More

    ಜ್ಞಾನದ ಮಕರಂದ ಹೀರಬೇಕು

    ಸಿರಿಗೆರೆ: ಪರೀಕ್ಷೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಓದಿನ ಮೇಲೆ ಹೆಚ್ಚು ಗಮನವಿರಬೇಕು. ಟಿವಿ, ಮೊಬೈಲ್, ಚಲನಚಿತ್ರಗಳಿಂದ ದೂರವಿರಬೇಕು ಎಂದು ದಾವಣಗೆರೆಯ ಎವಿಕೆ ಕಾಲೇಜಿನ ಉಪನ್ಯಾಸಕಿ ಎಂ.ಸಿ.ಗೀತಾ ಕಿವಿಮಾತು ಹೇಳಿದರು.

    ಸ್ಥಳೀಯ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಸಮಾರೋಪದದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಜೇನು ನೊಣಗಳಂತೆ ಜ್ಞಾನದ ಮಕರಂದ ಹೀರಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಐ.ಜಿ.ಚಂದ್ರಶೇಖರಯ್ಯ ಮಾತನಾಡಿ, ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಚಂಚಲತೆ ಇರುತ್ತದೆ. ಈ ವೇಳೆ ಎಚ್ಚರ ವಹಿಸಿ ಓದಿನಲ್ಲಿ ತೊಡಗಿಸಿಕೊಂಡರೆ ಸಾಧನೆ ಸುಲಭವಾಗುತ್ತದೆ ಎಂದು ತಿಳಿಸಿದರು.

    ಪಿಯು ಡಿಡಿ ಆರ್.ನಾಗರಾಜಪ್ಪ ಮಾತನಾಡಿ, ಉಪನ್ಯಾಸಕ ಸಂಘದ ಕಾರ್ಯದರ್ಶಿ ಎಚ್.ಎ.ವಿಶ್ವಕುಮಾರ್, ಕಾಲೇಜು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್, ವೈ.ಡಿ.ಚಂದ್ರಶೇಖರಯ್ಯ, ಉಪನ್ಯಾಸಕಿ ಬಿ.ಜಯಮ್ಮ, ದೈಹಿಕ ಶಿಕ್ಷಣ ಉಪನ್ಯಾಸಕ ಎನ್.ಪಾಂಡು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts