More

    ನೀತಿ ಆಯೋಗದ ಸುಳ್ಳು ವರದಿಯ ಪ್ರಸ್ತಾಪ

    ಸಿಂಧನೂರು: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಜನ ವಿರೋಧಿಯಾಗಿದೆ ಎಂದು ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಆರೋಪಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಸಾವಿನ ಲೆಕ್ಕದಲ್ಲಿ 75 ಸಾವಿರ ವ್ಯತ್ಯಾಸ! ಸುಳ್ಳು ವರದಿ ಕೊಟ್ಟಿತಾ ಬಿಹಾರದ ಸರ್ಕಾರ?

    ಹಸಿವಿನ ಸೂಚ್ಯಂಕದಲ್ಲಿ ಭಾರತ 107 ನೇ ಸ್ಥಾನದಲ್ಲಿದೆ. ಆದರೆ, ಸರ್ಕಾರದ ನೀತಿ ಆಯೋಗ 10 ವರ್ಷಗಳಲ್ಲಿ ಶೇ.25 ಬಡತನ ಕಡಿಮೆಯಾಗಿದೆ ಎಂದು ಸುಳ್ಳಿನಿಂದ ಕೂಡಿದ ವರದಿ ಕೊಟ್ಟಿದೆ. ಈ ಸುಳ್ಳನ್ನೇ ಹಣಕಾಸು ಮಂತ್ರಿ ಬಜೆಟ್‌ನಲ್ಲಿ ಓದಿದ್ದಾರೆ.

    ಕಾರ್ಪೋರೇಟ್ ಕಂಪನಿಗಳಿಗೆ ತೆರಿಗೆ ಹೆಚ್ಚು ಮಾಡದೆ ಹಳೆಯ ತೆರಿಗೆಯನ್ನು ಮುಂದುವರಿಸಿರುವುದು ಸರಿಯಲ್ಲ. ಜನರ ತೆರಿಗೆ ಹಣದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಭೂಮಿ, ನೀರು, ರಸ್ತೆ ವಿದ್ಯುತ್ ಹಾಗೂ ಇತರ ಸೌಲಭ್ಯಗಳನ್ನು ಕೊಡುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

    ರೈತರಿಗೆ, ಕಾರ್ಮಿಕರಿಗೆ ಬಡವರಿಗೆ ವಿಶೇಷ ಯೋಜನೆಗಳನ್ನು ಘೋಷಿಸಿಲ್ಲ. ತೀವ್ರ ಬರಗಾಲವನ್ನು ಎದುರಿಸುತ್ತಿರುವ ಜನರಿಗೆ ವಿಶೇಷ ಕೊಡುಗೆ ನೀಡಬಹುದೆಂದು ನಿರೀಕ್ಷಿಸಲಾಗಿತ್ತು.

    ಉದ್ಯೋಗ ಖಾತ್ರಿ ಯೋಜನೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಸಾಮಾನ್ಯ ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಡಿ.ಎಚ್.ಪೂಜಾರ್ ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts