More

    ಬೆಳೆಗಳಿಗೆ ಆಸರೆಯಾದ ಜಿಟಿ ಜಿಟಿ ಮಳೆ

    ಸಿರಗುಪ್ಪ: ಕಳೆದ 5 ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಬಿತ್ತನೆಗೊಂಡ ಬೆಳೆಗಳಿಗೆ ಆಸರೆಯಾಗಿದ್ದು, ಭತ್ತದ ಸಸಿ ಮಡಿಗಳಿಗೂ ಕಳೆ ಬಂದಿದೆ.

    ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 28 ರಿಂದ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖ ಬೆಳೆಯಾಗಿ ಭತ್ತ ಬೆಳೆಯಲಾಗುತ್ತಿದ್ದು, ಜಲಾಶಯ ಮೇಲ್ಭಾಗದಲ್ಲಿ ಅನೇಕ ದಿನಗಳಿಂದ ಮಳೆಯಾಗದೆ ತಲೆಮೇಲೆ ಕೈಹೊತ್ತು ಕುಳಿತಿದ್ದ ರೈತರಿಗೆ, ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಿರುವುದು ಹರ್ಷ ತಂದಿದೆ. ಒಣಗಲಾರಂಭಿಸಿದ್ದ ಭತ್ತದ ಸಸಿ ಮಡಿಗಳಿಗೆ ಜಿಟಿ ಜಿಟಿ ಮಳೆ ಜೀವ ಕಳೆ ತಂದಿದ್ದು, ಭತ್ತ ನಾಟಿಗೂ ರೈತರು ಸಿದ್ಧರಾಗುವಂತೆ ಮಾಡಿದೆ.

    ಅಲ್ಲದೆ ಮಳೆಯಾಶ್ರಿತ 8843 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ತಾಲೂಕಿನ ಹಗರಿ ನದಿ ಪಾತ್ರದ 75 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬೆಳೆ ಬೆಳೆಯಲಾಗಿದೆ. ಕೆಲ ರೈತರು ಮೆಣಸಿನ ಸಸಿ ನಾಟಿ ಬದಲು ನೀರು ಮತ್ತು ಸಮಯ ಉಳಿಸಲು ಮೆಣಸಿನಕಾಯಿ ಬೀಜ ಬಿತ್ತನೆಗೆ ಮುಂದಾಗಿದ್ದಾರೆ. ನಮ್ಮ ಭಾಗದಲ್ಲಿ ಹದ ಮಳೆಯಾದ್ದರಿಂದ ಮೆಣಸಿನ ಬೀಜವನ್ನು ಟ್ರಾೃಕ್ಟರ್ ಮೂಲಕ ಬಿತ್ತನೆ ಮಾಡುತ್ತಿದ್ದೇವೆ ಎಂದು ತೆಕ್ಕಲಕೋಟೆ ರೈತ ಹೊಸಮನೆ ಮಲ್ಲಯ್ಯ ತಿಳಿಸಿದ್ದಾರೆ.

    ಇದನ್ನೂ ಓದಿ: ಮಳೆ ಹಾನಿ; ಬಿಜೆಪಿಯ ಎರಡು ತಂಡಗಳು ಖುದ್ದು ಸಮೀಕ್ಷೆ

    ತಾಲೂಕಿನಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರೆ ಶೇ.100 ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮುಗಿದಿರುತ್ತಿತ್ತು. ಸಕಾಲಕ್ಕೆ ಮಳೆ ಬಾರದೆ 13ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ವಿವಿಧ ಬೆಳೆ ಬೆಳೆಯಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts