More

    ಆರೋಗ್ಯ ಸೇವೆ ಸಿಗದೆ ಪ್ರತಿಭಟನೆ

    ಸಿರಗುಪ್ಪ: ತಾಲೂಕಿನ ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ಇರುವುದನ್ನು ಖಂಡಿಸಿ ಇಲ್ಲಿಗೆ ಬಂದ ರೋಗಿಗಳು ಮತ್ತು ಸಂಬಂಧಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

    ಕರೂರು ಗ್ರಾಮಸ್ಥ ಕೆ.ಬಸವರೆಡ್ಡಿ ಮಾತನಾಡಿ, 16 ಹಳ್ಳಿಗಳ ಗ್ರಾಮಸ್ಥರು ಈ ಕೇಂದ್ರ ಅವಲಂಬಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ಇರುವುದರಿಂದ ಗರ್ಭಿಣಿಯರು, ಇತರ ರೋಗಗಳಿಗೆ ಚಿಕಿತ್ಸೆ ಪಡೆಯಲು, ತಪಾಸಣೆ ಮಾಡಿಸಿಕೊಳ್ಳಲು, ಔಷಧ ಪಡೆಯಲು ಬಂದಿರುವವರು ಕಾಯುತ್ತಾ ಕುಳಿತಿದ್ದಾರೆ. ವೈದ್ಯರಿಗೆ ಮತ್ತು ಸಿಬ್ಬಂದಿಗೆ ಕರೆ ಮಾಡಿ ಕೇಳಿದರೆ ‘ನಾವು ಡ್ಯೂಟಿಯಲ್ಲಿಲ್ಲ, ರಜೆಯ ಮೇಲೆ ಹೋಗಿದ್ದೇವೆ’ ಎಂದು ಸಿಬ್ಬಂದಿ ತಿಳಿಸಿದರೆ, ‘ನಮಗೆ ಮೀಟಿಂಗ್ ಇದೆ. ಆದ್ದರಿಂದ ಇಂದು ಆಸ್ಪತ್ರೆಗೆ ಬರುತ್ತಿಲ್ಲ’ ಎೆಂದು ವೈದ್ಯರು ತಿಳಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ ದೂರವಾಣಿ ಮುಖಾಂತರ ಗ್ರಾಮಸ್ಥರೊಂದಿಗೆ ಮಾತನಾಡಿ, ತಕ್ಷಣವೇ ಈ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ, ಆರೋಗ್ಯ ಸೇವೆ ಒದಗಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು. ಉತ್ತನೂರು, ಕರೂರು, ದರೂರು, ಹಾಗಲೂರು, ಎಚ್.ಹೊಸಳ್ಳಿ, ಬೂದುಗುಪ್ಪ, ಗೋಸಬಾಳು, ಭೈರಾಪುರ ಗ್ರಾಮಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts