More

    ಪಂಚಭೂತಗಳಿಗೆ ಹಿರಿ ಮಗಳಿಂದ ಪೂಜೆ ಸಲ್ಲಿಕೆ

    ಕವಿತಾಳ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎಳ್ಳ ಅಮಾವಾಸ್ಯೆಯನ್ನು ಗುರುವಾರ ಸಡಗರದಿಂದ ಆಚರಿಸಲಾಯಿತು. ಹಿಂಗಾರು ಬೆಳೆಗಳು ಕಾಳು ಬಿಡುವ ಸಮಯವಾದ್ದರಿಂದ ರೈತರಿಗೆ ಎಳ್ಳ ಅಮಾವಾಸ್ಯೆ ವಿಶೇಷ ಹಬ್ಬವಾಗಿದೆ.

    ರೈತರು ನಸುಕಿನಲ್ಲಿ ಮೃಷ್ಟಾನ್ನ ಭೋಜನ ಸಿದ್ಧಪಡಿಸಿಕೊಂಡು ಹೊಸ ಉಡುಪುಗಳನ್ನು ತೊಟ್ಟು ಕುಟುಂಬ ಸಮೇತ ಹೊಲಕ್ಕೆ ತೆರಳಿ ಬನ್ನಿ ಮರದ ಬುಡದಲ್ಲಿ 5 ಕಲ್ಲುಗಳನ್ನು ಪ್ರತಿಷ್ಠಾಪಿಸಿ ಮನೆಯ ಹಿರಿಯ ಮಗಳಿಂದ ಪಂಚ ಭೂತಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಮನೆಯಿಂದ ಆಹಾರವನ್ನು ಹೊಲದ ವಿವಿಧೆಡೆ ಎರಚಿ (ಚರಗ ಚಲ್ಲಿ) ಕುಟುಂಬ ಸಮೇತ ಊಟ ಮಾಡಿದರು.

    ಹೊಲದಿಂದ ಮನೆಗೆ ತೆರಳುವಾಗ ಹೊಲದಲ್ಲಿ ಬೆಳೆದ ಐದು ಸಸಿಗಳನ್ನು ಕಿತ್ತುತಂದು ಊರಿನ ಆರಾಧ್ಯ ದೇವರ ಗುಡಿಯಲ್ಲಿ ಇಟ್ಟು ನಂತರ ಮನೆಯಲ್ಲಿ ಎತ್ತುಗಳಿಗೆ ಪೂಜೆ ಸಲ್ಲಿಸಿದರು. ಬರಗಾಲದಿಂದಾಗಿ ಬೆಳೆ ಬೆಳೆಯದಿದ್ದರೂ, ಕೆಲವರ ಹೊಲದಲ್ಲಿ ಇಳುವರಿ ಕಡಿಮೆಯಾದರೂ ರೈತರು ಸಂಪ್ರದಾಯ ಪಾಲಿಸಿದರು. ಚರಗ ಚೆಲ್ಲುವುದರಿಂದ ಭೂತಾಯಿ ಸಂತೃಪ್ತಗೊಂಡು ಉತ್ತಮ ಫಸಲು ನೀಡುತ್ತಾಳೆ ಎಂಬುದು ರೈತರ ನಂಬಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts