More

    ಶಾಸಕನ ವಿರುದ್ಧ ಬಿಜೆಪಿ ಪ್ರಮುಖರ ಅಸಮಾಧಾನ

    ಸಿರಗುಪ್ಪ: ಶಾಸಕ ಎಂ.ಎಸ್.ಸೋಮಲಿಂಗಪ್ಪ ಪಕ್ಷದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿ 20ಕ್ಕೂ ಹೆಚ್ಚು ಸ್ಥಳೀಯ ಮುಖಂಡರು ಭಾನುವಾರ ನಗರದ ಹೊರವಲಯದ ಲೇಔಟ್‌ನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಶಾಸಕರು ಕೇಂದ್ರಿಕೃತ ಅಡಳಿತ ನಡೆಸುತ್ತಿದ್ದಾರೆ. ಆದ್ದರಿಂದ ಈ ಬಾರಿ ಅವರಿಗೆ ಪಕ್ಷದ ಹೈಕಮಾಂಡ್ ಎಂ.ಎಸ್.ಸೋಮಲಿಂಗಪ್ಪ ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಬಾರದು ಎಂದು ಒಕ್ಕೊರಲ್ ಧ್ವನಿಯಲ್ಲಿ ಒತ್ತಾಯಿಸಿದ್ದಾರೆ.

    ತೆಕ್ಕಲಕೋಟೆ ಪಪಂ ಮಾಜಿ ಅಧ್ಯಕ್ಷ ಜಿ.ಸಿದ್ದಪ್ಪ ಮಾತನಾಡಿ, ಪಕ್ಷದ ಕಾರ್ಯಕರ್ತರಿಗೆ ಶಾಸಕರು ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ. ಸುಮಾರು 15 ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿ ದುಡಿದ ನಮಗೆ ಪಕ್ಷದ ಯಾವುದೇ ವಿಚಾರಗಳ ಮಾಹಿತಿ ನೀಡುವಲ್ಲಿ ಸಂಪೂರ್ಣ ನಿರ್ಲಕ್ಷೃ ವಹಿಸಿದ್ದಾರೆ. ಇತ್ತಿಚಿಗೆ ಬಳ್ಳಾರಿಗೆ ಪಕ್ಷದ ರಾಜ್ಯಾಧ್ಯಕ್ಷರು ಆಗಮಿಸಿ ಸಭೆ ನಡೆಸಿದ್ದರು. ಈ ಬಗ್ಗೆ ಮಾಹಿತಿ ನೀಡದೆ ತಮಗೆ ಬೇಕಿದ್ದ ಕಾರ್ಯಕರ್ತರೊಂದಿಗೆ ತೆರಳಿದ್ದರು. ಇದು ಸರಿಯಲ್ಲ ಎಂದರು. ಈಗಾಗಲೇ ಮೂರು ಬಾರಿ ಶಾಸಕರಾಗಿರುವ ಎಂ.ಎಸ್.ಸೋಮಲಿಂಗಗೆ ಅಥವಾ ಅವರ ಕುಟುಂಬಕ್ಕೆ ಟಿಕೆಟ್ ನೀಡಿದರೆ ಒಂದೇ ಕುಟುಂಬಕ್ಕೆ ಪದೇ ಪದೆ ಅವಕಾಶ ನೀಡಿದಂತಾಗುತ್ತದೆ. ಕಾರಣ ಹೈಕಮಾಂಡ್ ಇವರನ್ನು ಬಿಟ್ಟು ಬೇರೆ ಅರ್ಹರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

    ಮೊತ್ತೊಬ್ಬ ಮುಖಂಡ ಕೊಡ್ಲೆ ಮಲ್ಲಿಕಾರ್ಜುನ ಮಾತನಾಡಿ, ಹಾಲಿ ಶಾಸಕರು ನಿಷ್ಠವಂತ ಕಾರ್ಯಕರ್ತರ ಬಗ್ಗೆ ಗಮನ ಹರಿಸುತ್ತಿಲ್ಲ. ಕ್ಷೇತ್ರದಲ್ಲಿ ಯಾವುದೇ ಕಾರ್ಯಕರ್ತರನ್ನು ಉತ್ತಮರೀತಿಯಲ್ಲಿ ಬೆಳೆಸುತ್ತಿಲ್ಲ. ಅವರದು ಹಿಟ್ಲರ್ ಅಡಳಿತ. ಇದು ಕಾರ್ಯಕರ್ತರಿಗೆ ನೋವು ತಂದಿದೆ. ಕಾರಣ ಹೈಕಮಾಂಡ್ ಪಕ್ಷವನ್ನು ಸಮರ್ಪಕವಾಗಿ ಮುನ್ನಡೆಸುವ ಬೇರೆ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂದರು.

    ತಾಪಂ ಮಾಜಿ ಅಧ್ಯಕ್ಷ ಮುದ್ದುವೀರಪ್ಪ, ವಿವಿಧ ಗ್ರಾಮಗಳ ಮುಖಂಡರಾದ ಬೆಳಗಲ್ಲು ಮಂಜುನಾಥ, ದೊಡ್ಡ ಎರ‌್ರಿಸ್ವಾಮಿ ಮೊದಲಾದವರು ಶಾಸಕರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖರಾದ ವಿರೂಪಾಕ್ಷಿ, ದೇವೇಂದ್ರಪ್ಪ, ರವಿಕುಮಾರ್, ಬೈರಾಪುರ ಶಾಂತನಗೌಡ, ತಿಮ್ಮಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts