More

    ಸಿರಸಂಗಿ ಲಿಂಗರಾಜರ ಕೊಡುಗೆ ಅವಿಸ್ಮರಣೀಯ

    ನವಲಗುಂದ: ತ್ಯಾಗವೀರ ಸಿರಸಂಗಿ ಲಿಂಗರಾಜರು ಸೂಫಿ ಸಂತರಿಗೆ ಈ ನಾಡಿನ ಉದ್ಧಾರಕ್ಕಾಗಿ ಸಾಕಷ್ಟು ಜಮೀನು ನೀಡುವ ಮೂಲಕ ಭಾವೈಕ್ಯ ಮೆರೆದಿದ್ದಾರೆ ಎಂದು ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

    ಪಟ್ಟಣದ ಲಿಂಗರಾಜ ವೃತ್ತದಲ್ಲಿರುವ ಆಸಾರ ಶರೀಫ್ (ಮಹ್ಮದ್ ಪೈಗಂಬರ ಅವರ ದರ್ಗಾ) ಆವಣರದಲ್ಲಿ ಬುಧವಾರ ಆಯೋಜಿಸಿದ್ದ ಸಿರಸಂಗಿ ಲಿಂಗರಾಜರ 163ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ದಾನ-ಧರ್ಮದಲ್ಲಿ ಲಿಂಗರಾಜರ ಮನೆತನ ಎತ್ತಿದ ಕೈ. ಹೀಗಾಗಿ, ಅಂಥವರನ್ನು ನೆನೆಯುವುದು ನಮ್ಮೆಲ್ಲರ ಪುಣ್ಯ. ಮುಂದಿನ ಜನಾಂಗದ ಭವಿಷ್ಯಕ್ಕಾಗಿ ಶಿಕ್ಷಣ ಸಂಸ್ಥೆಗಳಗೆ ನೀಡಿರುವ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯ ಎಂದರು.

    ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಅಕ್ಕಮಹಾದೇವಿ ಬಣಗಾರ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸಿ ಕೃಷಿಗೆ ನೀರಾವರಿ ಯೋಜನೆ ಕಲ್ಪಿಸಿಕೊಟ್ಟವರು ಸಿರಸಂಗಿ ಲಿಂಗರಾಜ ದೇಸಾಯಿ ಎಂದರು.

    ಲಿಂಗರಾಜ ಸರದೇಸಾಯಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿವರ್ಷದಂತೆ ಮುಸ್ಲಿಂ ಸಮಾಜದ ಪೀರಜಾದೆ ಕುಟುಂಬದವರು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಸಿರಸಂಗಿ ಲಿಂಗರಾಜರ ಜಯಂತಿ ಆಚರಣೆ ಮಾಡಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಮೈನುದ್ದೀನ್ ಪೀರಜಾದೆ, ಕುಡ ಒಕ್ಕಲಿಗ ಸಮಾಜದ ಅಧ್ಯಕ್ಷ ನಿಂಗಣ್ಣ ಹಳ್ಳದ, ರಾಯನಗೌಡ ಪಾಟೀಲ, ಪ್ರಕಾಶ ಶಿಗ್ಲಿ, ಸೈಫುದ್ದಿನ್ ಅವರಾದಿ, ಅಬ್ಬಾಸ ದೇವರಿಡು, ಮಂಜುನಾಥ ಸುಬೇದಾರ, ರಿಯಾಜ್ ಅಹ್ಮದ್ ಪೀರಜಾದೆ, ಬಸವರಾಜ ಹರಿವಾಳದ, ಅಣ್ಣಪ್ಪ ಬಾಗಿ, ಡಿ.ಕೆ. ಹಳ್ಳದ, ಶಿವಪ್ಪ ಸಂಗಟಿ, ಅಡಿವೆಪ್ಪ ಶಿರಸಂಗಿ ಇತರರು ಇದ್ದರು. ಇದಕ್ಕೂ ಮೊದಲು ತಡಿ ಮಠದಲ್ಲಿ ಲಿಂಗರಾಜರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಲಿಂಗರಾಜ ವೃತ್ತದಲ್ಲಿರುವ ಮೂರ್ತಿಗೆ ವಿವಿಧ ಗಣ್ಯರಿಂದ ಮಾಲಾರ್ಪಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts