More

    ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯ

    ಸಿರಗುಪ್ಪ: ಮಗು ಹುಟ್ಟಿದಾಗಿನಿಂದ ಎರಡು ವರ್ಷದವರೆಗೆ ಕಡ್ಡಾಯವಾಗಿ ತಾಯಿ ಹಾಲುಣಿಸಬೇಕು. ಇದರಿಂದ ಸ್ತನ ಕ್ಯಾನ್ಸರ್ ಬಾಧಿಸುವುದಿಲ್ಲ ಎಂದು ಡಾ.ಪ್ರಶಾಂತ್ ಕುಮಾರ್ ಹೇಳಿದರು.

    ವಿಶ್ವ ಕ್ಯಾನ್ಸರ್ ದಿನಾಚರಣೆ ನಿಮಿತ್ತ ನಗರಸಭೆ ಕಚೇರಿಯಲ್ಲಿ ಸೋಮವಾರ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಾಗೂ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರದ ಸ್ವಚ್ಛತೆ ಹೊಣೆಗಾರಿಕೆ ಹೊತ್ತಿರುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ದುಶ್ಚಟಕ್ಕೆ ದಾಸರಾಗದಿದ್ದರೆ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

    ದಂತ ವೈದ್ಯಾಧಿಕಾರಿ ಪವನ್ ವರ್ಮ ಮಾತನಾಡಿದರು. ನಗರಸಭೆಯ ವ್ಯವಸ್ಥಾಪಕ ಪ್ರಶಾಂತ್‌ಕುಮಾರ್, ಕಂದಾಯ ಅಧಿಕಾರಿ ಅನಂತ್, ಹಿರಿಯ ಆರೋಗ್ಯ ನಿರೀಕ್ಷಕ ರಂಗಸ್ವಾಮಿ, ಎನ್‌ಸಿಡಿ ಆಪ್ತ ಸಮಾಲೋಚಕ ಮಲ್ಲೇಶ, ಪ್ರಯೋಗಾಲಯ ತಜ್ಞ ಶಿವಕುಮಾರ್, ಶುಶ್ರೂಷಕಿ ನಿರ್ಮಲಾ ಇತರರಿದ್ದರು.

    ಗುಲಾಬಿ ಹೂ ನೀಡಿ ಜಾಗೃತಿ: ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ತಂಬಾಕು ಸೇವನೆ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಸಲಾಯಿತು.

    ತಂಬಾಕಿನಿಂದ ಆಗುವ ದುಷ್ಪರಿಣಾಮ ಹಾಗೂ ಮಾರಾಟ ನಿಷೇಧ, ದಂಡ ಮತ್ತು ಕಾನೂನಿನ ಅನ್ವಯ ಶಿಕ್ಷೆ ಹಾಗೂ ದವಡೆ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭ ಕಂಠದ ಕ್ಯಾನ್ಸರ್ ಕುರಿತು ಟಿಎಚ್‌ಒ ಡಾ.ಈರಣ್ಣ ತಿಳಿಸಿದರು. ಸಾರ್ವಜನಿಕರು, ಅಂಗಡಿ ಮಾಲೀಕರಿಗೆ ಗುಲಾಬಿ ಹೂ ಹಾಗೂ ಪೆನ್ನು ಕೊಡುವ ಮೂಲಕ ಜಾಗೃತಿ ಮೂಡಿಸಿದರು. ಡಾ.ಗುರುನಾಥ್, ಬಿಪಿಎಂ ಪ್ರಹ್ಲಾದ್, ಬಿಎಚ್‌ಇಒ ಮೊಹಮ್ಮದ್ ಕಾಸಿಂ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts