More

    ಸಿರಗುಪ್ಪ ತಾಲೂಕಿನಲ್ಲಿ ಉತ್ತಮ ಮಳೆ: ರೈತರಿಗೆ ಖುಷಿ, ಗರಿಗೆದರಿದ ಕೃಷಿ ಚಟುವಟಿಕೆ


    ಸಿರಗುಪ್ಪ: ಮುಂಗಾರು ಪ್ರವೇಶಿಸಿದ ಎರಡು ವಾರಗಳ ಬಳಿಕ ತಾಲೂಕಿನಲ್ಲಿ ಶನಿವಾರ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ.

    ಶನಿವಾರ ಸಂಜೆಯಿಂದ ಭಾನುವಾರ ಮಧ್ಯಾಹ್ನದವರೆಗೆ ಸಿರಗುಪ್ಪದಲ್ಲಿ 29 ಮಿಮೀ, ಹಚ್ಚೊಳ್ಳಿ 43.2, ರಾವಿಹಾಳ್ 30.4, ಕರೂರು 34.4, ಕೆ.ಬೆಳಗಲ್ 31.4, ತೆಕ್ಕಲಕೋಟೆ 31.6, ಸಿರಿಗೇರಿ 15.3, ಎಂ.ಸೂಗೂರು ಹೋಬಳಿಯಲ್ಲಿ 24.2 ಮಿಲಿ ಮೀಟರ್ ಮಳೆಯಾಗಿದೆ.

    ರೈತರು ಈಗಾಗಲೇ ಹತ್ತಿ, ಕಬ್ಬು, ಸೂರ್ಯಕಾಂತಿ, ಸಜ್ಜೆ, ತೊಗರಿ ಮುಂತಾದ ಬೆಳೆಗಳು ಬಿತ್ತನೆ ಮಾಡಿದ್ದು, ಮಳೆಗಾಗಿ ಕಾದು ಕುಳಿತಿದ್ದರು. ಎರಡು ವಾರಗಳಿಂದ ಮಳೆ ಇಲ್ಲದ ಕಾರಣ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗಿತ್ತು. ಆದರೆ, ಶನಿವಾರ ಸಂಜೆಯಿಂದ ಭಾನುವಾರ ಮಧ್ಯಾಹ್ನದವರೆಗೆ ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

    ಹಳ್ಳಕೊಳ್ಳಗಳಲ್ಲಿ ನೀರು ಹರಿಯುತ್ತಿದ್ದು ಭತ್ತ ನಾಟಿ ಮಾಡಲು ಬೇಕಾದ ಸಸಿ ಮಡಿ ತಯಾರಿಸಲು ರೈತರು ಮುಂದಾಗಿದ್ದಾರೆ. ಈಗಾಗಲೇ ಕೆಲವು ಕಡೆ ಬೆಳೆಸಿದ ಸಸಿಮಡಿಗಳಿಗೆ ಶನಿವಾರದ ಮಳೆ ಅನುಕೂಲವಾಗಿದೆ. ತಾಲೂಕಿನ ರಾರಾವಿ, ಬಗ್ಗೂರು ಗ್ರಾಮದ ಸುತ್ತಲೂ ಉತ್ತಮ ಮಳೆಯಾಗಿರುವುದರಿಂದ ಕಬ್ಬಿನಗದ್ದೆ ಮತ್ತು ಸಸಿಮಡಿಗಳಲ್ಲಿ ನಿಂತ ನೀರು ಹೊರಹೋಗಲು ರೈತರು ಬಸಿಕಾಲುವೆಗಳನ್ನು ತೆಗೆಯುತ್ತಿರುವುದು ಕಂಡುಬಂತು. ಇನ್ನು ಬಿತ್ತನೆ ಮಾಡಲಿರುವವ ರೈತರಿಗೂ ಮಳೆ ಪೂರಕವಾಗಿದೆ. ತಾಲೂಕಿನಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲವೆಂದು ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹಮ್ಮದ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts