More

    ಒಂದೇ ಡೋಸ್​ ಬೇಕಾಗುವ ಹೊಸ ಕರೊನಾ ಲಸಿಕೆಗೆ ಡಬ್ಲ್ಯೂಹೆಚ್​ಒ ಅನುಮೋದನೆ

    ಜಿನೀವ : ಶೀಘ್ರದಲ್ಲೇ ಒಂದೇ ಡೋಸ್​ ತೆಗೆದುಕೊಳ್ಳಬೇಕಾದ ಕರೊನಾ ಲಸಿಕೆಯೊಂದು ಜಗತ್ತಿನ ವಿವಿಧ ರಾಷ್ಟ್ರಗಳ ಬಳಕೆಗೆ ಲಭ್ಯವಾಗಲಿದೆ. ಹೌದು, ಒಂದೇ ಇಂಜೆಕ್ಷನ್​ನ ಅಗತ್ಯ ಬೀಳುವ ಮತ್ತು ಶೇಖರಿಸಿಡಲೂ ಸುಲಭವಾದ ಜಾನ್ಸನ್ ಅಂಡ್​ ಜಾನ್ಸನ್​(ಜೆಅಂಡ್​ಜೆ) ಕಂಪೆನಿಯ ಕರೊನಾ ಲಸಿಕೆಗೆ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್​ಒ) ತುರ್ತು ಬಳಕೆಯ ಅನುಮೋದನೆ ನೀಡಿದೆ.

    ಫೈಜರ್-ಬಯೋಟೆಕ್ ಮತ್ತು ಆಸ್ಟ್ರಜೆನೆಕಾ ಕಂಪೆನಿಗಳ ನಂತರ ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲ ಸಿಕ್ಕಿರುವ ಮೂರನೇ ಕರೊನಾ ಲಸಿಕೆ ಇದಾಗಿದೆ. ಕೋವ್ಯಾಕ್ಸ್​ ಕಾರ್ಯಕ್ರಮದಡಿ ಉತ್ಪಾದನೆ ಮಾಡಿ ವಿವಿಧ ದೇಶಗಳಿಗೆ ಪೂರೈಸುವ ಉದ್ದೇಶವಿರುವ ಈ ಲಸಿಕೆಗೆ ಗುರುವಾರ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯ ಪರವಾನಗಿ ಸಿಕ್ಕಿತ್ತು. ಅದರ ಬೆನ್ನಲ್ಲೇ ಡಬ್ಲ್ಯೂಹೆಚ್​ಒ ಇದನ್ನು ಎಮರ್ಜೆನ್ಸಿ ಲಿಸ್ಟಿಂಗ್​​ಗೆ ಸೇರಿಸಿದೆ. ಇದೀಗ ಉತ್ಪಾದಕ ಕಂಪೆನಿಗಳು ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಕುರಿತಾದ ಡೇಟಾವನ್ನು ತಯಾರಿಸಿ ಅದಕ್ಕೆ ಪೂರ್ಣ ಪರವಾನಗಿಯನ್ನು ಪಡೆಯಬಹುದಾಗಿದೆ.

    ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆಗಾಗಿ 25 ದೇಶಗಳು ಕ್ಯೂನಲ್ಲಿವೆ

    ಡಬ್ಲ್ಯೂಹೆಚ್​ಒ ಡೈರೆಕ್ಟರ್-ಜನರಲ್ ಟೆಡ್ರೋಸ್ ಅಧನಾಂ ಘೆಬ್ರೆಯೇಸಸ್ ಅವರು ನೀಡಿರುವ ಹೇಳಿಕೆಯಲ್ಲಿ, “ಕೋವಿಡ್​-19 ವಿರುದ್ಧದ ಪ್ರತಿಯೊಂದು ಹೊಸ ಸುರಕ್ಷಿತ ಮತ್ತು ಪರಿಣಾಮಕಾರಿ ಸಾಧನವು ಮಹಾಮಾರಿಯನ್ನು ನಿಯಂತ್ರಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ತುರ್ತು ಬಳಕೆ ಅನುಮೋದನೆಯು ಕೋವಾಕ್ಸ್​ನಡಿ ಲಸಿಕೆಯನ್ನು ಪಡೆದು ವಿತರಿಸಲು ಹಸಿರು ನಿಶಾನೆಯಾಗಿದೆ” ಎಂದಿದ್ದಾರೆ.

    “ಶೇಖರಣೆಗೆ ತೀರಾ ಕಡಿಮೆ ಉಷ್ಣಾಂಶದ ಅಗತ್ಯವಿಲ್ಲದಿರುವುದು ಉತ್ತಮ ಅಂಶವಾಗಿದೆ. ಗವಿ ವಾಕ್ಸಿನ್ ಅಲೆಯನ್ಸ್​ನೊಂದಿಗೆ ನಡೆಯುತ್ತಿರುವ ಕೋವಾಕ್ಸ್​ ಕಾರ್ಯಕ್ರಮದಡಿ ಜೆಅಂಡ್​ಜೆ ಲಸಿಕೆಯ 500 ಮಿಲಿಯನ್​ಗೂ ಹೆಚ್ಚು ಡೋಸ್​ಗಳನ್ನು ಪೂರೈಸುವ ಒಪ್ಪಂದವಾಗಿದ್ದು, ಜುಲೈ ವೇಳೆಗೆ ಉತ್ಪಾದನೆ ಪೂರೈಸಲಿದೆ” ಎಂದು ಡಬ್ಲ್ಯೂಹೆಚ್​ಒದ ಹಿರಿಯ ಸಲಹೆಗಾರ ಬ್ರೂಸ್ ಏಲ್ವಾರ್ಡ್ ಹೇಳಿದ್ದಾರೆ. 2021 ವರ್ಷಾಂತ್ಯದೊಳಗೆ ಈ ಲಸಿಕೆಯ ಒಂದು ಬಿಲಿಯನ್ ಡೋಸ್​ಗಳನ್ನು ಜಗತ್ತಿನ ವಿವಿಧ ದೇಶಗಳಿಗೆ ಒದಗಿಸುವ ಉದ್ದೇಶವಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    12 ದಿನಗಳಲ್ಲಿ 7,166 ಮಂದಿಗೆ ಕೋವಿಡ್ ಸೋಂಕು! ರಾಜ್ಯದಲ್ಲಿ ಕರೊನಾ ಮತ್ತೆ ಏರುಮುಖ| 833 ಪ್ರಕರಣ ದೃಢ | 32 ಜನರಲ್ಲಿ ರೂಪಾಂತರ ವೈರಸ್

    ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts