More

    video/ ರೈತನ 700 ಅಡಕೆ, ತೆಂಗು, ಬಾಳೆ ಗಿಡಗಳನ್ನು ರಾತ್ರೋರಾತ್ರಿ ಕತ್ತರಿಸಿದ ದುಷ್ಕರ್ಮಿಗಳು!

    ಕುಣಿಗಲ್: ಕಾಫಿ-ಟೀ ಮಾರುತ್ತಾ ಕೂಡಿಟ್ಟ ಹಣದಲ್ಲಿ ಕೃಷಿ ಮಾಡುತ್ತಿದ್ದ ರೈತರೊಬ್ಬರು ತನ್ನ ತೋಟದಲ್ಲಿ ನಳನಳಿಸುತ್ತಿದ್ದ ಅಡಿಕೆ-ತೆಂಗು-ಬಾಳೆ ಗಿಡಗಳನ್ನು ಕಂಡು ಖುಷಿಯಿಂದಲೇ ರಾತ್ರಿ ಮನೆಗೆ ಹೋಗಿದ್ದರು. ಬೆಳಗ್ಗೆ ಎದ್ದು ತೋಟಕ್ಕೆ ಬಂದ ರೈತನು ಎದೆಬಡಿದುಕೊಂಡು ಅಳುತ್ತಿದ್ದ ದೃಶ್ಯ ಎಂತಹವರಿಗೂ ಮನಕಲಕುವಂತಿತ್ತು.

    ಕುಣಿಗಲ್ ತಾಲೂಕಿನ ಹೇರುರೂ ಗ್ರಾಮದ ನಾಗರಾಜು ಅವರು ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು 700 ಅಡಕೆ, ತೆಂಗಿನ ಸಸಿಗಳು ಮತ್ತು ಬಾಳೆಗಿಡಗಳು ಬುಡಕ್ಕೆ ಕತ್ತಿಯ ಪೆಟ್ಟು ತಿಂದು ಎರಡ್ಮೂರು ಭಾಗವಾಗಿ ತುಂಡಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಡಿಕೆ, ಬಾಳೆ, ತೆಂಗು ಮೂರ್ನಾಲ್ಕು ಅಡಿ ಎತ್ತರ ಬೆಳೆದಿದ್ದವು. ಆದರೆ, ಮಂಗಳವಾರ ತಡರಾತ್ರಿ ಯಾರೋ ದುಷ್ಕರ್ಮಿಗಳು ಎಲ್ಲ ಗಿಡಗಳನ್ನೂ ಕತ್ತರಿಸಿ ಹಾಕಿದ್ದಾರೆ.

    ಇದನ್ನೂ ಓದಿರಿ ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

    20 ಗುಂಟೆ ಜಮೀನಿನ ವಿಚಾರವಾಗಿ ನಾಗರಾಜು ಅವರ ಚಿಕ್ಕಪ್ಪನ ಮಗ ಸಂಜೀವ ಆಗಾಗ ಜಗಳ ತೆಗೆದು ತೊಂದರೆ ಮಾಡುತ್ತಿದ್ದ. ಆತನೇ ಈ video/ ರೈತನ 700 ಅಡಕೆ, ತೆಂಗು, ಬಾಳೆ ಗಿಡಗಳನ್ನು ರಾತ್ರೋರಾತ್ರಿ ಕತ್ತರಿಸಿದ ದುಷ್ಕರ್ಮಿಗಳು!ಕೃತ್ಯವೆಸಗಿದ್ದಾನೆ ಎಂದು ನಾಗರಾಜು ಕುಟುಂಬಸ್ಥರು ಆರೋಪಿಸಿದ್ದಾರೆ.

    ವಿವಾದ ಏನೇ ಆಗಿರಲಿ, ಫಸಲು, ಗಿಡ-ಮರಗಳನ್ನು ಅಮಾನವೀಯವಾಗಿ ಕತ್ತರಿಸಿ ಹಾಕುವುದು ಹೀನ ಕೃತ್ಯ. ಇಂತಹ ಪಾಪದ ಕೆಲಸ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡು ಬಂತು.

    ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಅಡಿಕೆ ಗಿಡಗಳು ಇನ್ನೆರಡು ವರ್ಷದಲ್ಲಿ ಫಸಲು ಬಿಡುವ ಹಂತಕ್ಕೆ ಬದ್ದಿದ್ದವು. ಎಲ್ಲವೂ ಮಣ್ಣುಪಾಲಾಗಿದೆ. ಸಂಕಟ ತೆಡೆಯಲು ಆಗುತ್ತಿಲ್ಲ ಎಂದು ಎದೆ ಬಡಿದುಕೊಂಡು ರೈತ ನಾಗರಾಜ ಗೋಳಾಡುತ್ತಿದ್ದ ದೃಶ್ಯ ಕರಳುಹಿಂಡುವಂತಿತ್ತು. ಕುಣಿಗಲ್ ಪೊಲೀಸ್​ ಠಾಣೆಯಲ್ಲಿ ಸಂತ್ರಸ್ತ ರೈತ ದೂರು ನೀಡಿದ್ದಾರೆ.

    700 ಅಡಕೆ, ತೆಂಗು, ಬಾಳೆ ಗಿಡಗಳಿಗೆ ಕತ್ಸತಿ ಬೀಸಿದ ಕಿಡಿಗೇಡಿಗಳು!

    700 ಅಡಕೆ, ತೆಂಗು, ಬಾಳೆ ಗಿಡಗಳಿಗೆ ಕತ್ಸತಿ ಬೀಸಿದ ಕಿಡಿಗೇಡಿಗಳು!ಇಲ್ನೋಡು ಯಾರೋ ದುಷ್ಕರ್ಮಿಗಳು ಮಂಗಳವಾರ ತಡರಾತ್ರಿ ಅಡಿಕೆ, ತೆಂಗು, ಬಾಳೆ ಗಿಡಗಳನ್ನು ಹೇಗೆ ಕತ್ತರಿಸಿ ಹಾಕಿದ್ದಾರೆಂದು. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೇರುರೂ ಗ್ರಾಮದ ನಾಗರಾಜು ಅವರು 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು 700 ಅಡಕೆ, ತೆಂಗಿನ ಸಸಿ, ಬಾಳೆಗಿಡಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದು, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. #Areca #Coconut #BananaPlants #Kunigal

    Posted by Vijayavani on Wednesday, August 19, 2020

    video/ ಶಾಸಕ ಡಾ.ರಂಗನಾಥ್​ರಿಂದ ಪ್ಲಾಸ್ಮಾ ದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts