More

    ಜೂಮ್ ವಿಡಿಯೋ ಕಾಲ್​ನಲ್ಲೇ ಅಪರಾಧಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!

    ಸಿಂಗಾಪುರ: ಅಕ್ರಮವಾಗಿ ಹೆರಾಯಿನ್ ವಹಿವಾಟು ನಡೆಸುತ್ತಿದ್ದ ಮಲೇಷ್ಯಾ ಮೂಲದ ಅಪರಾಧಿಯೊಬ್ಬನಿಗೆ ಸಿಂಗಾಪುರದ ಸುಪ್ರೀಂ ಕೋರ್ಟ್‌ ವಿಡಿಯೋ ಕಾಲ್​ ಮೂಲಕವೇ ಮರಣದಂಡನೆ ವಿಧಿಸಿದೆ. ಈ ಕ್ರಮವನ್ನು ಕೆಲ ಸಂಘಟನೆಗಳು ಟೀಕಿಸಿವೆಯಾದರೂ ಅಪರಾಧಿ ಮಾತ್ರ ವಿಡಿಯೋ ಕಾನ್ಫರೆನ್ಸ್​ನಲ್ಲಿ ತೀರ್ಪು ಪ್ರಕಟಿಸಿದ ಕ್ರಮವನ್ನು ಒಪ್ಪಿಕೊಂಡಿದ್ದಾನೆ.

    ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಜೂಮ್​ ಆ್ಯಪ್​ ಅಳವಡಿಸಿಕೊಂಡು ​ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಏಪ್ರಿಲ್​ನಿಂದ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್, 2011ರಲ್ಲಿ ದಾಖಲಾಗಿದ್ದ ಮಾದಕವಸ್ತು ಹೆರಾಯಿನ್​ ವಹಿವಾಟು ಪ್ರಕರಣದ ತೀರ್ಪನ್ನು ಕಳೆದ ಶುಕ್ರವಾರ ಪ್ರಕಟಿಸಿದೆ. ಸಿಂಗಾಪುರದಲ್ಲಿ ರಿಮೋಟ್ ವಿಚಾರಣೆಯಿಂದ ಮರಣದಂಡನೆ ವಿಧಿಸಲ್ಪಟ್ಟ ಮೊದಲ ಕ್ರಿಮಿನಲ್ ಪ್ರಕರಣ ಇದಾಗಿದೆ.

    ಇದನ್ನೂ ಓದಿರಿ ಅಪ್ಪ ಸತ್ತು ತಿಂಗಳಾಗಿಲ್ಲ; ರಣಬೀರ್​ ಹೀಗಾ ಮಾಡೋದು!?

    ಮರಣದಂಡನೆಗೆ ಗುರಿಯಾದ ವ್ಯಕ್ತಿ 37 ವರ್ಷದ ಪುನಿಥಾನ್ ಜೆನಾಸನ್. ಮಲೇಷ್ಯಾ ಮೂಲದ ಈತನ ವಿರುದ್ಧ 2011ರಲ್ಲಿ ಅಕ್ರಮವಾಗಿ ಹೆರಾಯಿನ್​ ವಹಿವಾಟು ನಡೆಸುತ್ತಿದ್ದ ಆರೋಪದಡಿ ಸಿಂಗಾಪುರದಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಯ ಮುಂದುವರಿದ ಹಂತವನ್ನು ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ನಡೆಸಿದ ಇಲ್ಲಿನ ಸುಪ್ರೀಂಕೋರ್ಟ್​ ನ್ಯಾಯಾಧೀಶರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪುನಿಥಾನ್​ಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಪೀಟರ್ ಫರ್ನಾಂಡೊ, ನನ್ನ ಕಕ್ಷಿದಾರ ನ್ಯಾಯಾಧೀಶರ ತೀರ್ಪನ್ನು ಜೂಮ್ ಕರೆಯಲ್ಲಿ ಸ್ವೀಕರಿಸಿದ್ದಾರೆ. ಮೇಲ್ಮನವಿ ಸಲ್ಲಿಸಲು ಯೋಚಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿರಿ ಮಾಸ್ಕ್​ ಧರಿಸದವರಿಗೆ ರೈಲ್ವೆ ಟ್ರ್ಯಾಕ್ ಬಳಿ ಉರುಳುವ ಶಿಕ್ಷೆ !

    ಮರಣ ದಂಡನೆ ವಿಧಿಸುವಂತಹ ಪ್ರಕರಣಗಳಿಗೆ ಜೂಮ್​ ಆ್ಯಪ್​ ಬಳಸಿದ ಕ್ರಮವನ್ನು ಮಾನವ ಹಕ್ಕುಗಳ ಸಂಘಟನೆಗಳು ಟೀಕಿಸಿವೆ. ಕ್ಯಾಲಿಫೋರ್ನಿಯಾ ಮೂಲದ ಟೆಕ್ ಸಂಸ್ಥೆಯ ಪ್ರತಿನಿಧಿಗಳು ಕೂಡ ಸಿಂಗಾಪುರ ನ್ಯಾಯಾಲಯ ವಿಡಿಯೋ ಕಾಲ್​ ಬಳಸಿ ತೀರ್ಪು ನೀಡಿದ್ದನ್ನು ಟೀಕಿಸಿದ್ದಾರೆ.

    ಡ್ರಗ್ಸ್​ ಮಾಫಿಯಾಕ್ಕೆ ಕಡಿವಾಣ ಹಾಕಲು ಕಠಿಣ ಶಿಕ್ಷೆ ವಿಧಿಸುತ್ತಿರುವ ಇಲ್ಲಿನ ನ್ಯಾಯಾಲಯ ಕಳೆದ ದಶಕಗಳಲ್ಲಿ ವಿದೇಶಿಯರನ್ನೂ ಒಳಗೊಂಡಂತೆ ನೂರಾರು ಅಪರಾಧಿಗಳನ್ನು ಗಲ್ಲಿಗೇರಿಸಿದೆ ಎನ್ನಲಾಗಿದೆ.

    ಇದನ್ನೂ ಓದಿರಿ ‘ಕೆಜಿಎಫ್​ 2’ ಸೆಟಲೈಟ್​ ಹಕ್ಕು ಮಾರಾಟದ ಬಗ್ಗೆ ಹರಿದಾಡ್ತಿರೋ ಈ ಸುದ್ದಿ ನಿಜಾನಾ?

    ಸಿಂಗಾಪುರದಲ್ಲಿ ಜಾರಿಯಲ್ಲಿರುವ ಮರಣದಂಡನೆ ಶಿಕ್ಷೆ ಅತ್ಯಂತ ಕ್ರೂರ ಮತ್ತು ಅಮಾನವೀಯ. ಈಗ ಜೂಮ್​ ವಿಡಿಯೋ ಕಾಲ್​ ಬಳಸಿಯೇ ಅಪರಾಧಿಗೆ ಮರಣದಂಡನೆ ವಿಧಿಸಲಾಗಿದೆ. ಇದನ್ನು ಗಮನಿಸಿದರೆ ಈ ದೇಶದಲ್ಲಿ ಇಂತಹ ತೀರ್ಪಿನ ಪ್ರಮಾಣ ಹೆಚ್ಚಲಿದೆ ಎಂದು ಮಾನವ ಹಕ್ಕು ವೀಕ್ಷಣೆಯ ಏಷ್ಯಾ ವಿಭಾಗದ ಉಪ ನಿರ್ದೇಶಕ ಫಿಲ್ ರಾಬರ್ಟ್‌ಸನ್ ಆತಂಕ ವ್ಯಕ್ತಪಡಿಸಿದ್ದಾರೆ. ನೈಜೀರಿಯಾದಲ್ಲೂ ಇದೇ ರೀತಿಯ ಪ್ರಕರಣವೊಂದರಲ್ಲಿ ಜೂಮ್ ಮೂಲಕ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಎಚ್‌ಆರ್‌ಡಬ್ಲ್ಯು ಟೀಕಿಸಿದೆ.

    ಇದನ್ನೂ ಓದಿರಿ ಸರ್ಕಾರಿ ಅಧಿಕಾರಿಗಳಿಂದಲೇ ಸರ್ಕಾರದ ಆದೇಶ ಉಲ್ಲಂಘನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts