More

    ಆಂಜನೇಯ ಉಚ್ಚಾಯ ಮಹೋತ್ಸವ

    ಸಿರವಾರ: ಎಳ್ಳ ಅಮಾವಾಸ್ಯೆ ಅಂಗವಾಗಿ ರೈತರು ಜಮೀನುಗಳಲ್ಲಿ ಪೂಜೆ ಸಲ್ಲಿಸಿದರು. ಹೋಳಿಗೆ, ಅನ್ನ, ಸಾರು ಸೇರಿ ವಿಶೇಷ ಖಾದ್ಯ ತಯಾರಿಸಿಕೊಂಡು ಕುಟುಂಬ ಸಮೇತರಾಗಿ ಜಮೀನುಗಳಿಗೆ ತೆರಳಿ ಐದು ಕಲ್ಲುಗಳನ್ನು ಇಟ್ಟು ಪಾಂಡವರನ್ನು ನೆನೆದು ಪೂಜಿಸಿದರು. ನೈವೇದ್ಯ ಸಮರ್ಪಿಸಿ ಹೊಲದಲ್ಲಿ ಚರಗ ಚಲ್ಲಿದರು. ಫಸಲಿಗೆ ಉತ್ತಮ ಬೆಲೆ ಸಿಗಲಿ, ಬೆಳೆ ಸಮೃದ್ಧಿಯಾಗಿ ಬರಲಿ, ಭೂತಾಯಿ ಸಂಪನ್ನವಾಗಿರಲಿ ಎಂದು ಪ್ರಾರ್ಥಿಸಿದರು. ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆದವು. ಭಕ್ತರು ಹರಕೆ ಪೂರೈಸಿದರು. ಸಂಜೆ ಸಾವಿರಾರು ಭಕ್ತರ ಮಧ್ಯೆ ಆಂಜನೇಯ ಉಚ್ಚಾಯ ಮಹೋತ್ಸವ ಅದ್ದೂರಿಯಾಗಿ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts