅಭಿಪ್ರಾಯ; ಸಿರಗುಪ್ಪದಲ್ಲಿ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟನೆ

    ತಾಲೂಕು ವಕೀಲರ ಸಂಘ ದ ಆಶ್ರಯದಲ್ಲಿ

    ಸಿರಗುಪ್ಪ: ಜಾತೀಯತೆ ಹಾಗೂ ಭ್ರಷ್ಟಾಚಾರ ಕ್ಯಾನ್ಸರ್‌ಗಿಂತ ಮಾರಕವಾದ ಕಾಯಿಲೆಯಾಗಿದ್ದು, ಸಮಾಜದ ಏಳಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅವುಗಳ ಮುಕ್ತ ಸಮಾಜ ನಿರ್ಮಾಣ ಇಂದಿನ ಅಗತ್ಯವಾಗಿವೆ ಎಂದು ಬೆಂಗಳೂರಿನ ಹೈಕೋರ್ಟ್ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ಹೇಳಿದರು.

    ನಗರದ ಕೋರ್ಟ್ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ತಾಲೂಕು ವಕೀಲರ ಸಂಘ ದ ಆಶ್ರಯದಲ್ಲಿ ಏರ್ಪಡಿಸಿದ್ದ ಭಾನುವಾರ ಆನ್‌ಲೈನ್ ಮೂಲಕ ನೆರವೇರಿಸಿ ಮಾತನಾಡಿದರು. ಭ್ರಷ್ಟಾಚಾರದಿಂದ ಗಳಿಸಿದ ಸಂಪತ್ತು ಉಳಿಯುವುದಿಲ್ಲ. ಸ್ವರ್ಗ, ನರಕ ಮೇಲೆ ಇಲ್ಲ. ಅದು ಇಲ್ಲೇ ಇದೆ. ನಾವು ಮಾಡಿದ್ದು ಅನುಭವಿಸಲೇಬೇಕು.ಆದ್ದರಿಂದ ನ್ಯಾಯಾಧೀಶರು ಮತ್ತು ವಕೀಲರು ಕಾಯ, ವಾಚ, ಮನಸ್ಸಿನಿಂದ ಸಾರ್ವಜನಿಕರ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.

    ವಕೀಲರ ಸಂಘದ ರಾಜ್ಯಾಧ್ಯಕ್ಷ ಜೆ.ಎಂ.ಅನೀಲ್ ಕುಮಾರ್, ಬಳ್ಳಾರಿ ಜಿಲ್ಲೆಯ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಪುಷ್ಪಾಂಜಲಿ ದೇವಿ, ರಾಜ್ಯ ವಕೀಲರ ಪರಿಷತ್ ಸದಸ್ಯ ಕೆ.ಕೋಟೇಶ್ವರರಾವ್ ಮಾತನಾಡಿದರು. ಸಿರಗುಪ್ಪದ ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ಕೃಷ್ಣರಾಜ್, ಜೆಎಂಎಫ್‌ಸಿ ನ್ಯಾಯಾಧೀಶ ಲೋಕೇಶ ಸಿ.ಎನ್., ಬಳ್ಳಾರಿ ವಿಭಾಗದ ಲೋಕೋಪಯೋಗಿ ಇಲಾಖೆಯ ಇಇ ಅಬ್ದುಲ್ ವಹಾಬ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸ, ಕಾರ್ಯದರ್ಶಿ ಎಸ್.ಮಂಜುನಾಥ, ಉಪಾಧ್ಯಕ್ಷ ಬಿ.ಉದಯಶಂಕರ್, ಖಜಾಂಚಿ ಜಿ.ವಸಂತಕುಮಾರ್, ಜಂಟಿ ಕಾರ್ಯದರ್ಶಿ ರಾಜಶೇಖರಯ್ಯ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts