More

    ಪೆಟ್ರೋಲ್, ಡಿಸೇಲ್ ದರ ಕಡಿತಗೊಳಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ಮನವಿ

    ಸಿಂಧನೂರು: ಜನರ ಜೀವನದ ಮೇಲೆ ಹೊರೆಯಾಗುತ್ತಿರುವ ಪೆಟ್ರೋಲ್, ಡಿಸೇಲ್ ದರ ಕಡಿತಗೊಳಿಸಲು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ತಹಸಿಲ್ ಕಚೇರಿ ಶಿರಸ್ತೇದಾರ ಉಮೇಶ ರಾಠೋಡ್‌ರಿಗೆ ಗುರುವಾರ ಮನವಿ ಸಲ್ಲಿಸಿತು.

    2014ರ ಮುಂಚೆ ಅಧಿಕಾರಕ್ಕೆ ಬಂದರೆ ಅಗತ್ಯ ವಸ್ತುಗಳ ಬೆಲೆ ಕಡಿತಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದಿರಿ, ಆದರೆ ಈಗ ಪೆಟ್ರೋಲ್, ಡಿಸೇಲ್ ಬೆಲೆ ದಿನೇ ದಿನೆ ಏರುಗತಿಯಲ್ಲಿ ಸಾಗಿದೆ. ಈ ಮುಂಚೆ ಇದ್ದ ತೈಲಬೆಲೆ ನಿಯಂತ್ರಣ ಮಂಡಳಿಯನ್ನು ರದ್ದುಗೊಳಿಸಿ ತೈಲ ಮಾರಾಟ ಮಾಡುವ ಕಂಪನಿಗಳಿಗೆ ಲಾಭ ಮಾಡಿಕೊಡುವ ರೀತಿಯಲ್ಲಿ ಯೋಜನೆ ರೂಪಿಸಿದ ಪರಿಣಾಮ ಪೆಟ್ರೋಲ್, ಡಿಸೇಲ್ ಬೆಲೆ ಭಾರಿ ಏರಿಕೆಯಾಗಿದೆ. ಕೇವಲ ವಾಹನ ಮಾಲೀಕರಿಗೆ ಹೊರೆಯಾಗದೆ ದೇಶದ ಜನಸಾಮಾನ್ಯರ ಮೇಲೆ ಹೊರೆಯಾಗುತ್ತಿದೆ. ಕೂಡಲೇ ದರ ಕಡಿತಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಪಕ್ಷದ ಪದಾಧಿಕಾರಿಗಳಾದ ಶರಣಬಸವ, ಗೇಸುದರಾಜ, ಅಳ್ಳಪ್ಪ, ಹನುಮಂತಪ್ಪ ಮ್ಯಾಗಳಮನಿ, ದೇವಪ್ಪ ತುರ್ವಿಹಾಳ, ಎಸ್.ದೇವೆಂದ್ರಗೌಡ, ಶರಣಮ್ಮ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts