More

    ಬಳ್ಳಾರಿ ಈರೇಶ್ ನಿರ್ದೇಶಿಸಿರುವ ‘ಸಾವಿತ್ರಿ ಕನುಸು’ ಕಿರುಚಿತ್ರ ತೆರೆಗೆ

    ಸಿರಿಗೇರಿ: ಸ್ನೇಹ ಜೀವಿ ಬಳ್ಳಾರಿ ಈರೇಶ್ ನಿರ್ದೇಶಿಸಿರುವ ‘ಸಾವಿತ್ರಿ ಕನುಸು’ ಕಿರುಚಿತ್ರಕ್ಕೆ ಮುಖಂಡ ಪೂಜಾರಿ ಸಿದ್ದಯ್ಯ ಶನಿವಾರ ಚಾಲನೆ ನೀಡಿದರು.

    ಈ ವೇಳೆ ಮಾತನಾಡಿದ ವಕೀಲ ರಾಮ್‌ಬಾಬು, ಗ್ರಾಮದ ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಸಿರಿಗೇರಿಯು ಕಲಾವಿದರನ್ನು ಹುಟ್ಟುಹಾಕುವ ಹಳ್ಳಿ. ಪಟ್ಟಣದ ಪ್ರಮುಖ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಇಲ್ಲೇ ಚಿತ್ರೀಕರಿಸಿರುವುದು ಹೆಮ್ಮೆಯ ವಿಷಯ ಎಂದರು. ಗ್ರಾಪಂ ಸದಸ್ಯ ಅಡಿವೆಯ್ಯಸ್ವಾಮಿ ಮಾತನಾಡಿ, ಮುರಾರ್ಜಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಸಾವಿತ್ರಿಗೆ ಧೈರ್ಯ ತುಂಬುವ ಸಂದೇಶವನ್ನು ಈ ಚಿತ್ರ ಹೊಂದಿದೆ. ಬಳ್ಳಾರಿ ಈರೇಶ್ ಮುಂಬರುವ ದಿನಗಳಲ್ಲಿ ಇನ್ನೂ ಉತ್ತಮವಾದ ಸಂದೇಶಗಳಿರುವ ಕಿರುಚಿತ್ರಗಳನ್ನು ನಿರ್ದೇಶಿಸಲಿ ಎಂದರು.

    ಸಾವಿತ್ರಿ ಪಾತ್ರಧಾರಿ 6ನೇ ತರಗತಿ ವಿದ್ಯಾರ್ಥಿನಿ ಪುಷ್ಪಾವತಿ, ಶಿಕ್ಷಕನ ಪಾತ್ರಧಾರಿ ಡೇವಿಡ್ ಕುಮಾರ್, ಪ್ರಮುಖರಾದ ಪೂಜಾರಿ ಸಿದ್ದಯ್ಯ, ಉಮಾಪತಿ, ಲಕ್ಷ್ಮಣ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಸ್.ಎಂ.ನಾಗರಾಜ್ ಸ್ವಾಮಿ, ಸದ್ದಾಂ ಹುಸೇನ್, ಶ್ರೀರಾಮ್, ವಕೀಲ ಸುರೇಶ್, ಬಿ.ಹುನುಂತ, ಖಾಜಾಪೀರ್, ಶಿಕ್ಷಕಿ ರಾಧಾ, ಅನಿಲ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts