More

    ಕರೊನಾ ಸಾವಿನ ಲೆಕ್ಕದಲ್ಲಿ 75 ಸಾವಿರ ವ್ಯತ್ಯಾಸ! ಸುಳ್ಳು ವರದಿ ಕೊಟ್ಟಿತಾ ಬಿಹಾರದ ಸರ್ಕಾರ?

    ಪಟನಾ: ಕರೊನಾ ಎರಡನೇ ಅಲೆಯಲ್ಲಿ ಮೃತರಾಗುತ್ತಿರುವವರ ಸಂಖ್ಯೆ ಕರೊನಾ ಮೊದಲನೇ ಅಲೆಗಿಂತ ಹೆಚ್ಚಿದೆ. ಅದೇ ರೀತಿ ಎಲ್ಲ ರಾಜ್ಯಗಳಲ್ಲೂ ಈ ವರ್ಷ ಕರೊನಾದಿಂದಾಗಿ ಸತ್ತವರ ಸಂಖ್ಯೆ ಹೆಚ್ಚಾಗಿಯೇ ವರದಿಯಾಗಿದೆ. ಆದರೆ ಬಿಹಾರದಲ್ಲಿ ಮಾತ್ರ ಈ ಸಂಖ್ಯೆ ದೊಡ್ಡ ಅನುಮಾನಗಳನ್ನು ಸೃಷ್ಟಿ ಮಾಡಿದೆ.

    2019ರ ಜನವರಿಯಿಂದ ಮೇ ತಿಂಗಳಿನವರೆಗೆ ಬಿಹಾರದಲ್ಲಿ 1.3 ಲಕ್ಷ ಜನರು ಸಾವನ್ನಪ್ಪಿದ್ದರು. ಆದರೆ ಈ ವರ್ಷ ಆ ಸಂಖ್ಯೆ 2.2 ಲಕ್ಷಕ್ಕೆ ಏರಿಕೆಯಾಗಿದೆ. ಅದಲ್ಲೂ ಹೆಚ್ಚಿನ ಮಂದಿ ಮೇ ತಿಂಗಳಲ್ಲೇ ಕೊನೆಯುಸಿರೆಳೆದಿದ್ದಾರೆ. ಕರೊನಾ ಹೆಚ್ಚಿದ್ದ ಸಮಯದಲ್ಲೇ ಹೆಚ್ಚಿನ ಸಾವು ಸಂಭವಿಸಿದ್ದರೂ ಅದ್ಯಾವುದನ್ನೂ ಕರೊನಾ ಸಾವೆಂದು ಪರಿಗಣನೆ ಮಾಡಲಾಗಿಲ್ಲ. ಈ ಅವಧಿಯಲ್ಲಿ ಕೇವಲ 7,717 ಮಂದಿ ಕರೊನಾಕ್ಕೆ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ವರದಿ ಮಾಡಿದೆ. ಅದಾದ ನಂತರ ಮತ್ತೆ ವರದಿ ಪರಿಷ್ಕರಿಸಿದ 3,951 ಸಾವನ್ನು ವರದಿಗೆ ಸೇರಿಸಿದೆ. ಆದರೂ ಇನ್ನುಳಿದ ಸಾವುಗಳ ಕಾರಣವನ್ನು ಮಾತ್ರ ವಿವರಿಸಲಾಗಿಲ್ಲ. 75 ಸಾವಿರಕ್ಕೂ ಅಧೀಕ ಸಾವಿಗೆ ವಿವರಣೆ ಸಿಕ್ಕಿಲ್ಲ.

    ಬಿಹಾರ ಈ ರೀತಿ ವರದಿಯಲ್ಲಿ ಸರಿಯಾದ ಮಾಹಿತಿ ನೀಡದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ರಾಜ್ಯ ಕರೊನಾ ನಿರ್ವಹಣೆಯಲ್ಲಿ ಎಡವಿದ್ದು, ಅದನ್ನು ಮುಚ್ಚಿಡಲು ಸುಳ್ಳು ವರದಿ ನೀಡಿದೆಯೇ ಎನ್ನುವ ಚರ್ಚೆ ಆರಂಭವಾಗಿದೆ. (ಏಜೆನ್ಸೀಸ್)

    ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

    ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts