More

    ಭಕ್ತಿ ಗೀತೆ ರಚನೆಮಾಡಲು ಶ್ರದ್ಧೆ ಅವಶ್ಯ; ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅನಿಸಿಕೆ

    ಸಿರಿಗೇರಿ: ಪಾಶ್ಚಿಮಾತ್ಯ ಧಾರ್ಮಿಕ ಆಚರಣೆಗಿಂತ ನಮ್ಮ ದೇಶದ ಧಾರ್ಮಿಕ ಆಚರಣೆಗಳ ಪದ್ಧತಿಗಳು ವಿಭಿನ್ನವಾಗಿವೆ ಎಂದು ಸಾಹಿತಿ ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಹೇಳಿದರು.

    ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ರಂಗಮಂದಿರದ ಸಭಾಂಗಣದಲ್ಲಿ ಮಂಗಳವಾರ ಅನ್ನಪೂರ್ಣ ಕ್ರಿಯೇಷನ್ಸ್ ಆಯೋಜಿಸಿದ್ದ ಶ್ರೀ ನಾಗನಾಥೇಶ್ವರ 8 ಭಕ್ತಿಗೀತೆಗಳ ಮುದ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

    ಗೀತೆ ರಚನೆ ಮಾಡುವುದಕ್ಕೆ ತುಂಬಾ ಶ್ರದ್ಧೆಬೇಕಾಗುತ್ತದೆ. ಸಾಕಷ್ಟು ಶ್ರಮವಹಿಸಿದ್ದೇನೆ. ಅಡ್ಡಿ ಆತಂಕಗಳು ಇದಕ್ಕೆ ಬಂದೊದಗಿದ್ದವು ಅದನ್ನು ಸರಿಪಡಿಸಿಕೊಂಡು ಶ್ರೀ ನಾಗನಾಥೇಶ್ವರ ಕೃಪೆಗೆ ಪಾತ್ರನಾಗಿದ್ದಾನೆ. ನನ್ನನ್ನು ಈ ಗ್ರಾಮಕ್ಕೆ ಮತ್ತೆ ಮತ್ತೆ ಬರುವ ಹಾಗೆ ಮಾಡಿದೆ. ಭಕ್ತಿ ಒಲಿದಾಗ ಮಾತ್ರ ಇಂತಹ ದೈವದ ಕಾರ್ಯಗಳಿಗೆ ಕ್ರಿಯಾತ್ಮಕತೆ ಬರುವುದು ಎಂದು ಭಾವನಾತ್ಮಕವಾಗಿ ಹೇಳಿದರು.

    ಸಂಗೀತ ನಿರ್ದೇಶನ ಮಾಡಿದ ಮೃತ್ಯುಂಜಯ ದೊಡ್ಡವಾಡ ಭಕ್ತಿ ಗೀತೆಗಳ ಸಾಲುಗಳನ್ನು ಪ್ರಸ್ತುತ ಪಡಿಸಿದರು. ಅನ್ನಪೂರ್ಣ ಕ್ರಿಯೇಷನ್‌ನ ಮಾಲಿಕ ಸಿರಿಗೇರಿ ಯರಿಸ್ವಾಮಿ ಮಾತನಾಡಿ, ಡಾ.ದೊಡ್ಡರಂಗೇಗೌಡರಂಥ ದೊಡ್ಡ ವ್ಯಕ್ತಿಗಳು ನಮ್ಮ ಗ್ರಾಮಕ್ಕೆ ಬರುತ್ತಿರುವುದು ನಮ್ಮ ಹಮ್ಮೆಯ ಸಂಗತಿ. ಅವರ ಸರಳತೆ ಇತರರಿಗೆ ಮಾದರಿ ಎಂದರು.

    ಶಂಭುಲಿಂಗೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಹೂಗಾರ ಬಸವರಾಜ, ಮೃತ್ಯುಂಜಯ ದೊಡ್ಡವಾಡ, ಸಿರಿಗೇರಿ ಯರಿಸ್ವಾಮಿ ಕಲಾವಿದ ಗೋವಿಂದವಾಡ ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts