More

    ಹಾನಿಗೀಡಾದ ಭತ್ತ ಬೆಳೆಗೆ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಿ ; ಎಂಎಲ್ಸಿ ಎನ್.ಎಸ್.ಬೋಸರಾಜು

    ಸಿರವಾರ: ಅಕಾಲಿಕ ಮಳೆಯಿಂದಾಗಿ ಅಪಾರ ಭತ್ತದ ಬೆಳೆ ಹಾನಿಗೀಡಾಗಿದೆ. ಸರ್ಕಾರ ಮೊದಲ ಹಂತದ ಪರಿಹಾರ ನೀಡಿದ್ದು, ಕೂಡಲೇ ಸಂಪೂರ್ಣ ಸರ್ವೇ ನಡೆಸಿ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಎಂಎಲ್ಸಿ ಎನ್.ಎಸ್.ಭೋಸರಾಜು ಹೇಳಿದರು.

    ತಾಲೂಕಿನ ಜಾಲಾಪುರ ಕ್ಯಾಂಪ್ ವ್ಯಾಪ್ತಿಯಲ್ಲಿ ಮಳೆ, ಗಾಳಿಯಿಂದ ಹಾನಿಗೊಳಗಾದ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು. ಕಟಾವು ಹಂತಕ್ಕೆ ಬಂದಿದ್ದ ಭತ್ತ ಮಳೆ, ಗಾಳಿಗೆ ನೆಲಕ್ಕುರುಳಿದೆ. ಸರ್ಕಾರ ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

    ಲಾಕ್‌ಡೌನ್‌ನಿಂದ ಬೀದಿ ಬದಿಯ ವ್ಯಾಪಾರಿಗಳು, ಕ್ಷೌರಿಕರಿಗೆ ಸಹಾಯ ಧನವಾಗಿ 10 ಸಾವಿರ ರೂ. ನೀಡಬೇಕು. ನಗರ ಪ್ರದೇಶದಗಳಿಂದ ಬಂದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ನೀಡಬೇಕು ಎಂದರು.

    ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ಚುಕ್ಕಿ ಸೂಗಪ್ಪ ಸಾಹುಕಾರ್, ಶಿವಶರಣ ಸಾಹುಕಾರ್ ಅರಕೇರಿ, ಎಂ.ಸುಬ್ರಹ್ಮಣ್ಯ,ದಾನನಗೌಡ, ನಾಗರಾಜಗೌಡ, ದೇವಣ್ಣ ನವಲಕಲ್, ಸೂರಿ ದುರ್ಗಣ್ಣ, ಚುಕ್ಕಿ ಶಿವುಕುಮಾರ ಸಾಹುಕಾರ್, ಚಂದ್ರು ಸಾಹುಕಾರ್ ನೀಲಗಲ್, ಸೂಗಪ್ಪ ಹೂಗಾರ್, ಕೆ.ಅಮರೇಶ, ಮೌಲಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts