More

    ವಿದ್ಯಾರ್ಥಿಗಳು, ಪಾಲಕರ ಗೊಂದಲ ಪರಿಹರಿಸಿ

    ವಿಜಯಪುರ: ಕರ್ನಾಟಕ ರಾಜ್ಯಾದ್ಯಂತ ನಡೆದ ವಿವಿಧ ವೃತ್ತಿಪರ ಕೋಸ್​ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಪಠ್ಯಕ್ರಮದ ಆಚೆಗಿನ ಪ್ರಶ್ನೆಗಳನ್ನು ಕೇಳಿರುವುದು ವಿದ್ಯಾರ್ಥಿಗಳ ಗೊಂದಲಕ್ಕೆ ಕಾರಣವಾಗಿದೆ.
    ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೂಕ್ತ ಕೃಪಾಂಕವನ್ನು ಕೊಟ್ಟು ತಕ್ಷಣವೇ ಈ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಬೇಕು ಎಂದು ನಗರದ ಪ್ರತಿಷ್ಠಿತ ಎಕ್ಸಲೆಂಟ್​ ಪದವಿಪೂರ್ವ ವಿಜ್ಞನ ಕಾಲೇಜಿನ ಪ್ರಾಚಾರ್ಯ, ಸಿಇಟಿ ತರಬೇತುದಾರ ಶ್ರೀಕಾಂತ ಕೆ.ಎಸ್​. ಮನವಿ ಮಾಡಿದ್ದಾರೆ.

    ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಸಿಇಟಿ ಪರೀಕ್ಷೆಯಲ್ಲಿ ಹಳೆಯ ಎನ್​.ಸಿ.ಇ.ಆರ್​.ಟಿ. ಪಠ್ಯದಲ್ಲಿನ ಪ್ರಶ್ನೆಗಳು ಬಂದಿವೆ. ಹೊಸ ಪಠ್ಯದಲ್ಲಿ ಇಲ್ಲದಿರುವ ಪ್ರಶ್ನೆಗಳು ಬಂದಿದ್ದು ವಿದ್ಯಾರ್ಥಿಗಳಿಗೆ ಗೊಂದಲವಾಗಿದ್ದು ಸಹಜ. ರಸಾಯನಶಾಸದಲ್ಲಿ 18, ಭೌತಶಾಸದಲ್ಲಿ 5, ಗಣಿತದಲ್ಲಿ 11 ಹಾಗೂ ಜೀವಶಾಸದಲ್ಲಿ 10 ಪ್ರಶ್ನೆಗಳು ಪಠ್ಯಕ್ರಮ ಮೀರಿ ಬಂದಿದೆ.

    ಇದರಿಂದ ವಿದ್ಯಾರ್ಥಿಗಳು ಗಲಿಬಿಲಿಗೊಂಡಿದ್ದಾರೆ. ಅದರಲ್ಲೂ ಗ್ರಾಮಾಂತರ ಪ್ರದೇಶದಿಂದ ಬಂದ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಕೊರತೆ ಇರದಿರುವುದರಿಂದ ಕಂಗಾಲಾಗಿದ್ದಾರೆ.

    ಯಾವುದೇ ಪರೀಕ್ಷೆಯ ಪ್ರಶ್ನೆಪತ್ರಿಕೆ ವಿದ್ಯಾರ್ಥಿ ಸ್ನೇಹಿಯಾಗಿರಬೇಕು. ಅಂದ ಮಾತ್ರಕ್ಕೆ ಸರಳ ಪ್ರಶ್ನೆಗಳು ಕೇಳಬೇಕೆಂದಲ್ಲ. ಕಠಿಣ ಪ್ರಶ್ನೆಗಳಿದ್ದರೂ ಅದೆಲ್ಲವೂ ಪಠ್ಯಕ್ರಮದಲ್ಲಿ ಇರಬೇಕು. ಹೀಗೆ ಪಠ್ಯಕ್ರಮದ ಆಚೆಗಿನ ಪ್ರಶ್ನೆಗಳು ಕೇಳಿದರೆ ವಿದ್ಯಾರ್ಥಿಗಳು ಹೇಗೆ ಉತ್ತರಿಸಿಯಾರು? ಎಂದು ಪ್ರಶ್ನಿಸಿದ್ದಾರೆ.

    ಇದರಿಂದ ಅತ್ಯುತ್ತಮ ರ್ಯಾಂಕ್​ ಪಡೆದು ವೈದ್ಯಕಿಯ, ಇಂಜಿನಿಯರಿಂಗ್​, ಕೃಷಿ ವಿಜ್ಞಾನ, ಪಶು ವೈದ್ಯಕಿಯ ಮುಂತಾದ ವೃತ್ತಿಪರ ಕೋರ್ಸ್​ಗಳಿಗೆ ಸೇರಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳ ಆಸೆಗೆ ತಣ್ಣೀರು ಎರೆಚಿದಂತಾಗಿದೆ. ತಕ್ಷಣವೇ ಈ ಬಗ್ಗೆ ಇಲಾಖೆ ಪರಾಂಭರಿಸಿ ಕೃಪಾಂಕವನ್ನು ಬಿಡುಗಡೆ ಮಾಡಬೇಕು ಎಂದು ಇಲಾಖೆಗೆ ವಿನಂತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts