More

    ಕೆರೆಗಳ ತುಂಬಿಸಲು ಒಟ್ಟಾಗಿ ಕಾರ್ಯನಿರ್ವಹಿಸಲು ಸೂಚಿಸಿದ ಶಾಸಕ ಎಂ.ಎಸ್.ಸೋಮಲಿಂಗಪ್ಪ

    ಸಿರಗುಪ್ಪ: ತುಂಗಭದ್ರಾ ಜಲಾಶಯದಿಂದ ಎಲ್‌ಎಲ್ ಕಾಲುವೆಗೆ ನೀರನ್ನು ಬಿಟ್ಟಿದ್ದು, ಸಂಬಂಧಿಸಿದ ಅಧಿಕಾರಿಗಳು ಖಾಲಿಯಾಗಿರುವ ಎಲ್ಲ ಕುಡಿವ ನೀರಿನ ಕೆರೆಗಳನ್ನು ತುಂಬಿಸಬೇಕು. ಅಲ್ಲದೆ ಸಿರಗುಪ್ಪದ ಹೊಸ ಕೆರೆಗೂ ನೀರು ಹರಿಸಲು ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.

    ನಗರದ ತಾಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮಾರ್ಚ್‌ನಲ್ಲಿ ತುಂಬಿಸಲಾಗಿದ್ದ ಬಹುತೇಕ ಕೆರೆಗಳಲ್ಲಿ ನೀರು ಖಾಲಿಯಾಗಿವೆ. ಆದ್ದರಿಂದ ಖಾಲಿಯಾಗಿರುವ ಎಲ್ಲ ಕೆರೆಗಳಿಗೆ ಕಾಲುವೆಯಿಂದ ನೀರನ್ನು ಹರಿಸಬೇಕು. ಅಲ್ಲದೆ ರೈತರ ಜಮೀನುಗಳಿಗೂ ಸಮಪರ್ಕ ನೀರು ಹರಿಸಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಅಕ್ರಮವಾಗಿ ನೀರನ್ನು ಹರಿಸಿಕೊಳ್ಳುವವರಿಗೆ ಕಡಿವಾಣ ಹಾಕಬೇಕು. ಬಾಗೇವಾಡಿ ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿದು ಬರುವಂತೆ ನೋಡಿಕೊಂಡರೆ ಮಾತ್ರ ಕೆರೆಗಳನ್ನು ತುಂಬಿಸಲು ಸಾಧ್ಯ. ನೀರಾವರಿ ಇಲಾಖೆ ಮತ್ತು ಪೊಲೀಸರು ಈ ಕಾಲುವೆ ಮೇಲೆ ನಿರಂತರ ಗಸ್ತು ತಿರುಗಬೇಕು, ಅಧಿಕಾರಿಗಳು ನೆಪ ಹೇಳದೆ ತಮಗೆ ನಿರ್ವಹಿಸಿದ ಕಾರ್ಯವನ್ನು ಚಾಚು ತಪ್ಪದೆ ಮಾಡಬೇಕೆಂದು ಸೂಚಿಸಿದರು.

    ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ತಾ.ಪಂ.ಇ.ಒ. ಎಂ.ಬಸಪ್ಪ, ಪೌರಾಯುಕ್ತ ಪ್ರೇಮ್‌ಚಾರ್ಲ್ಸ್, ಸಿ.ಪಿ.ಐ.ಕಾಳಿಕೃಷ್ಣ, ಪ.ಪಂಚಾಯಿತಿ ಮುಖ್ಯಾಧಿಕಾರಿ ಈರಣ್ಣ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts